ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ರಾಷ್ಟ್ರೀಯ ರೈತ ದಿನ ಆಚರಣೆ

ಉಡುಪಿ: ರಾಷ್ಟ್ರೀಯ ರೈತರ ದಿನ ಅಂಗವಾಗಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ರೈತರಾದ ರಾಮ ಕೃಷ್ಣ ಶರ್ಮ ಬಂಟಕಲ್,ರಘುಪತಿ ರಾವ್ ಮಾವಿನಕಾಡು, ಸತೀಶ್ ಹೆಗ್ಡೆ ಅಮಾಸೆಬೈಲ್, ಹಾಜಿ ಅಲಿಯಬ್ಬ ಉಚ್ಚಿಲ, ಪ್ರೇಮ ಪೂಜಾರಿ ಕುಂಭಾಷಿ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಬಂದ ಉಡುಪಿ ತಾಲೂಕು ಕೃಷಿ ಇಲಾಖೆ ಉಪ ನಿರ್ದೇಶಕರಾದ ಮೋಹನ್ ರಾಜ್ ರವರು ಮಾತನಾಡಿ ಸಂಸ್ಥೆಯಲ್ಲಿ ರೈತರನ್ನು ಸನ್ಮಾನಿಸಿ ಅವರನ್ನು ಗುರುತಿಸಿದ ಕೆಲಸವನ್ನು ಪ್ರಶಂಶಿಸಿದರು.

      ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುರೇಶ್ ನಾಯಕ್ ಮಾತನಾಡಿ ರೈತರಿಗೆ ಈ ಸಂಸ್ಥೆಯವರು ಯಾವ ರೀತಿ ಅವರ ಸಾಧನೆಯನ್ನು ಗುರುತಿಸಿದ್ದಾರೊ ಅದೇ ರೀತಿ ಸರಕಾರ ಕೂಡ ಗುರುತಿಸುವಂತಾಗಲಿ ಎಂದು ಅಭಿಪ್ರಾಯ ಪಟ್ಟರು.

  ಸಾಮಾಜಿಕ ಕಾರ್ಯಕರ್ತರಾದ ಅಲ್ವಿನ್ ಅಂದ್ರಾದೆ ಹಾಗೂ ದಯಾನಂದ ಶೆಟ್ಟಿ ರೈತ ದಿನದ ಶುಭವನ್ನು ಹಾರೈಸಿದರು.

ಕಾರ್ಯಕ್ರಮದಲ್ಲಿ ಶಾಖ ಮುಖ್ಯಸ್ಥರಾದ ಹಫೀಝ್ ರೆಹಮಾನ್,ಪುರಂದರ ತಿಂಗಳಾಯ,,ಮುಸ್ತಫಾ ಎ.ಕೆ ತಂಝೀಮ್ ಶಿರ್ವ ಉಪಸ್ಥಿತರಿದ್ದರು.

ರಾಘವೇಂದ್ರ ನಾಯಕ್ ಸ್ವಾಗತಿಸಿ ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply