ಫೆ. 24ರಂದು ಉಡುಪಿಗೆ ಡಾ ಸಂದೀಪ್ ಮಹಿಂದ್, ಅಜಿತ್ ಹನುಮಕ್ಕನವರ್

ಕೂರ್ಮ ವತಿಯಿಂದ ಅಜಾದ್ ಹಿಂದ್ ಶಿವಾಜಿಯಿಂದ ನೇತಾಜಿವರೆಗೆ ವಿಶೇಷ ಕಾರ್ಯಕ್ರಮ

ಉಡುಪಿ: ಉಡುಪಿಯ ಕೂರ್ಮ ಫೌಂಡೇಶನ್ ಆಶ್ರಯದಲ್ಲಿ ಫೆ.24ರಂದು ‘ಆಜಾದ್ ಹಿಂದ್ – ಶಿವಾಜಿಯಿಂದ ನೇತಾಜಿವರೆಗೆ’ ಕಾರ್ಯಕ್ರಮ ನಡೆಯಲಿದ್ದು, ಮಹಾರಾಷ್ಟ್ರದ ಪ್ರಖ್ಯಾತ ವಾಗಿ ಸಂದೀಪ್ ಮಹಿಂದ್ ಹಾಗೂ ರಾಷ್ಟ್ರೀಯವಾದಿ ಪತ್ರಕರ್ತರಾದ ಅಜಿತ್ ಹನುಮಕ್ಕನವ‌ರ್ ಅವರು ಭಾಗವಹಿಸಲಿದ್ದಾರೆ.

ಉಡುಪಿ ಅಜ್ಜರಕಾಡು ಪುರಭವನದಲ್ಲಿ ಅಂದು ಸಂಜೆ 5 ಗಂಟೆಯಿಂದ ಕಾರ್ಯಕ್ರಮ ನಡೆಯಲಿದೆ. ಗಾಯಕ ರಜತ್ ಮಯ್ಯ ಮತ್ತು ತಂಡದಿಂದ ರಾಷ್ಟ್ರಗೀತೆಗಳು ಸ್ಮರಭಾರತಿ ಹಾಗೂ ಮಂಜರಿಚಂದ್ರ ಮತ್ತು ಕಲಾವಿದರಿಂದ ನೃತ್ಯರೂಪಕಗಳು ನಮೋ ನಮೋ ಭಾರತಾಂಬೆ ಕಾರ್ಯಕ್ರಮ ನಡೆಯಲಿದೆ. ಸುಮಾರು 1500 ಜನ ಸೇರುವ ನಿರೀಕ್ಷೆ ಇದೆ.

ಛತ್ರಪತಿ ಶಿವಾಜಿ ಕಂಡ ಹಿಂದವಿ ಸ್ವರಾಜ್ಯದ ಜಾಗೃತಿಗಾಗಿ ಬದುಕನ್ನೇ ಸಮರ್ಪಿಸಿದ ಕ್ರಾಂತಿಕಾರಿ ಸಂತ ಡಾ. ಸಂದೀಪ್ ಮಹಿಂದ್ ಗುರೂಜಿ, ಹಿರಿಯ ಪತ್ರಕರ್ತ ಅಜಿತ್ ಹನುಮನಕ್ಕನವರ್ ಪ್ರಧಾನ ಭಾಷಣ ಮಾಡಲಿದ್ದಾರೆ ಎಂದು ಕೂರ್ಮ ಫೌಂಡೇಶನ್ ನ ರ್ಪಕಟನೆ ತಿಳಿಸಿದೆ.

ಡಾ.ಸಂದೀಪ್ ಮಹಿಂದ್:– ಡಾ ಸಂದೀಪ್ ಮಹೀಂದ್ ಅವರನ್ನು ಮಹಾರಾಷ್ಟ್ರದ ಜನ ಗುರೂಜಿ ಎಂದು ಗೌರವಿಸುತ್ತಾರೆ ಇತಿಹಾಸಕಾರ ಬಾಬಾ ಸಾಹೇಬ್ ಪುರಂದರೆ ಅವರ ನಂತರ ಶಿವಾಜಿಯ ರಾಷ್ಟ್ರ, ಜಾಗೃತಿಯ ಕಾರ್ಯವನ್ನು ಭಾರತದಾದ್ಯಂತ ಪಸರಿಸುತ್ತಿರುವವರಲ್ಲಿ ಮಹೀಂದ್ ಮೊದಲಿಗರು. ಶಿವಾಜಿ ಮಹಾರಾಜರು ಓಡಾಡಿದ ಎಲ್ಲಾ ಪ್ರದೇಶಗಳನ್ನು ಬರಿಗಾಲಲ್ಲಿ ಸಂದರ್ಶಿಸಿ ಬಂದು ಅಲ್ಲಿನ ಚರಿತ್ರೆಗಳನ್ನು ದಾಖಲು ಮಾಡಿರುತ್ತಾರೆ.

ವುಣೆಯಿಂದ ಪಾಣಿ ಪತ್ ಯುದ್ಧ ಭೂಮಿಯವರೆಗೆ 1535km ದೂರವನ್ನು ಬೈಕು ಸೈಕಲ್ಲುಗಳ ಮೂಲಕ ಕ್ರಮಿಸಿ ಮರೆತು ಹೋದ ಮರಾಠರ ಮಹಾವೀರಗಾಥೆಯನ್ನು ಮತ್ತೆ ಹಸನು ಮಾಡಿದವರು ಸಂದೀಪ ಮಹಿಂದ್.

ಶಿವಾಜಿಯನ್ನು ನಖ ಶಿಖಾಂತ ದ್ವೇಷಿಸುವ ಕರ್ನಾಟಕದ ಪ್ರತ್ಯೇಕತಾವಾದಿಗಳಿಗೆ, “ಬಸರೂರನ್ನು ಪೋರ್ಚುಗೀಸರಿಂದ ಮುಕ್ತಗೊಳಿಸಿ ಸೋಮಶೇಖರ ನಾಯಕನಿಗೆ ಕೊಟ್ಟು ಹೋದವರು ಶಿವಾಜಿ” ಎಂಬ ಇತಿಹಾಸದ ಸತ್ಯವನ್ನು ದಾಖಲೆ ಸಮೇತ ತಿಳಿಸಿದವರು ಸಂದೀಪ್ ಮಹಿಂದ್. ಉತ್ತಮ ವಾಗಿಗಳಾಗಿರುವ ಇವರು ರಾಷ್ಟ್ರೀಯ ಏಕತೆಯ ಉಳಿವಿಗಾಗಿ ದುಡಿಯುತ್ತಿದ್ದಾರೆ.

ಅಜಿತ್ ಹನುಮಕ್ಕನವರ್:- ಕನ್ನಡದ ಜನಪ್ರಿಯ ಸುದ್ದಿ ವಾಹಿನಿಯ ಮುಖ್ಯಸ್ಥರು ಮತ್ತು ನಿರೂಪಕರಾಗಿ ಜನ ಮನ್ನಣೆ ಗಳಿಸಿರುವ ಇವರು. ತನ್ನ ವಿಭಿನ್ನ ಚರ್ಚಾ ಕಾರ್ಯಕ್ರಮಗಳ ಮೂಲಕ ಕರ್ನಾಟಕದ ತುಂಬ ಮನೆಮಾತಾಗಿರುತ್ತಾರೆ. ನಮ್ಮ ಕಾರ್ಯಕ್ರಮದಲ್ಲಿ ಇವರು ನೇತಾಜಿ ಮತ್ತು ಶಿವಾಜಿ ಅವರ ವ್ಯಕ್ತಿತ್ವದಲ್ಲಿರುವ ತುಲನಾತ್ಮಕ ವಿಚಾರಗಳನ್ನು ಮಂಡಿಸಲಿದ್ದಾರೆ.

ಕೂರ್ಮ ಫೌಂಡೇಶನ್ ಇದರ ಶ್ರೀಕಾಂತ್ ಶೆಟ್ಟಿ, ಅಜಯ್ ಪಿ.ಶೆಟ್ಟಿ, ಪ್ರವೀಣ್ ಯಕ್ಷಿಮಠ, ಸುಜಿತ್ ಶೆಟ್ಟಿ, ಸೂರಜ್ ಕಿದಿಯೂರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply