ಹಂಗಾರಕಟ್ಟೆ- ವಿದ್ಯಾರ್ಥಿಗಳಿಂದ ವಿಜ್ಞಾನ ಮಾದರಿ ತಯಾರಿಕೆ

ಕೋಟ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಗಾರಕಟ್ಟೆ ಇಲ್ಲಿ ಶಾಲಾ ಮಟ್ಟದ ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆಯನ್ನು ವಿಜ್ಞಾನ ಸಂಘದ ವತಿಯಿಂದ ಇತ್ತೀಚಿಗೆ ಶಾಲೆಯಲ್ಲಿ ನಡೆಯಿತು.

ಒಟ್ಟು 18 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮವಾದ ಮಾದರಿಗಳನ್ನು ಪ್ರದರ್ಶನ ಮಾಡಿ ಶಿಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಇದರಲ್ಲಿ ವಿಶೇಷವಾಗಿ ವಾಟರ್ ಫೆವರ್,ಎಟಿಎಂ ಮಿಷನ್,ಎರ್‌ಕೂಲರ್,ಲೇಸರ್ ಲೈಟ್ ಪ್ರೋಟೆಕ್ಟರ್,ಅರ್ಥಕ್ವೇಕ್ ಡಿಟೇಕ್ಟರ್,ವಾಟರ್ ಅಲಾರಾಂ ಸೀಸ್ಟಮ್,ಮಳೆನೀರು ಕೊಯ್ಲು ಮಾದರಿ,ಸೋಲಾರ್‌ವಾಟರ್ ಮೋಟಾರ್ ಪ್ರಮುಖವಾಗಿ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶೇಸು,ಸಹಶಿಕ್ಷಕಿಯರಾದ ಉಷಾರಾಣಿ,ಪ್ರೇಸಿಲ್ಲಾ,ಯಶೋಧ ತೀರ್ಪುಗಾರಾಗಿ ಉಪಸ್ಥಿತರಿದ್ದರು.ಶಾಲೆಯ ವಿಜ್ಞಾನ ಶಿಕ್ಷಕಿ ವೀಣಾ ಕಾರ್ಯಕ್ರಮ ಸಂಯೋಜಿಸಿದರು.

 
 
 
 
 
 
 
 
 
 
 

Leave a Reply