ನಿಮ್ಮನ್ನು ಉದ್ದಾರ ಮಾಡಲೋಸ್ಕರ ಇನ್ನೊಬ್ಬ ವ್ಯಾಪಾರ ಮಾಡಲು ಸಾಧ್ಯವೇ ಇಲ್ಲ ~ ಡಾ. ಶಶಿಕಿರಣ್ ಶೆಟ್ಟಿ

ಅಂದು ಅ ತೋಳ ನಾಯಿಗೆ ಒಂದು ಆಫರ್ ಕೊಟ್ಟಿತು.. ನೋಡು ನಿನ್ನ ಯಜಮಾನ ಕೊಡುವ ಮಾಂಸದೂಟದಲ್ಲಿ ಪ್ರತಿದಿನ ಅರ್ದ ಊಟ ನನಗೆ ಕೊಟ್ಟರೆ.. ಸರಿಯಾಗಿ ಒಂದು ವರ್ಷದ ನಂತರ ನಿನಗೆ ತಿನ್ನಲು ಪ್ರತಿದಿನ ಪಕ್ಕದ ಹಳ್ಳಿ ಇಂದ ಒಂದೊಂದು ಕುರಿಯನ್ನು ಕದ್ದು ತಂದು ಕೊಡುತ್ತೇನೆ ಎಂದಿತ್ತಂತೆ.  ಆ ನಾಯಿಗೂ ಈ ಪ್ರಪೋಸಲ್ ಹಿಡಿಸಿತ್ತು. ಅದಕ್ಕೂ ಕುರಿಯ ಮಾಂಸ ತಿನ್ನುವ ಆಸೆ ಇತ್ತು. ದಿನಕ್ಕೊಂದು ಕುರಿ ಎನ್ನುತ್ತಲೆ ಅದರ ಬಾಯಲ್ಲಿ ನೀರು ಬರುತ್ತಿತ್ತು
ಮಾತಿನಂತೆ ಪ್ರತಿದಿನ ತನ್ನ ಊಟದಲ್ಲಿ ಅರ್ದ ಮಾಂಸದ ಊಟ ತೋಳಕ್ಕೆ ಕೊಡುತ್ತಿತ್ತು. ಪ್ರತಿ ದಿನ ಕೊಡುತ್ತ ಬಂತು 10 ತಿಂಗಳು ಕಳೆದಾಗ ಮತ್ತೆ ನೆನಪಿಸಿತ್ತು. ಇನ್ನೆರಡೇ ತಿಂಗಳು ನೆನಪಿದೆ ಅಲ್ವಾ ಎಂದಿತು. ಹೌದು ನೆನಪಿದೆ 2 ತಿಂಗಳು ಮುಗಿಯಲಿ ಮತ್ತೆ ನಿತ್ಯ ನಿನಗೆ ಕೊಬ್ಬಿದ ಕುರಿ ಊಟ ಎನ್ನುತಿದ್ದಂತೆ ನಾಯಿ ಮತ್ತೆ ಆ ದಿನಗಳ ಕನಸು ಕಾಣಲಾರಂಭಿಸಿತ್ತು.
ಆ ದಿನ ಬಂದೇ ಬಿಟ್ಟಿತು ಅದೆಷ್ಟು ಹೊತ್ತು ಕಾದರೂ ತೋಳ ಬರದಾಗ ತಡೆಯಲಾರದೇ ನಾಯಿಯೇ ಸೀದಾ ತೋಳದ ಮನೆಗೇ ಹೋಗಿತ್ತು. ಅಲ್ಲೊಂದು ಆಘಾತವಿತ್ತು ನಾಯಿಗೆ. ತೋಳದ ಮನೆಯ ಬಾಗಿಲು ಬಂದ್ ಇತ್ತು. ಮನೆ ಬಾಗಿಲಲ್ಲಿ ಒಂದು ಚೀಟಿ ಅಂಟಿಸಿತ್ತು. ನಾಯಿ ಅದನ್ನು ತೆಗೆದು ಓದ ತೊಡಗಿತ್ತು.  ಓದುತ್ತಿದ್ದಂತೆ ಬೆವರಲಾರಂಭಿಸಿತು. “ತೋಳ ಮನೆಯಲಿಲ್ಲ. ಒಬ್ಬ ಬಕ್ರನಿಗೆ ಕುರಿ ತರಲು ಹಳ್ಳಿಗೆ ಹೋಗಿದೆ. ಇನ್ನು ಮತ್ತೆ ಮತ್ತೆ ಮನೆಗೆ ಬಂದು ಬಕ್ರಾ ಆಗಬೇಡಿ ಎಂದು ಬರೆದಿತ್ತು. ನಾಯಿ ತಲೆ ಕೆಳಗೆ ಹಾಕಿ ನಿರಾಸೆಯಲ್ಲಿ ಮನೆ ಕಡೆ ಬಂದಿತು.

ಇಂತಹ ತೋಳಗಳನ್ನು ನಂಬುವ ನಾಯಿಗಳು ನಾವಾಗದಿರೋಣ, ಕೇವಲ 1% ಬಡ್ಡಿ ಜಾಸ್ತಿ ಸಿಗುತ್ತದೆ, ಇನ್ಕಮ್ ಟ್ಯಾಕ್ಸ್ ನ ಜಂಜಾಟ ಇಲ್ಲ, ಒಳ್ಳೊಳ್ಳೆ ಆಫರ್ ಇದೆ ಲಕ್ಷ ಡೆಪಾಸಿಟ್ ಇಟ್ಟರೆ ಬೆಳ್ಳಿಯ ಚೊಂಬು ಕೊಡುತ್ತಾರೆ, ಹಾಗೇ ಹೀಗೆ ಎಂದು ಬಣ್ಣ ಬಣ್ಣದ ಮಾತಾಡೋ ಏಜೆಂಟ್ ಗಳು ಅವರಿಗೆ ಸಿಗೋ ಕಮಿಷನ್ ಆಸೆ ಗಾಗಿ ನಿಮ್ಮಲ್ಲಿ ಬಂದಾಗ.

ನಿಮ್ಮ ಜೀವಮಾನದ ಕಷ್ಟ ಪಟ್ಟು ಉಳಿಸಿದ ಲಕ್ಷ ಹಣ ಇಂತಹ ಹೆಸರಿಲ್ಲದ ಸೊಸೈಟಿ ಗಳಲ್ಲಿ ಇಡುವ ಮುಂಚೆ 10 ಸರಿ ಹೊಚಿಸಿ, ಒಂದು ಬೆಳ್ಳಿ ಚೊಂಬಿಗೆ 7000 ಇರಬಹುದು 10% ಕೊಟ್ಟರೂ  10,000 ಒಂದೆರಡು ವರ್ಷದಲ್ಲಿ ಹೋದರೆ 1 ಲಕ್ಷ ದಲ್ಲಿ 35000 ಮಾತ್ರ ಉಳಿದ 65000 ಹಾಗೇ ನಿಮ್ಮಂತ 100,200 ಹರಕೆಯ ಕುರಿ ಸಿಕ್ಕರೆ ಸಾಕಲ್ಲವೇ??. ಕಡೆಗೆ ನಿಮ್ಮ ಕೈಯ್ಯಲ್ಲಿ ಚೊoಬಷ್ಟೇ ಉಳಿದಿರುತ್ತದೆ….ಆತ ನಿಮಗೆ ನಾಮ ಹಾಕಿ ಇನ್ನೆಲ್ಲೋ ಹೋಗಿರುತ್ತಾನೆ ಮತ್ತಷ್ಟು ಜನರಿಗೆ ಚೊಂಬು ಕೊಡಲು. ಮತ್ತೆ ಮತ್ತೆ ಹೇಳುತ್ತಿದ್ದೇನೆ ಕೇಳಿಸಿಕೊಳ್ಳಿ…

ನಿಮ್ಮನ್ನು ಉದ್ದಾರ ಮಾಡಲೋಸ್ಕರ ಇನ್ನೊಬ್ಬ ವ್ಯಾಪಾರ ಮಾಡಲು ಸಾಧ್ಯವೇ ಇಲ್ಲ.

 
 
 
 
 
 
 
 
 
 
 

Leave a Reply