ಮದುವೆಯಾದ ಆರು ತಿಂಗಳಿಗೆ ಮಸಣ ಸೇರಿದ ನವ ವಿವಾಹಿತೆ

ಮೂಲತಃ ಕೆ.ಆರ್.ನಗರ ತಾಲ್ಲೂಕಿನ ಪಶುಪತಿ ಗ್ರಾಮದ ರೋಹಿಣಿಗೆ ಆರು ತಿಂಗಳ ಹಿಂದೆ ಸುಮಂತ್ ಎಂಬುವವರ ಜೊತೆ ವಿವಾಹವಾಗಿತ್ತು. ಆದರೆ ಈಗ ಗಂಡನ ಮನೆಯವರು ಕೊಲೆ‌ಮಾಡಿ ಕೆರೆಗೆ ಹಾಕಿದ್ದಾರೆ ಎಂದು ರೋಹಿಣಿ ತಂದೆ ಮನೆಯವರ ಆರೋಪಿಸಿದ್ದಾರೆ. 

ರೋಹಿಣಿ ಗಂಡ ಸುಮಂತ್, ಅತ್ತೆ ಮೀನಾಕ್ಷಿಯೇ ಘಟನೆಗೆ ಕಾರಣ ಎಂದು ಆಪಾದಿಸಿದ್ದಾರೆ. ಹೆಂಡತಿ ಕಾಣೆಯಾಗಿದ್ದಾಳೆ‌ ಎಂದು ಪತಿ ಸುಮಂತ್ ಪೋಲಿಸ್ ಠಾಣೆಗೆ ಬಂದಿದ್ದನು. ಸುಮಂತ್ ದೂರು ಆಧರಿಸಿ ರೋಹಿಣಿ ತಂದೆಗೆ ಪೊಲೀಸರು ಕರೆ ಮಾಡಿದ್ದರು. 

ತರುವಾಯ ಟವರ್ ಲೊಕೇಷನ್ ಮೂಲಕ ರೋಹಿಣಿ ಶವವನ್ನು ಪೋಲಿಸರು ಪತ್ತೆ ಮಾಡಿದರು‌. ಮೊಬೈಲ್, ದುಡ್ಡು, ಚಪ್ಪಲಿ ಇದ್ದ ಕೆರೆಯಲ್ಲಿ ಶೋಧ ನಡೆಸಿದ ವೇಳೆ ಶವ ಪತ್ತೆಯಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ಶವ ಹೊರ ತೆಗೆದಿದ್ದಾರೆ. ಈ ಸಂಬಂಧ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply