ಮತ್ತೊಮ್ಮೆ ಬಂದಿದೆ ಕರೋನ ಎಂಬ ಬಿಂಬಿಡದ ಮಾಯಾಜಾಲ~ ರಾಘವೇಂದ್ರ ಪ್ರಭು,ಕವಾ೯ಲು

ಕರೋನಾದ ಜನಕ ಚೀನಾ ದೇಶ ಸೇರಿದಂತೆ ಹಲವಾರು ದೇಶಗಳಲ್ಲಿ ಕರೋನ 4ನೇ ಅಲೆ ಪ್ರಾರಂಭ ವಾಗಿದೆ. ಈಗಾಗಲೇ ಚೀನಾದ ಪರಿಸ್ಥಿತಿ ನೋಡಿದರೆ ಬಹಳ ಬೇಸರವಾಗುತ್ತದೆ.ಮುಖ್ಯವಾಗಿ ಅಲ್ಲಿನ ಜನ ಆರೋಗ್ಯಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬಹಳಷ್ಟು ಜನರು ಸರಿಯಾದ ಆಸ್ಪತ್ರೆ ಇಲ್ಲದೆ ರಸ್ತೆಯಲ್ಲಿ ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಇದಕ್ಕೆ ಕಾರಣ ಅಲ್ಲಿನ ಕಮ್ಯುನಿಸ್ಟ್ ಸರ್ಕಾರ ತನ್ನ ತನ್ನ ಅಸಂವಿಧಾನಿಕ ನೀತಿಗಳಿಂದ ಜನರ ಮೇಲೆ ನಿರಂತರ ಸುಲಿಗೆ ಮಾಡಿರುವುದು.

ಈ ರೀತಿ ಈ ರೀತಿ ಪರಿಸ್ಥಿತಿ ನಿರ್ಮಾಣವಾಗಲು ಅಲ್ಲಿನ ಸರ್ಕಾರದ ಬೀಜವಾಬ್ದಾರಿತನ ಎದ್ದು ಕಾಣುತ್ತದೆ. ಈ ಈ ಹಿಂದೆ ನಾವು ನಮ್ಮ ದೇಶದ ಶೇಕಡ 80ರಷ್ಟು ಜನರಿಗೆ ಲಸಿಕೆ ನೀಡಿದ್ದೇನೆ ಎಂದು ಜಗತ್ತಿಗೆ ಸಾರಿ ತನ್ನ ಯಾವುದಕ್ಕೂ ಪ್ರಯೋಜನಕ್ಕೆ ಬಾರದ ನಕಲಿ ಲಸಿಕೆ ನೀಡಿ ದ ಪರಿಣಾಮ ಈ ಸ್ಥಿತಿ ಇಂದು ಚೀನಾಕ್ಕೆ ಉಂಟಾಗಿದೆ ನಮ್ಮ ದೇಶದ ಬುದ್ಧಿ ಜೀವಿಗಳು ಮತ್ತು ಕಮ್ಯುನಿಸ್ಟ್ ಪಕ್ಷದವರು ನಮ್ಮ ದೇಶದಲ್ಲೂ ಚೀನಾ ಮಾದರಿಯ ಲಸಿಕೆ ಕಾರ್ಯಕ್ರಮ ಪ್ರಾರಂಭವಾಗಲಿ ಎಂದು ಭಾಷಣ ಮಾಡಿದ್ದನ್ನು ನಾವು ಗಮನಿಸಬಹುದು.

ನಮ್ಮ ದೇಶ ಈಗಾಗಲೇ ಶೇಕಡಾ 80ಕ್ಕಿಂತ ಹೆಚ್ಚು ಜನರಿಗೆ ಎರಡನೇ ಡೋಸ್ ಲಸಿಕೆ ನೀಡಿ ವಿಶ್ವಕ್ಕೆ ಮಾದರಿಯಾಗಿದೆ. ಭಾರತಕ್ಕೆ ಎಚ್ಚರಿಕೆ ಪಾಠ ಈಗಾಗಲೇ ಭಾರತವು ಕರೋನದ ವಿವಿಧ ಅಲೆಗಳಿಂದ ಸಾಕಷ್ಟು ಆರ್ಥಿಕ ಮತ್ತು ಆರೋಗ್ಯದ ದೃಷ್ಟಿಯಲ್ಲಿ ತೊಂದರೆ ಅನುಭವಿಸಿದೆ.

ಕಳೆದ ಒಂದು ವರ್ಷದಿಂದ ಇತ್ತೀಚಿಗೆ ಸ್ವಲ್ಪಮಟ್ಟಿಗೆ ಆರ್ಥಿಕ ಪರಿಸ್ಥಿತಿ ಹಳಿಗೆ ಬಂದಿದೆ ಆದರೆ ಇದೀಗ ಮತ್ತೊಮ್ಮೆ ನಾಲ್ಕನೇ ಅಲೆ ಪರಿಸ್ಥಿತಿ ಎದುರಾಗಿರುವುದು ಬೇಸರ ಸಂಗತಿ ಈ ನಿಟ್ಟಿನಲ್ಲಿ ನಾವೆಲ್ಲರೂ ರಾಜಕೀಯ ರಹಿತವಾಗಿ, ಸರ್ಕಾರ ಕೈಗೊಂಡ ನಿಯಂತ್ರಣ ಕ್ರಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಏಕೆಂದರೆ ಒಂದು ವೇಳೆ ನಾವು ಮೈಮರೆತರೆ ಮತ್ತೊಮ್ಮೆ ಲಾಕ್ ಡೌನ್ ಕರಿಛಾಯೆ ಎದುರಾಗಬಹುದು ಹೀಗಾಗಿ ಸರ್ಕಾರ ಮುಖ್ಯವಾಗಿ ಚೀನಾ ಸೇರಿದಂತೆ ಕರೋನಾ ಹೆಚ್ಚಿರುವ ರಾಷ್ಟ್ರಗಳಿಂದ ಬರುವ ವಿಮಾನಗಳನ್ನು ಸಲ್ಪ ಸಮಯದ ಮಟ್ಟಿಗೆ ತಡೆ ಹಿಡಿಯುವುದು ಉತ್ತಮ .

ಅದೇ ರೀತಿ ಲಸಿಕಾ ಕ್ರಮಗಳನ್ನು ಹೆಚ್ಚು ಮಾಡುವುದು ಸೇರಿದಂತೆ ವಿವಿಧ ರೀತಿಯ ನಿಯಮಗಳನ್ನು ಜನರಿಗೆ ತೊಂದರೆಯಾಗದ ರೀತಿಯಲ್ಲಿ ಜಾರಿಗೆ ತರಬೇಕಾಗಿದೆ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ಈ ನಿಟ್ಟಿನಲ್ಲಿ ಸರ್ಕಾರವು ಕಾರ್ಯನಿರ್ವಹಿಸಬೇಕಾಗಿದೆ ಒಟ್ಟಾಗಿ ಕರೋನ ರೋಗವು ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿ ಎಂಬಂತಾಗಿದೆ. ಆದಷ್ಟು ಬೇಗ ಕಾಯಿಲೆಯಿಂದ ಜನರು ಗುಣಮುಖ ರಾಗಲಿ ಅದೇ ರೀತಿ ಕರೋನಾ ದೂರವಾಗಲಿ ಎಂಬ ಹಾರೈಕೆ ನಮ್ಮದಾಗಿದೆ.

*ರಾಘವೇಂದ್ರ ಪ್ರಭು,ಕವಾ೯ಲು
ಯುವ ಲೇಖಕ

 
 
 
 
 
 
 
 
 

Leave a Reply