ಬ್ರಹ್ಮಾವರ: ಮನೆ ಕಳವು ಆರೋಪಿಯ ಬಂಧನ

ಬಂಧಿತ ಆರೋಪಿಯನ್ನು ಕಾಡೂರು ತಂತ್ರಾಡಿ ನಿವಾಸಿ ವಿಜಯ್ ಕುಮಾರ್ ಶೆಟ್ಟಿ (28) ಎಂದು ಗುರುತಿಸಲಾಗಿದೆ.

ಬ್ರಹ್ಮಾವರ ವೃತ್ತದ ಪೊಲೀಸ್ ಠಾಣೆಗಳಾದ ಬ್ರಹ್ಮಾವರ ಹಾಗೂ ಕೋಟ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಕಳವು ಪ್ರಕರಣಗಳು ದಾಖಲಾಗಿದ್ದು ಈ ಬಗ್ಗೆ ಮಾನ್ಯ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ  ಅಕ್ಷಯ ಎಂ. ಹೆಚ್ ಐ.ಪಿ.ಎಸ್ ರವರ ಆದೇಶದಂತೆ  ಅನಂತಪದ್ಮನಾಭ, ಸಿ.ಪಿ.ಐ ಬ್ರಹ್ಮಾವರರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದು ಸದ್ರಿ ತಂಡದ ಬ್ರಹ್ಮಾವರ ಠಾಣಾ ಪಿ.ಎಸ್.ಐ  ಮುಕ್ತಾಬಾಯಿ, ಸಿಬ್ಬಂದಿಯವರಾದ ವೆಂಕಟ್ರಮಣ ದೇವಾಡಿಗ ,ಪ್ರವೀಣ ಶೆಟ್ಟಿಗಾರ್‌, ಮಹಮ್ಮದ್‌ ಅಜ್ಮಲ್‌ ರವರ ತಂಡವು ಹಳೆಯ ರಾತ್ರಿ ಮನೆ ಕಳ್ಳತನ ಪ್ರಕರಣದ ಆರೋಪಿಗಳು, ಜೈಲಿನಿಂದ ಬಿಡುಗಡೆಯಾದವರ ಮಾಹಿತಿಯನ್ನು ಕಲೆಹಾಕಿ ಅವರ ಚಲನವಲನದ ಮೇಲೆ ನಿಗಾವಹಿಸಿದ್ದರು.

ಡಿಸೆಂಬರ್ 19 ರಂದು ಸಂಜೆ ನೀಲಾವರ ಕ್ರಾಸ್‌ ಬಳಿ ಠಾಣೆಯ ಕಳ್ಳತನ ಪ್ರಕರಣದ ಹಳೆಯ ಆರೋಪಿ ವಿಜಯ ಕುಮಾರ್‌ ಶೆಟ್ಟಿ ಈತನ ಹೊಂಡಾ ಮ್ಯಾಟ್ರಿಕ್ಸ್‌ ಸ್ಕೂಟರ್‌ ರನ್ನು ನಿಲ್ಲಿಸಿ ಪರಿಶೀಲಿಸಿದಾಗ ಕಳ್ಳತನ ನಡೆಸಲು ಬೇಕಾದ ಸಲಕರಣೆಗಳು ಆತನ ವಶದಲ್ಲಿದ್ದು ಆತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ಈತನು ಬ್ರಹ್ಮಾವರ ಮತ್ತು ಕೋಟ ಠಾಣಾ ವ್ಯಾಪ್ತಿಯ ಈ ಕೆಳಗಿನ ಪ್ರಕರಣದಲ್ಲಿ ಬಾಗಿಯಾಗಿರುವುದಾಗಿ ತನಿಖೆಯ ವೇಳೆ ಪತ್ತೆಯಾಗಿರುತ್ತದೆ.

1.2022ರ ಮಾರ್ಚ್‌ ಮತ್ತು ಎಪ್ರೀಲ್ ತಿಂಗಳ ಮಧ್ಯಾವಧಿಯಲ್ಲಿ ಕಾಡೂರು ಗ್ರಾಮದ ತಂತ್ರಾಡಿ ಸದಾಶಿವ ಮಹಾಬಲೇಶ್ವರ ರಾವ್‌ ರವರ ಹಳೇ ಮನೆಯ ಬಾಗಿಲಿನ ಚಿಲಕ ಮುರಿದು ಒಳ ಪ್ರವೇಶಿಸಿ ಸುಮಾರು 280 ಕೆಜಿ ತೂಕದ ರೂ-140000/- ಮೌಲ್ಯದ ಏಳು ಮೂಟೆ ಕಾಳು ಮೆಣಸುಗಳನ್ನು ಕಳವು ಮಾಡಿರುತ್ತಾನೆ.

2. 2022ರ ಜುಲಾಯಿ ತಿಂಗಳಲ್ಲಿ ರಾತ್ರಿ ನಡೂರು ಗ್ರಾಮದ ನಡೂರು ಪಟೇಲ್‌ ಶ್ರೀ ಅಂತಯ್ಯ ಶೆಟ್ಟಿ ಸ್ಮಾರಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೀಗ ಮುರಿದು ಒಂದು ಇಂಡೇನ್‌ ಕಂಪೆನಿಯ ಗ್ಯಾಸ್‌ ಸಿಲಿಂಡರ್‌ ಕಳವು ಮಾಡಿರುತ್ತಾನೆ.

3. 2022ರ ಜುಲಾಯಿ ತಿಂಗಳಲ್ಲಿ ಯಡ್ತಾಡಿ ಗ್ರಾಮದ ದಾಲಾಡಿ ಯಲ್ಲಿರುವ ಶ್ರೀಮತಿ ವಾಣಿ ಭಂಡಾರಿ ರವರ ಮನೆಯಲ್ಲಿ ರಾತ್ರಿ ಸಮಯ ಲೈಟ್‌ ಇಲ್ಲದೇ ಇದ್ದುದನ್ನು ಗಮನಿಸಿ ಮುಖ್ಯ ದ್ವಾರದ ಬೀಗ ಮುರಿದು ಒಳ ಪ್ರವೇಶಿಸಿ ಸುಮಾರು 504000/- ರೂ ಮೌಲ್ಯದ ಚಿನ್ನಾಭರಣ ಹಾಗೂ ರೂ-15000/- ನಗದನ್ನು ಕಳವುಮಾಡಿರುತ್ತಾನೆ.

4. 2022ನೇ ನವೆಂವರ್ ತಿಂಗಳಿನಲ್ಲಿ ಕೋಟ ಠಾಣಾ ವ್ಯಾಪ್ತಿಯ ಬಿಲ್ಲಾಡಿ ಮಾನ್ಯ ಶಾಲೆಯ ಎದುರು ಇರುವ ಶ್ರೀಮತಿ ಸುಜಾತ ಶೆಟ್ಟಿ ರವರ ಮನೆ ಕಳ್ಳತನ.

5. 2022ನೇ ನವೆಂಬರ್ ತಿಂಗಳಿನಲ್ಲಿ ಆರೂರು ಗ್ರಾಮದ ಮೇಲಡ್ಪು ಭಾಸ್ಕರ ಶೆಟ್ಟಿರವರ ಮನೆಯಲ್ಲಿ ಲೈಟ್‌ ಇಲ್ಲದಿರುವುದು ಕಂಡು ಮನೆಯ ಬಾಗಿಲನ್ನು ಮುರಿದು ಅಂದಾಜು ರೂ- 31000/- ಮೌಲ್ಯದ ಚಿನ್ನ, ಬೆಳ್ಳಿಯ ಆಭರಣ ಮತ್ತು ಸೀರೆ ಹಾಗೂ ನಗದು ರೂ-5000/- ಕಳವು ಮಾಡಿರುವುದಾಗಿದೆ.

ಈ ಆರೋಪಿಯ ಬಂಧನದಿಂದ ಬ್ರಹ್ಮಾವರ ಪೊಲೀಸ್‌ ಠಾಣಾ 4 ಕಳ್ಳತನ ಪ್ರಕರಣಗಳು ಹಾಗೂ ಕೋಟಾ ಪೊಲೀಸ್‌ ಠಾಣಾ 1 ಪ್ರಕರಣ ನಡೆಸಿರುವುದು ಪತ್ತೆಯಾಗಿರುತ್ತದೆ.

ಆರೋಪಿ ವಿಜಯ ಕುಮಾರ್‌ ಶೆಟ್ಟಿ ಈತನ ಮೇಲೆ ಈ ಹಿಂದೆ ದ.ಕ ಜಿಲ್ಲೆ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ 2 ಪ್ರಕರಣ, ಮಂಗಳೂರು ಬಂದರು ಪೊಲೀಸ್‌ ಠಾಣೆಯಲ್ಲಿ 4 ಪ್ರಕರಣ, ಚಿಕ್ಕಮಂಗಳೂರು ಜಿಲ್ಲೆ ಎನ್‌ ಆರ್‌ ಪುರ ಠಾಣೆಯಲ್ಲಿ 1 ಪ್ರಕರಣ, ಹರಿಹರ ಪೊಲೀಸ್‌ ಠಾಣೆಯಲ್ಲಿ 1 ಪ್ರಕರಣ, ಶಿವಮೊಗ್ಗ ಜಿಲ್ಲೆ ಆಗುಂಬೆ ಪೊಲೀಸ್‌ ಠಾಣೆಯಲ್ಲಿ 1 ಪ್ರಕರಣ, ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ 2 ಪ್ರಕರಣ, ಹಾಗೂ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ 1 ಕಳವು ಪ್ರಕರಣಗಳು ದಾಖಲಾಗಿರುತ್ತದೆ.ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಯು ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿ ಕೊಂಡಿದ್ದು ಜಾಮೀನು ರಹಿತ ವಾರಂಟ್‌ ಜ್ಯಾರಿಯಾಗಿರುತ್ತದೆ.

ಬಂಧಿತ ಆರೋಪಿಯಿಂದ ಹೊಂಡಾ ಮ್ಯಾಟ್ರಿಕ್ ಸ್ಕೂಟರ್ ಮೌಲ್ಯ ರೂ 30000, ಕಳವು ಮಾಡಿದ ರೂ 1.64 ಲಕ್ಷ ಮೌಲ್ಯದ ಚಿನ್ನಾಭರಣ, 2080 ರೂ ಮೌಲ್ಯದ ಬೆಳ್ಳಿ ನಾಣ್ಯಗಳು, 9000 ರೂಪಾಯಿ ಮೌಲ್ಯದ ಸೀರೆ, ಕಳವು ಮಾಡಿದ ಕಾಳುಮಣಸಿನ ಮಾರಾಟದಿಂದ ಪಡೆದ ನಗದು ರೂ-84,000/- ಹಾಗೂ ಕಳವು ಮಾಡಿದ ಗ್ಯಾಸ್‌ ಸಿಲಿಂಡರ್‌-1 ಮೌಲ್ಯ ರೂ- 2,800/- ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಕ್ಷಯ ಎಂ. ಹೆಚ್, ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್ .ಟಿ ಸಿದ್ದಲಿಂಗಪ್ಪ ರವರ ಮಾರ್ಗದರ್ಶನದಂತೆ, ಸುಧಾಕರ ಎಸ್ ನಾಯ್ಕ, ಪೊಲೀಸ್ ಉಪಾಧೀಕ್ಷಕರು, ಉಡುಪಿ ಉಪ ವಿಭಾಗ, ಉಡುಪಿ ರವರ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಅನಂತ ಪದ್ಮನಾಭ, ಸಿ.ಪಿ.ಐ ಬ್ರಹ್ಮಾವರ ವೃತ್ತ, ಬ್ರಹ್ಮಾವರ ಠಾಣಾ ಪಿ.ಎಸ್‌. ಐ ರಾಜಶೇಖರ ವಂದಲಿ, ಠಾಣಾ ತನಿಖೆ ಪಿ.ಎಸ್‌. ಐ ಮುಕ್ತಾಬಾಯಿ, ಕೋಟಾ ಠಾಣಾ ಪಿಎಸ್‌ಐ ಮಧು ಬಿ ಇ, ಬ್ರಹ್ಮಾವರ ಠಾಣಾ ಸಿಬ್ಬಂದಿಗಳಾದ ವೆಂಕಟರಮಣ ದೇವಾಡಿಗ, ಪ್ರವೀಣ ಶೆಟ್ಟಿಗಾರ್‌,

ಮಹಮದ್‌ ಅಜ್ಮಲ್‌, ರಾಘವೇಂದ್ರ ಕಾರ್ಕಡ, ಸುರೇಶ್‌ ಶೆಟ್ಟಿ, ಗಣೇಶ್‌ ದೇವಾಡಿಗ, ದಿಲೀಪ, ಸಂತೋಷ ರಾಥೋಡ್‌ , ಸಂದೀಪ, ದೇವರಾಜ್, ಗುರು ಕಿರಣ, ಸುರೇಶ್‌ ಬಾಬು, ಅಂಬ್ರಯ್ಯ ಹೀರೆಮಠ, ನವೀನ ಯಾದವ್‌, ಕೋಟಾ ಠಾಣಾ ಸಿಬ್ಬಂದಿ ರಾಘವೇಂದ್ರ ಶೆಟ್ಟಿ, ಹಾಗೂ ಕಂಪ್ಯೂಟರ್‌ ಸಿಬ್ಬಂದಿ ಯೋಗೀಶ್‌ ಮತ್ತು ಜಿಲ್ಲಾ ಸಿಡಿಆರ್‌ ವಿಭಾಗದ ನಿತಿನ್‌, ದಿನೇಶ್‌, ಹಾಗೂ ಚಾಲಕ ಅಣ್ಣಪ್ಪ ಮತ್ತು ಸಂತೋಷ ಪ್ರಮುಖ ಪಾತ್ರ ವಹಿಸಿರುತ್ತಾರೆ. ಪ್ರಕರಣವನ್ನು ಭೇದಿಸಿರುವುದಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ ಅಕ್ಷಯ ಎಂ. ಹೆಚ್ ಐ.ಪಿ.ಎಸ್ ರವರು ತಂಡವನ್ನು ಅಭಿನಂದಿಸಿರುತ್ತಾರೆ.

 
 
 
 
 
 
 
 
 

Leave a Reply