ನಿಟ್ಟೂರು ಪ್ರೌಢ ಶಾಲಾ ವಾರ್ಷಿಕೋತ್ಸವ

ಉಡುಪಿ : ನಿಟ್ಟೂರು ಪ್ರೌಢಶಾಲಾ ವಾರ್ಷಿಕೋತ್ಸವವು ಡಿಸೆಂಬರ್ ೨೩, ೨೦೨೨ರಂದು ೯.೩೦ಕ್ಕೆ ಶ್ರೀ ನಾಗರಾಜ ಶೆಟ್ಟಿ, ಉಪಾಧ್ಯಕ್ಷರು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಪ್ರಾಕ್ತನ ವಿದ್ಯಾರ್ಥಿಗಳಾದ ಶ್ರೀ ವಿಜಯೇಂದ್ರ ಶೆಟ್ಟಿ, ಅಧ್ಯಕ್ಷರು ನ್ಯೂ ಉಡುಪಿ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿ ಕಲ್ಯಾಣಪುರ, ಶ್ರೀಮತಿ ಆಯಿಷಾ ಎ ಎ., ಮಾಜಿ ಉಪಾಧ್ಯಕ್ಷರು ಎಣ್ಮಕಾಜೆ ಗ್ರಾಮ ಪಂಚಾಯತ್ ಕಾಸರಗೋಡು, ಶ್ರೀ ಸುಧಾಕರ ಕೋಟ್ಯಾನ್, ಪೆರಂಪಳ್ಳಿ, ದ್ವಿ.ದ. ಸಹಾಯಕರು, ನಗರ ಸಭೆ, ಉಡುಪಿ, ಶ್ರೀ ರಾಜೇಶ್, ಸರ್ವೇಯರ್ ಬ್ರಹ್ಮಾವರ, ಅತಿಥಿಗಳಾಗಿ ಭಾಗವಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ನಾಗರಾಜ ಶೆಟ್ಟಿ ಮಾತನಾಡುತ್ತಾ, ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವಾರ್ಷಿಕೋತ್ಸವ ಉತ್ತಮ ವೇದಿಕೆಯಾಗಿದ್ದು, ವಿದ್ಯಾರ್ಥಿಗಳು
ಪಾಠ-ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವುದರ ಜೊತೆಗೆ ಹಿರಿಯರನ್ನು, ಗುರುಗಳನ್ನು ಮತ್ತು ಹೆತ್ತವರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು ಎನ್ನುತ್ತಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಮುರಲಿ ಕಡೆಕಾರ್ ಶಾಲೆಯ ಸಾಧನೆಯಲ್ಲಿ ಸದಾ ಜೊತೆಯಾಗಿರುವ ಹಳೆವಿದ್ಯಾರ್ಥಿಗಳು ಮತು ದಾನಿಗಳ ನೆರವನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ
ವಿಜೇತರಾದ ಮತ್ತು ಪಾಠ-ಪಠ್ಯೇತರ ಚಟುವಟಿಕೆಗಳಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಾಧಕ ಹಳೆವಿದ್ಯಾರ್ಥಿ ಅತಿಥಿಗಳನ್ನು
ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಸಂಸ್ಕೃತ ಭಾಷಾ ಸಾಧಕ ಶಿಕ್ಷಕ ಶ್ರೀ ಎಚ್.ಎನ್. ಶೃಂಗೇಶ್ವರ, ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ, ಮತ್ತು ಸಿ.ಆರ್.ಪಿ. ಆಶಾಲತಾ ಇವರನ್ನು ಗೌರವಿಸಲಾಯಿತು. ಸಂಜೆ ೫.೩೦ಕ್ಕೆ ಶಾಲಾ ವಿದ್ಯಾರ್ಥಿಗಳಿಂದ ಗುರು ಕೃಷ್ಣಮೂರ್ತಿ ಭಟ್ ಬಗ್ವಾಡಿ ನಿರ್ದೇಶನದ ‘ಹಿಡಿಂಬಾ ವಿವಾಹ’ ಯಕ್ಷಗಾನ ಮತ್ತು ನೃತ್ಯ ವೈವಿಧ್ಯ ಪ್ರದರ್ಶನಗೊಂಡಿತು. ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಎಂ. ಗಂಗಾಧರ ರಾವ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಯೋಗೀಶ್ಚಂದ್ರಧರ, ಶಿಕ್ಷಕ-
ರಕ್ಷಕ ಸಂಘದ ಅಧ್ಯಕ್ಷ ಕಮಲಾಕ್ಷ ಶೇಟ್ ಮತ್ತು ವಿದ್ಯಾರ್ಥಿ ನಾಯಕಿ ದೃಷ್ಟಿ ಭಟ್ ಉಪಸ್ಥಿತರಿದ್ದರು. ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀ ಎಸ್.ವಿ. ಭಟ್
ಕಾರ್ಯಕ್ರಮ ಸ್ವಾಗತಿಸಿದರು, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅನಸೂಯ ವಾರ್ಷಿಕ ವರದಿಯನ್ನು ವಾಚಿಸಿದರು. ಶಿಕ್ಷಕರಾದ ರಾಮದಾಸ್ ನಾಯ್ಕ್ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿ ಧನ್ಯಾ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply