ಕರ್ನಾಟಕ ಶಾಸ್ತ್ರೀಯ ವಾದ್ಯ ಸಂಗೀತ ಸ್ಪರ್ಧೆಯಲ್ಲಿ ಕು. ಕಾದಂಬರಿ ಡಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತೆಯ ಸಚಿವಾಲಯ, ಭಾರತ ಸರಕಾರ ಹಾಗೂ ಎನ್.ಸಿ.ಇ.ಆರ್.ಟಿ. ನವದೆಹಲಿಯವರು ನಡೆಸುವ ರಾಷ್ಟ್ರಮಟ್ಟದ “ಕಲೋತ್ಸವ -2022ರಲ್ಲಿ ಕುಮಾರಿ ಕಾದಂಬರಿ ಡಿ, ಕರ್ನಾಟಕ ಶಾಸ್ತ್ರೀಯ ವಾದ್ಯ ಸಂಗೀತ ಸ್ಪರ್ಧೆ (ವೀಣೆ) ಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ಒರಿಸ್ಸಾದ ಭುವನೇಶ್ವರದಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲು ಆಯ್ಕೆಯಾಗಿರುತ್ತಾಳೆ.

ಇವಳು ಮಣಿಪಾಲದ ಮಾಧವ ಕೃಪಾ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಮಣಿಪಾಲದ ನಿವಾಸಿ    ಡಾ|| ಗಾಯತ್ರಿ ಮತ್ತು ಡಾ|| ಶ್ರೀಧರ ಇವರ ಪುತ್ರಿ ಹಾಗೂ ಮಣಿಪಾಲ “ಕಲಾಸ್ಪಂದನದ” ವೀಣಾವಿನೋದಿನಿ ವಿದುಷಿ ಪವನ ಬಿ ಆಚಾರ್ ಇವರ ಶಿಷ್ಯ ಆಗಿರುತ್ತಾಳೆ.

 
 
 
 
 
 
 
 
 

Leave a Reply