ಉಡುಪಿಯಲ್ಲಿ ಹೆಚ್ಚುತ್ತಿರುವ ಮಹಿಳಾ ಭಿಕ್ಷುಕರು

ನಗರದಲ್ಲಿ ಎಲ್ಲೆಂದರಲ್ಲಿ ಭಿಕ್ಷುಕರು ಹೆಚ್ಚಾಗಿದ್ದಾರೆ.  ಅದರಲ್ಲಿಯೂ ಕೂಡ ಮಹಿಳಾ ಭಿಕ್ಷುಕರು ಜೋಲಿಗೆಯಲ್ಲಿ ಸಣ್ಣ ಮಕ್ಕಳನ್ನು ಹಿಡಿದು ಭಿಕ್ಷೆ ಬೇಡುವುದನ್ನು ನಾವು ಕಾಣಬಹುದು. ಒಂದು ಕಡೆಯಲ್ಲಿ ಮಕ್ಕಳು ಕೂಡ ಬಸ್ಸು ನಿಲ್ದಾಣದ  ಅಕ್ಕಪಕ್ಕದಲ್ಲಿ ಭಿಕ್ಷೆ ಬೇಡುದನ್ನು ನೋಡಿದಾಗ ಬೇಸರವಾಗುತ್ತದೆ. ಮಹಿಳೆಯರ ಜೋಲಿಗೆಯಲ್ಲಿರುವ ಚಿಕ್ಕ ಮಕ್ಕಳು ಇಡೀ ದಿನ ನಿದ್ರೆಯಲ್ಲಿರುತ್ತವೆ.

ಈ ಮಹಿಳೆಯರ ಒಂದು ತಂಡವೇ ನಗರದಲ್ಲಿದೆ ಸಂಜೆ ಒಂದೆಡೆ ಸೇರಿ ಬಂದ ಹಣದ ಲೆಕ್ಕಾಚಾರದಲ್ಲಿ ತೊಡಗುತ್ತಾರೆ. ಈ ಮಕ್ಕಳಲ್ಲಿ ಹೆಚ್ಚಿನವವರು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಈ ಹೆಚ್ಚಿನ ಮಹಿಳಾ ಭಿಕ್ಷುಕರು ಕೆ.ಎಸ್.ಆರ್.ಟಿಸಿ ಬಸ್ಸು ನಿಲ್ಡಾಣದಲ್ಲಿರುತ್ತಾರೆ. ಇವರ  ಹಾವಳಿಯಿಂದ ಬಸ್ಸು ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ತುತು೯ ಕ್ರಮ ಕೈಗೊಳ್ಳಬೇಕಾಗಿದೆ.

ರಾಘವೇಂದ್ರ ಪ್ರಭು, ಕವಾ೯ಲು

 
 
 
 
 
 
 
 
 
 
 

Leave a Reply