Janardhan Kodavoor/ Team KaravaliXpress
25.6 C
Udupi
Saturday, December 3, 2022
Sathyanatha Stores Brahmavara

ಉಚಿತ ನೇತ್ರ ತಪಾಸಣಾ ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮ

ಯುವ ಬಂಟರ ಸಂಘ (ರಿ.) ಕಂಬಳಕಟ್ಟ- ಕೊಡವೂರು, ಜೆ. ಎಸ್. ಡಬ್ಲ್ಯೂ ಫೌಂಡೇಶನ್”, “ಇಂಡಿಯಾ ವಿಷನ್ ಸಂಸ್ಥೆ” ಹಾಗೂ “ಲಯನ್ಸ್ ಕ್ಲಬ್ ಉಡುಪಿ, ಚೇತನ” ಇವರುಗಳ ಸಹಯೋಗದೊಂದಿಗೆ ದಿನಾಂಕ: 01.11.2022 ರಂದು ಉಚಿತ ನೇತ್ರ ತಪಾಸಣಾ ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮವು ಆದಿವುಡುಪಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಿತು. ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಜೆ. ಎಸ್. ಡಬ್ಲ್ಯೂ ಫೌಂಡೇಶನ್ ಮಂಗಳೂರು ವಿಭಾಗ ಇದರ ತಜ್ಞ ಸಲಹೆಗಾರರಾದ ಶ್ರೀ ನವನೀತ್ ಕುಮಾರ್ ಅವರು ಮಾತನಾಡಿ ಜೆ. ಎಸ್. ಡಬ್ಲ್ಯೂ ಸಂಸ್ಥೆಯು ಇಂತಹ ಅನೇಕ ಸಮಾಜ ಮುಖಿ ಕಾರ್ಯಕ್ರಮಗಳನ್ನು ಜನರಿಗೋಸ್ಕರ ದೇಶಾದ್ಯಂತ ನಡೆಸುತ್ತಾ ಬಂದಿದೆ, ಈ ನಿಟ್ಟಿನಲ್ಲಿ ನಡೆದ ಈ ಶಿಬಿರವು ತುಂಬಾ ಅರ್ಥಪೂರ್ಣವಾಗಿದ್ದು ಉಡುಪಿ ಪರಿಸರದ ಜನತೆಗೆ ಈ ಶಿಬಿರದ ಲಾಭವನ್ನು ದೊರಕುವಂತೆ ಮಾಡಿದ ಯುವ ಬಂಟರ ಸಂಘ ಕಂಬಳಕಟ್ಟ- ಕೊಡವೂರು ಹಾಗೂ ಲಯನ್ಸ್ ಕ್ಲಬ್ ಉಡುಪಿ ಚೇತನ ಸಂಘದ ಪದಾಧಕಾರಿಗಳು ಹಾಗೂ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸಿದರು.

ಕರ್ನಾಟಕ ರಾಜ್ಯೋತ್ಸವದ ದಿನದಂದು ನಡೆದ ಈ ಶಿಬಿರದಲ್ಲಿ ಸಾಮೂಹಿಕವಾಗಿ ನಾಡಗೀತೆಯನ್ನು ಹಾಡಲಾಯಿತು. ಈ ಸುಸಂದರ್ಭದಲ್ಲಿ ಸುಮಾರು 35 ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಪ್ರಸ್ತುತ ಆದಿವುಡುಪಿ ಪ್ರೌಢ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ರವೀಂದ್ರ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಸುಮಾರು 300ಕ್ಕೂ ಅಧಿಕ ಶಿಬಿರಾರ್ಥಿಗಳು ಪಾಲ್ಗೊಂಡ ಈ ಶಿಬಿರದಲ್ಲಿ 180 ಜನ ಫಲಾನುಭವಿಗಳಿಗೆ ಉಚಿತ ಕನ್ನಡಕ ನೀಡಲಾಯಿತು.

ಈ ಸಂದರ್ಭದಲ್ಲಿ ಜೆ. ಎಸ್. ಡಬ್ಲ್ಯೂ ಫೌಂಡೇಶನ್ ಮಂಗಳೂರು ವಿಭಾಗ ಇದರ ಸಿ. ಎಸ್.ಆರ್ ಮುಖ್ಯಸ್ಥ ಶ್ರೀ ಅನ್ವರ್ ಸಾದತ್,ಮಾನವ ಸಂಪನ್ಮೂಲ ಹಾಗೂ ಆಡಳಿತ ವಿಭಾಗದ ಶ್ರೀ ಪ್ರಕಾಶ್,ಲಯನ್ಸ್ ಜಿಲ್ಲೆ 317C ಇದರ ಪ್ರಥಮ ಜಿಲ್ಲಾ ಗವರ್ನರ್ ಲl ಡಾ. ನೇರಿ ಕಾರ್ನೇಲಿಯೋ MJF,. ತೋನ್ಸೆ ವಲಯ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಶ್ರೀ ಮನೋಹರ ಶೆಟ್ಟಿ ,ತೋನ್ಸೆ, ಆದಿವುಡುಪಿ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕರಾದ ಶ್ರೀ ಗಣೇಶ್ ರಾವ್, ಮೂಡುಬೆಟ್ಟು ವಾರ್ಡ್ ನಗರ ಸಭಾ ಸದಸ್ಯ ಶ್ರೀ ಶ್ರೀಶ ಭಟ್ ಕೊಡವೂರು, ಬನ್ನಂಜೆ ವಾರ್ಡ್ ನಗರ ಸಭಾ ಸದಸ್ಯೆ ಶ್ರೀಮತಿ ಸವಿತಾ ಹರೀಶ್ ರಾಮ್ ಬನ್ನಂಜೆ,ಯುವ ಬಂಟರ ಸಂಘ ಕಂಬಳಕಟ್ಟ- ಕೊಡವೂರು ಇದರ ಗೌರವ ಅಧ್ಯಕ್ಷರುಗಳಾದ ಶ್ರೀ ಸಂತೋಷ್ ಶೆಟ್ಟಿ ಪಂಚರತ್ನ,ಶ್ರೀ ಸುರೇಶ್ ಶೆಟ್ಟಿ ಕಂಬಳಕಟ್ಟ, ಶ್ರೀಮತಿ ಸ್ಮಿತಾ ವಿದ್ಯಾಧರ ಶೆಟ್ಟಿ ಗರ್ಡೆ,ಅಧ್ಯಕ್ಷರಾದ ಶ್ರೀ ಶಿವಪ್ರಸಾದ್ ಶೆಟ್ಟಿ ಮಜಲುಮನೆ, ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಆದಿವುಡುಪಿ,ಖಜಾಂಚಿ ರಮೇಶ್ ಶೆಟ್ಟಿ ಮೂಡುಬೆಟ್ಟು, ಲಯನ್ಸ್ ಕ್ಲಬ್ ಉಡುಪಿ ಚೇತನ ಇದರ ಅಧ್ಯಕ್ಷರಾದ ಲl ರಾಜೇಶ್ ಶೇರಿಗಾರ್, ಲl ಪ್ರವೀಣ್ ಕುಮಾರ್ ಬೈಲೂರು, ಲl ಪ್ರದೀಪ್ ಶೆಟ್ಟಿ ಸುರಭಿ,ಲl ಸುದರ್ಶನ್, ಹಾಗೂ ಇಂಡಿಯಾ ವಿಷನ್ ಸಂಸ್ಥೆ ಇದರ ವೈದ್ಯರುಗಳು ಉಪಸ್ಥಿತರಿದ್ದರು.

ಕಂಬಳಕಟ್ಟ – ಕೊಡವೂರು ಬಂಟರ ಸಂಘದ ಅಧ್ಯಕ್ಷ ಶ್ರೀ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿ , ಲl ಜಗದೀಶ್ ಆಚಾರ್ಯ ಧನ್ಯವಾದ ಸಮರ್ಪಿಸಿದರು, ಶ್ರೀ ಸುರೇಶ್ ಶೆಟ್ಟಿ ಕಂಬಳಕಟ್ಟ ಕಾರ್ಯಕ್ರಮ ನಿರೂಪಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!