ಇಂದು ಕೋವಿಡ್ 372 ನೆಗೆಟಿವ್, 117 ಪಾಸಿಟಿವ್

ಉಡುಪಿ:  ಜಿಲ್ಲೆಯಲ್ಲಿ 117 ಪಾಸಿಟಿವ್ ಪ್ರಕರಣಗಳ ಕಂಡು ಬಂದಿವೆ. ಅಲ್ಲದೇ 309 ಜನರು ಚಿಕಿತ್ಸೆಯಿಂದ ಬಿಡುಗಡೆ ಯಾಗಿದ್ದಾರೆ. ಹೊಸದಾಗಿ ಸೋಂಕು ಅಂಟಿಕೊಂಡವರಲ್ಲಿ 39 ಜನರಲ್ಲಿ ಕೋವಿಡ್ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ. ಉಳಿದ 78 ಜನರಲ್ಲಿ ಯಾವುದೇ ಲಕ್ಷಣಗಳು ಗೋಚರಿಸಿಲ್ಲ. ಉಡುಪಿ ತಾಲೂಕಿನಲ್ಲಿ 58, ಕುಂದಾಪುರ ತಾಲೂಕಿನಲ್ಲಿ 35 ಮತ್ತು ಕಾರ್ಕಳ ತಾಲೂಕಿನಲ್ಲಿ 20 ಜನರಿಗೆ ಸೋಂಕು ತಗುಲಿದೆ. ಹೊರ ಜಿಲ್ಲೆಯ ನಾಲ್ವರಿಗೆ ವ್ಯಾಧಿ ಬಾಧಿಸಿದೆ. 7401 ಜನರು ಗುಣಮುಖ. ಉಡುಪಿ ಜಿಲ್ಲೆಯಲ್ಲಿ ಒಟ್ಟು 10,133 ಜನರಿಗೆ ವ್ಯಾಧಿ ಬಾಧಿಸಿದೆ. ಇವರಲ್ಲಿ 7401 ಮಂದಿ ಸೋಂಕು ಮುಕ್ತರಾಗಿದ್ದಾರೆ. ಜಿಲ್ಲೆಯ ಚೇತರಿಕೆ ದರ ಶೇ. 73.03ರಷ್ಟು ಇದೆ. ಭಾನುವಾರ 309 ಜನರು ಗುಣಮುಖರಾಗಿದ್ದಾರೆ. ಪ್ರಸಕ್ತ 2648 ಮಂದಿಯಲ್ಲಿ ವೈರಸ್ ಸಕ್ರಿಯವಾಗಿದೆ. ಜಿಲ್ಲೆಯಲ್ಲಿ 84 ಮಂದಿ ಸೋಂಕಿಗೆ ತುತ್ತಾದವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ. . ಮತ್ತೆ ಹೊಸದಾಗಿ 967 ಮಂದಿಯ ಗಂಟಲ ದ್ರವದ ಮಾದರಿ ಪಡೆಯಲಾಗಿದೆ. ಇವರದ್ದೂ ಸೇರಿ ಒಟ್ಟು 1330 ಜನರ ವರದಿ ಬರಲು ಬಾಕಿ ಇದೆ ಎಂದು ಡಿಎಚ್ಒ ವಿವರಿಸಿದ್ದಾರೆ.
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply