ಅಂದಗೆಟ್ಟ ಜಾಹೀರಾತು ಫಲಕಗಳಿಂದ ಸೌಂದರ್ಯ ನಾಶ

ಉಡುಪಿ: ಇಲ್ಲಿನ ರಾ. ಹೆ. 66ನ್ನು  ಸಂಪರ್ಕಿಸುವ ಕಲ್ಸಂಕ- ಅಂಬಾಗಿಲು ರಸ್ತೆಯಲ್ಲಿ  ಎಂದೋ ಅಳವಡಿಸಿದ್ದ ಜಾಹೀರಾತು ಫಲಕಗಳು ಬಿಸಿಲು ಗಾಳಿ ಮಳೆಗೆ ಬಸವಳಿದು ಅಂದಗೆಟ್ಟು ಬೇತಾಳನಂತೆ ಕಂಗೊಳಿಸುತ್ತಿವೆ. ರಾತ್ರಿ ವೇಳೆ ಕೆಲವರಿಗೆ ಭಯ ಹುಟ್ಟಿಸುವಂತಿವೆ.
ಸಾಲದೆಂಬಂತೆ ನಗರಸಭೆ ಅಳವಡಿಸಿದ್ದ ಟ್ಯೂಬ್ ಲೈಟ್ ಒಡೆದು ಚೂರಾಗಿ ಸುಂದರ ಉಡುಪಿ ಆಶಯಕ್ಕೆ ತಣ್ಣೀರೆರೆಚುವ ಹುನ್ನಾರದಲ್ಲಿವೆ.
ಈ ಬಗ್ಗೆ ಸಾರ್ವಜನಿಕರು ಸಾಕಷ್ಟು ಬಾರಿ ಸ್ಥಳೀಯಾಡಳಿತಕ್ಕೆ ಮನವರಿಕೆ ಮಾಡಿದ್ದರೂ ಪ್ರಯೋಜನ ಶೂನ್ಯ.
ಇನ್ನಾದರೂ ಎಚ್ಚೆತ್ತುಕೊಂಡು ಅಂದಗೆಟ್ಟ ಈ ಸ್ಥಿತಿಯನ್ನು ಸರಿಪಡಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply