ತೆರೆದ ಮನೆ ಕಾರ್ಯಕ್ರಮ

 ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಜನಜಾಗೃತಿ ಮೂಡಿಸುವ ಸಲುವಾಗಿ ಚೈಲ್ಡ್ಲೈನ್-1098 ಉಡುಪಿಯ ವತಿಯಿಂದ ತೆರೆದ ಮನೆ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡು ಅಲೆವೂರು, ಉಡುಪಿ ಇಲ್ಲಿ ಜರಗಿತು. ಚೈಲ್ಡ್ಲೈನ್-೧೦೯೮ ಉಡುಪಿಯ ಸಿಬ್ಬಂದಿಯವರಾದ ಕು ವೃಶಾಕ್‌ರವರು ಸ್ವಾಗತಿಸಿ, ಪ್ರಸ್ತಾವನೆಗೈದರು. ನಂತರ ಅಲೆವೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಯುತ ರೂಪೇಶ್ ದೇವಾಡಿಗರವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಕ್ಕಳ ಬೇಡಿಕೆಗಳಿಗೆ ಸಂಬoಧಿಸಿದoತೆ ಗ್ರಾಮ ಪಂಚಾಯತ್ ಅನುದಾನದ ಮೂಲಕ ಪರಿಹಾರವನ್ನು ನೀಡಬಹುದು ಎಂಬ ಸಲಹೆಯನ್ನು ನೀಡಿದರು. ಅಲ್ಲದೇ ಸ್ಥಳಿಯ ಸಮಸ್ಯೆಗಳ ಕುರಿತು ಗ್ರಾಮ ಪಂಚಾಯತ್‌ನ ಗಮನಕ್ಕೆ ತರಲು ತೆರೆದ ಮನೆ ಕಾರ್ಯಕ್ರಮವು ಉತ್ತಮ ವೇದಿಕೆ ಎಂದು ಪ್ರಶಂಸಿದರು. ಅಲ್ಲದೇ ಶೌಚಾಲಯಕ್ಕೆ ಸಂಬoಧಿಸಿದ ಸಮಸ್ಯೆಗಳಿಗೆ ಪ್ರತಿಕ್ರಿಯಿಸಿದ ಅವರು ಈಗಾಗಲೇ ಅಂತಹ ಪ್ರದೇಶಗಳಲ್ಲಿ ಅಲೆವೂರು ಗ್ರಾಮ ಪಂಚಾಯತ್ ವತಿಯಿಂದ ಸಾರ್ವಜನಿಕ ಶೌಚಾಲಯದ ವ್ಯವಸ್ಥೆಯನ್ನು ಮಾಡಿರುವುದಾಗಿ ತಿಳಿಸಿದರು. ಅಲ್ಲದೇ ಈ ಕುರಿತು ಹೆಚ್ಚಿನ ಮಾಹಿತಿಯನ್ನು ಬಯಸಿದ್ದಲ್ಲಿ ತಮ್ಮನ್ನು ಸಂಪರ್ಕಿಸಿದ್ದಲ್ಲಿ ಸಹಕರಿಸುವುದಾಗಿ ಭರವಸೆಯನ್ನು ನೀಡಿದರು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಂಗನವಾಡಿ ಮೇಲ್ವಿಚಾರಕರಾದ ಶ್ರೀಮತಿ ಶಾಂತಿ ಪ್ರಭುರವರು ಮಕ್ಕಳು ತಮ್ಮ ವೈಯಕ್ತಿಕ ಸಮಸ್ಯೆಗಳ ಕುರಿತು ಹೆತ್ತವರೊಂದಿಗೆ ಅಥವಾ ತೆರೆದ ಮನೆ ಕಾರ್ಯಗಳಲ್ಲಿ ಮುಕ್ತವಾಗಿ ಹಂಚಿಕೊಳ್ಳುವAತೆ ಸಲಹೆಯನ್ನು ನೀಡಿದರು. ಅಲ್ಲದೇ ತೀರಾ ವೈಯಕ್ತಿಕ ವಿಷಯವಾಗಿದ್ದಲ್ಲಿ ನಂಬಿಕಸ್ಥರ ಸಹಕಾರದೊಂದಿಗೆ ಸಂಬoಧಪಟ್ಟವರ ಗಮನಕ್ಕೆ ತಿಳಿಸಬೇಕೆಂಬ ಸಲಹೆಯನ್ನು ನೀಡಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಣಿಪಾಲ ಪೋಲಿಸ್ ಠಾಣೆಯ SIಯವರಾದ ಶ್ರೀಯುತ ನಾಗೇಶ್ ಕುಮಾರ್‌ರವರು ಸರ್ವರು ಕಾನೂನುನನ್ನು ಪಾಲಿಸಬೇಕೆಂದು ತಿಳಿಸಿದರು. ಅಲ್ಲದೇ ಮಕ್ಕಳು ಮನೆಯಲ್ಲಿ ಒಂಟಿಯಾಗಿರುವಾಗ ವಹಿಸಬೇಕಾದ ಅಗತ್ಯ ಜಾಗೃತೆಗಳ ಕುರಿತಾಗಿ ಕಿವಿ ಮಾತನ್ನು ತಿಳಿಸಿದರು. ಅಲ್ಲದೇ ಮಕ್ಕಳು ಸದಾ ಅಪರಿಚಿತರ ಕುರಿತಾಗಿ ಜಾಗೃತೆಯನ್ನು ವಹಿಸುವಂತೆ ತಿಳಿಸಿದರು. ಅಲ್ಲದೇ ಮೊಬೈಲ್‌ನಿಂದಾಗುವ ದುಷ್ಪರಿಣಾಮಗಳು, ಸೈಬರ್ ಅಪರಾಧ, ಮಕ್ಕಳ ಕಳ್ಳ ಸಾಗಾಣಿಕೆ, ಮಕ್ಕಳ ಭಿಕ್ಷಾಟನೆ, ಮಕ್ಕಳ ವೇಶ್ಯವಾಟಿಕೆ ಮತ್ತು ಮಕ್ಕಳ ಸ್ನೇಹಿ ಪೋಲಿಸ್ ವ್ಯವಸ್ಥೆಯ ಕುರಿತು ಮಾಹಿತಿಯನ್ನು ನೀಡಿದರು. ನಂತರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕರಾದ ಕು ಅಂಬಿಕಾರವರು ಮಕ್ಕಳ ಹಕ್ಕುಗಳ ರಕ್ಷಣೆ, ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯ, ಮಕ್ಕಳಿಗೆ ಸಂಬAಧಿಸಿದ ಯೋಜನೆಗಳು, ಕಾನೂನು ಕಾಯಿದೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಅಲ್ಲದೇ ಪೋಕ್ಸೋ ಕಾಯಿದೆ ಕುರಿತು ಹಾಗೂ ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶಗಳ ಕುರಿತು ಮಕ್ಕಳಿಗೆ ಮಾಹಿತಿಯನ್ನು ನೀಡಿದರು. ನಂತರ ಮಾತನಾಡಿದ ಸ್ಥಳೀಯ ಆಶಾ ಕಾರ್ಯಕರ್ತೆಯವರಾದ ಶ್ರೀಮತಿ ರಜಿತಾರವರು ಕೋವಿಡ್ ವ್ಯಾಕ್ಸಿನೇಷನ್‌ನ ಮಹತ್ವ, ಬೇಸಿಗೆ ಕಾಲದಲ್ಲಿ ಮಕ್ಕಳು ಅಗತ್ಯವಾಗಿ ಪಾಲಿಸಬೇಕಾದ ಆರೋಗ್ಯ ಕಾಳಜಿಗಳು ಮತ್ತು ವೈಯಕ್ತಿಕ ಸ್ವಚ್ಛತೆಗಳ ಕುರಿತಾಗಿ ಕಿವಿ ಮಾತನ್ನು ಹೇಳಿದರು. ನಂತರ ಅಧ್ಯಕ್ಷೀಯ ಭಾಷಣವನ್ನಾಡಿದ ಚೈಲ್ಡ್ಲೈನ್-೧೦೯೮, ಉಡುಪಿಯ ನಿರ್ದೇಶಕರಾದ ರಾಮಚಂದ್ರ ಉಪಾಧ್ಯಾಯರವರು ಸರ್ವ ಇಲಾಖೆಗಳ ಸಹಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ಅಲ್ಲದೇ ಚೈಲ್ಡ್ ಲೈನ್-೧೦೯೮, ಇದರ ಸೇವೆಗಳ ಕುರಿತಾದ ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಅಲೆವೂರು ಗ್ರಾಮ ಪಂಚಾಯತ್‌ನ ಕಾರ್ಯದರ್ಶಿಯವರಾದ ಶ್ರೀಯುತ ಶಾಂತಪ್ಪ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಕೃಷ್ಣಪ್ಪ, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯವರಾದ ಶ್ರೀಮತಿ, ಚೈಲ್ಡ್ ಲೈನ್-೧೦೯೮ ಉಡುಪಿಯ ಸದಸ್ಯರು, ಸ್ಥಳೀಯರು, ಮಕ್ಕಳು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಚೈಲ್ಡ್ ಲೈನ್-೧೦೯೮ ಉಡುಪಿಯ ಕೇಂದ್ರ ಸಂಯೋಜಕರಾದ ಕು. ಜ್ಯೋತಿಯವರು ಕಾರ್ಯಕ್ರಮವನ್ನು ನಿರೂಪಿಸಿ, ಚೈಲ್ಡ್ ಲೈನ್-1098 ಉಡುಪಿಯ ಸಿಬ್ಬಂದಿ ಕು. ಪ್ರಮೋದ್ ರವರು ವಂದಿಸಿದರು.

ಅಧಿಕಾರಿಗಳೊಂದಿಗಿನ ಮುಖಾಮುಖಿ ಸಂವಾದದ ಸಮಯದಲಿ ್ಲಮಕ್ಕಳಿಂದ ಮತ್ತು ಸಾರ್ವಜನಿಕರಿಂದ ಬಂದ ಅಹವಾಲು:
* ಶಾಲಾ ಆವರಣದಲ್ಲಿ ರಾತ್ರಿಯ ಸಮಯದಲ್ಲಿ ಮದ್ಯಪಾನ, ಗುಟ್ಕ ಹಾಗೂ ಧೂಮಪಾನ ಸೇವನೆ ಮಾಡುವವರ ವಿರುದ್ಧ ಕ್ರಮ ಜರುಗಿಸುವಂತೆ, ಶಾಲಾ ಅವಧಿಯಲ್ಲಿ ಶಾಲೆಯ ಮುಂಭಾಗ ಆವರಣ ಗೋಡೆಯ ಮೇಲೆ ಹಾಗೂ ಗೇಟಿನ ಸಮೀಪ ಗುಂಪು ಸೇರಿ ಹರಟೆ ಹೊಡೆಯುವವರ ವಿರುದ್ಧ ಕ್ರಮ ಜರುಗಿಸುವಂತೆ, ತಮ್ಮ ಮನೆಗಳಿಗೆ ಶೌಚಾಯದ ವ್ಯವಸ್ಥೆಯನ್ನು ಕೋರಿ, ಶಾಲೆಯನ್ನು ಶೌಚಾಲಯದ ದುರಸ್ಥಿಗೊಳಿಸುವಂತೆ, ಶಾಲೆಗೆ ಕಂಪ್ಯೂಟರ್ ವ್ಯವಸ್ಥೆಯನ್ನು ಕಲ್ಪಿಸುವಂತೆೆ, ಶಾಲೆಯಲ್ಲಿ ಕೈ ತೋಟವನ್ನು ನಿರ್ಮಿಸುವಂತೆ, ಅರ್ಧಕ್ಕೆ ನಿಂತಿರುವ ಶಾಲಾ ಆವರಣ ಗೋಡೆಯ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ, ಶಾಲಾ ಆಟದ ಮೈದಾನಕ್ಕೆ ಸೋಲಾರ್ ದೀಪ ಅಳವಡಿಸುವಂತೆ, ಶಾಲೆಗೆ ಕ್ರೀಡಾ ಸಾಮಗ್ರಿಗಳನ್ನು ನೀಡುವಂತೆ ಹಾಗೂ ಶಾಲೆಗೆ ಇಂಗು ಗುಂಡಿಯ ವ್ಯವಸ್ಥೆ ಮಾಡಿಕೊಡುವಂತೆ; ಮುಂತಾದ ಬೇಡಿಕೆಗಳನ್ನು ಮಕ್ಕಳು ಮತ್ತು ಪೋಷಕರು ಅಧಿಕಾರಿಗಳ ಗಮನಕ್ಕೆ ತಂದರು.

 
 
 
 
 
 
 
 
 
 
 

Leave a Reply