ಬೈಂದೂರು : ಹಿರಿಯನಾಗರಿಕರ ಸಭೆ

ಬೈಂದೂರು ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಜರಗಿದ ಹಿರಿಯ ನಾಗರಿಕರ ವೇದಿಕೆಯ ಸಭೆಯಲ್ಲಿ, ನಿವೃತ್ತ ಮುಖ್ಯ ಶಿಕ್ಷಕ, ಸಂಪನ್ಮೂಲ ವ್ಯಕ್ತಿ, ಉಪ್ಪುಂದ ಭಾಸ್ಕರ ಪ್ರಭು ಬೆಳ್ಗಲ್’ಕಟ್ಟೆಯವರು ಮುಖ್ಯ ಅತಿಥಿಗಳಾಗಿ ಆಗಮಿಸಿ ವಿಶೇಷ ಉಪನ್ಯಾಸ ನೀಡಿದರು.ಅತ್ಯಂತ ದುರ್ಗಮ ಪ್ರದೇಶದಲ್ಲಿರುವ ಹಳ್ಳಿಯ ಶಾಲೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ ಅವರು ತಮ್ಮ ವೃತಿ ಬದುಕನ್ನು ನೆನಪಿಸಿಕೊಂಡು ಕೆಲವು ಸ್ವಾರಸ್ಯಕರ, ಚಿಂತನಾರ್ಹ ಘಟಕಗಳನ್ನು ತಿಳಿಸಿ, ಕೆಲವು ಉಪಯುಕ್ತ ಮಾಹಿತಿಗಳನ್ನು ನೀಡಿದರು. ನಿಕಟಪೂರ್ವ ಅಧ್ಯಕ್ಷ ಎಮ್.ಗೋವಿಂದನವರು ಮಾತನಾಡಿ, ರೋಟರಿ ಸಂಸ್ಥೆ ಸಂಘಟಿಸಿದ ಮಲೇಷ್ಯಾ ಸಿಂಗಪುರ ಅಧ್ಯಯನ ಪ್ರವಾಸದ ಅನುಭವಗಳನ್ನು ಅಲ್ಲಿಯ ಸಂಸ್ಕೃತಿ ಮತ್ತು ಪರಂಪರೆ, ಜನಜೀವನ,ಶಿಸ್ತು,ವೃತ್ತಿ ಬದುಕು,ಯಾತ್ರಾ ಸ್ಥಳಗಳು,ಸ್ವಚ್ಛತೆ ಮತ್ತು ಕಠಿಣ ಕಾನೂನು ನೀತಿಸಂಹಿತೆಗಳ ಕುರಿತು ಮನಮುಟ್ಟುವಂತೆ ಮಾತನಾಡಿ ಎಲ್ಲರಿಗೂ ವಿದೇಶ ಪ್ರವಾಸದ ಆಸೆ ಚಿಗುರಿಸಿದರು. ವೇದಿಕೆಯ ಅಧ್ಯಕ್ಷ ಕೆ.ಪುಂಡಲೀಕ ನಾಯಕ್ ಅವರು ಮಾತನಾಡಿ ಭಾಸ್ಕರ ಪ್ರಭುಗಳ ಜೀವನಾನುಭವ,ಎಂ.ಗೋವಿಂದ ನವರ ವಿದೇಶ ಪ್ರವಾಸವನ್ನು ಉಲ್ಲೇಖಸಿ, ಪ್ರವಾಸಿ ತಾಣಗಳ ದರ್ಶನದಿಂದ ಮನೋಲ್ಲಾಸ ಮತ್ತು ಜೀವನಾನುಭವ ದೊರಕುತ್ತದೆ ಎಂದರು.ಉಪಾಧ್ಯಕ್ಷ ನಾಕಟ್ಟೆ ಜಗನ್ನಾಥ ಶೆಟ್ಟಿಯವರು ಉಪಸ್ಥಿತಿತರಿದ್ದು ಶುಭಕೋರಿದರು.

ಆರಂಭದಲ್ಲಿ ವಾಸುದೇವ ಹೆಚ್ ಅವರು ಪ್ರಾರ್ಥನೆ ಮಾಡಿದರು.ಕಾರ್ಯದರ್ಶಿ ಗೋವಿಂದ ಬಿಲ್ಲವ ಸ್ವಾಗತಿಸಿ, ಗತ ಸಭೆಯ ವರದಿ ಓದಿದರು.ಕೊನೆಯಲ್ಲಿ ಹಿರಿಯ ಸದಸ್ಯ ಜಿ.ತಿಮ್ಮಪ್ಪಯ್ಯನವರು ವಂದನಾರ್ಪಣೆ ಮಾಡಿದರು.

 
 
 
 
 
 
 
 
 
 
 

Leave a Reply