ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೆ ಗಮನ ಕೊಡುವುದು ಅಗತ್ಯ~ವಂ. ಹೇಮಚಂದ್ರ ಕುಮಾರ್

ಶತಮಾನ  ಪೂರೈಸಿದ ಇಲ್ಲಿನ ಸಿಎಸ್ಬಿ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯಲ್ಲಿ ಹೋಮ್ ಕೇರ್ (ಮನೆ ಆರೈಕೆ) ಸೇವೆ ಮತ್ತು ಹೊಸ ನೇತ್ರಶಾಸ್ತ್ರ ವಿಭಾಗ ಶುಕ್ರವಾರ ಆರಂಭಗೊಂಡಿತು.
ಸಿಎಸ್ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಬಿಷಪ್ ವಂ. ಹೇಮಚಂದ್ರ ಕುಮಾರ್ ನೂತನ ಸೇವೆಗಳಿಗೆ ಚಾಲನೆ ನೀಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೆ ಗಮನ ಕೊಡುವುದು ಅಗತ್ಯ. ಈ ನಿಟ್ಟಿನಲ್ಲಿ ಆಸ್ಪತ್ರೆ ಸೇವೆ ಶ್ಲಾಘನೀಯ ಎಂದರು.
ಸಿಎಸ್ಐ ವಿಮೆನ್ಸ್ ಫೆಲೊಶಿಪ್ ಅಧ್ಯಕ್ಷೆ ಭಾರತಿ ಹೇಮಚಂದ್ರ, ಸಿಎಸ್ಐ ಚರ್ಚ್  ಧರ್ಮಗುರು ರೆ. ಐವನ್ ಸೋನ್ಸ್, ಆಸ್ಪತ್ರೆಯ ನೇತ್ರ ತಜ್ಞರಾದ ಡಾ. ನರೇಂದ್ರ ಶೆಣೈ ಮತ್ತು ಡಾ. ಅರ್ಥರ್ ರೋಡ್ರಿಗಸ್ ಹಾಗೂ ಹಿರಿಯ ವೈದ್ಯಾಧಿಕಾರಿ ಡಾ. ಗಣೇಶ್ ಕಾಮತ್ ಅತಿಥಿಯಾಗಿದ್ದರು.
ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆ ಡಾ. ಸುಶಿಲ್ ಜತನ್ನ, ಹಿರಿಯ ನಾಗರಿಕರು ಮತ್ತು ಹಾಸಿಗೆ ಹಿಡಿದಿರುವ ಅಥವಾ ದೈಹಿಕ ಪರಿಶ್ರಮ ಕ್ಕೊಳಗಾಗಿ ದುರ್ಬಲರಾಗಿರುವ ರೋಗಿಗಳಿಗೆ ಹೋಮ್ ಕೇರ್ ಸೂಕ್ತ ಪರಿಹಾರವಾಗಿದೆ. ಹಿಂದೆ ಚಾಲ್ತಿಯಲ್ಲಿದ್ದ ಕುಟುಂಬ ವೈದ್ಯ ಪದ್ಧತಿ ಪ್ರಸ್ತುತ ಗೌಣವಾಗಿರುವ ಹಿನ್ನೆಲೆಯಲ್ಲಿ ಕ್ಲಿನಿಕ್ ಅಥವಾ ಆಸ್ಪತ್ರೆಗೆ ಭೇಟಿ ನೀಡಲು ಸಾಧ್ಯವಾಗದ ದಿನನಿತ್ಯದ ತಪಾಸಣೆಯ ಅಗತ್ಯವಿರುವ ರೋಗಿಗಳ ಅಗತ್ಯತೆಗಳನ್ನು ಪೂರೈಸಲು  ಶತಮಾನ ಪೂರೈಸಿದ ಇಲ್ಲಿನ ಸಿಎಸ್ಬಿ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯಲ್ಲಿ ಹೋಮ್ ಕೇರ್ (ಮನೆ ಆರೈಕೆ) ಸೇವೆ ಮತ್ತು ಹೊಸ ನೇತ್ರಶಾಸ್ತ್ರ ವಿಭಾಗ ಶುಕ್ರವಾರ ಆರಂಭಗೊಂಡಿತು.
ಸಿಎಸ್ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಬಿಷಪ್ ವಂ. ಹೇಮಚಂದ್ರ ಕುಮಾರ್ ನೂತನ ಸೇವೆಗಳಿಗೆ ಚಾಲನೆ ನೀಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೆ ಗಮನ ಕೊಡುವುದು ಅಗತ್ಯ. ಈ ನಿಟ್ಟಿನಲ್ಲಿ ಆಸ್ಪತ್ರೆ ಸೇವೆ ಶ್ಲಾಘನೀಯ ಎಂದರು. ಸಿಎಸ್ಐ ವಿಮೆನ್ಸ್ ಫೆಲೊಶಿಪ್ ಅಧ್ಯಕ್ಷೆ ಭಾರತಿ ಹೇಮಚಂದ್ರ, ಸಿಎಸ್ಐ ಚರ್ಚ್  ಧರ್ಮಗುರು ರೆ. ಐವನ್ ಸೋನ್ಸ್, ಆಸ್ಪತ್ರೆಯ ನೇತ್ರ ತಜ್ಞರಾದ ಡಾ. ನರೇಂದ್ರ ಶೆಣೈ ಮತ್ತು ಡಾ. ಅರ್ಥರ್ ರೋಡ್ರಿಗಸ್ ಹಾಗೂ ಹಿರಿಯ ವೈದ್ಯಾಧಿಕಾರಿ ಡಾ. ಗಣೇಶ್ ಕಾಮತ್ ಅತಿಥಿಯಾಗಿದ್ದರು.
ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆ ಡಾ. ಸುಶಿಲ್ ಜತನ್ನ, ಹಿರಿಯ ನಾಗರಿಕರು ಮತ್ತು ಹಾಸಿಗೆ ಹಿಡಿದಿರುವ ಅಥವಾ ದೈಹಿಕ ಪರಿಶ್ರಮಕ್ಕೊಳಗಾಗಿ ದುರ್ಬಲರಾಗಿರುವ ರೋಗಿಗಳಿಗೆ ಹೋಮ್ ಕೇರ್ ಸೂಕ್ತ ಪರಿಹಾರವಾಗಿದೆ. ಹಿಂದೆ ಚಾಲ್ತಿಯಲ್ಲಿದ್ದ ಕುಟುಂಬ ವೈದ್ಯ ಪದ್ಧತಿ ಪ್ರಸ್ತುತ ಗೌಣವಾಗಿರುವ ಹಿನ್ನೆಲೆಯಲ್ಲಿ ಕ್ಲಿನಿಕ್ ಅಥವಾ ಆಸ್ಪತ್ರೆಗೆ ಭೇಟಿ ನೀಡಲು ಸಾಧ್ಯವಾಗದ ದಿನನಿತ್ಯದ ತಪಾಸಣೆಯ ಅಗತ್ಯವಿರುವ ರೋಗಿಗಳ ಅಗತ್ಯತೆಗಳನ್ನು ಪೂರೈಸಲು ಲೊಂಬಾರ್ಡ್  ಮನೆ ಆರೈಕೆ ಸೇವೆ ಸಹಕಾರಿ.
ಅಗತ್ಯವುಳ್ಳವರಿಗೆ ಹಿರಿಯ ವೈದ್ಯಾಧಿಕಾರಿ ಡಾ. ಗಣೇಶ್ ಕಾಮತ್ ಸಂಜೆ 3ರಿಂದ 5 ಗಂಟೆ ವೇಳೆಯಲ್ಲಿ ರೋಗಿಗಳ ಮನೆಗಳಿಗೇ ತೆರಳಿ ವೈದ್ಯಕೀಯ ತಪಾಸಣೆ, ಚಿಕಿತ್ಸೆ ನೀಡುವರು. ಜೊತೆಗೆ ಶುಶ್ರೂಷೆ ಆರೈಕೆ, ಪ್ರಯೋಗಾಲಯ ಪರೀಕ್ಷೆ, ಫಿಸಿಯೋಥೆರಪಿ ಮತ್ತು ಮಾಸಿಕ ಔಷಧಿಗಳ ವಿತರಣೆಯನ್ನೂ ಮಾಡಲಾಗುವುದು ಎಂದರು.
ನೂತನವಾಗಿ ಆರಂಭಿಸಲಾದ ನೇತ್ರಶಾಸ್ತ್ರ ವಿಭಾಗದಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಸೇರಿದಂತೆ ಎಲ್ಲಾ ವಿಧದ ನೇತ್ರ ಚಿಕಿತ್ಸೆಯನ್ನು ಕೈಗೆಟುಕುವ ದರದಲ್ಲಿ ಒದಗಿಸುವ ಗುರಿ ಹೊಂದಲಾಗಿದೆ ಎಂದರು.
ನರ್ಸಿಂಗ್  ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸಿಲೆಸ್ಟಿನ್ ಸುಸಾನ್ ಸ್ವಾಗತಿಸಿ, ಸಾರ್ವಜನಿಕ ಸಂಪರ್ಕಾಧಿಕಾರಿ  ರೋಹಿ ರತ್ನಾಕರ್ ವಂದಿಸಿದರು. ಆಡಳಿತಾಧಿಕಾರಿ ಡೀನಾ ಪಿ. ವೈದ್ಯರಾದ ಶ್ವೇತಾ, ಡಾ. ಪೆರಲಾಯ ಮತ್ತು ಡಾ, ಗೌತಮ್ ಸಹಕರಿಸಿದರು.   ಲೊಂಬಾರ್ಡ್ ಮನೆ ಆರೈಕೆ ಸೇವೆ ಸಹಕಾರಿ. ಅಗತ್ಯವುಳ್ಳವರಿಗೆ ಹಿರಿಯ ವೈದ್ಯಾಧಿಕಾರಿ ಡಾ. ಗಣೇಶ್ ಕಾಮತ್ ಸಂಜೆ 3ರಿಂದ 5 ಗಂಟೆ ವೇಳೆಯಲ್ಲಿ ರೋಗಿಗಳ ಮನೆಗಳಿಗೇ ತೆರಳಿ ವೈದ್ಯಕೀಯ ತಪಾಸಣೆ, ಚಿಕಿತ್ಸೆ ನೀಡುವರು.
ಜೊತೆಗೆ ಶುಶ್ರೂಷೆ ಆರೈಕೆ, ಪ್ರಯೋಗಾಲಯ ಪರೀಕ್ಷೆ, ಫಿಸಿಯೋಥೆರಪಿ ಮತ್ತು ಮಾಸಿಕ ಔಷಧಿಗಳ ವಿತರಣೆಯನ್ನೂ ಮಾಡಲಾಗುವುದು ಎಂದರು. ನೂತನವಾಗಿ ಆರಂಭಿಸಲಾದ ನೇತ್ರಶಾಸ್ತ್ರ ವಿಭಾಗದಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಸೇರಿದಂತೆ ಎಲ್ಲಾ ವಿಧದ ನೇತ್ರ ಚಿಕಿತ್ಸೆಯನ್ನು ಕೈಗೆಟುಕುವ ದರದಲ್ಲಿ ಒದಗಿಸುವ ಗುರಿ ಹೊಂದಲಾಗಿದೆ ಎಂದರು.
ನರ್ಸಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸಿಲೆಸ್ಟಿನ್ ಸುಸಾನ್ ಸ್ವಾಗತಿಸಿ, ಸಾರ್ವಜನಿಕ ಸಂಪರ್ಕಾಧಿಕಾರಿ  ರೋಹಿ ರತ್ನಾಕರ್ ವಂದಿಸಿದರು. ಆಡಳಿತಾಧಿಕಾರಿ ಡೀನಾ ಪಿ. ವೈದ್ಯರಾದ ಶ್ವೇತಾ, ಡಾ. ಪೆರಲಾಯ ಮತ್ತು ಡಾ, ಗೌತಮ್ ಸಹಕರಿಸಿದರು.
 
 
 
 
 
 
 
 

Leave a Reply