ಕಸಾಪ ವತಿಯಿಂದ ಕನ್ನಡ ಶಾಲೆಗೆ ಕೊಡುಗೆ.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ ಹಾಗೂ ಉಡುಪರತ್ನ ಪ್ರತಿಷ್ಠಾನ ಕೊಡವೂರು ವತಿಯಿಂದ*ಸರಕಾರಿ ಶಾಲೆ ಉಳಿಸಿ, ಬೆಳೆಸಿ ಅಭಿಯಾನ* ದಲ್ಲಿ ಹಟ್ಟಿಕದ್ರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಮಾರು ಇಪ್ಪತ್ತು ಸಾವಿರಕ್ಕೂ ಮಿಕ್ಕಿ ವೆಚ್ಚದ ಪುಸ್ತಕಗಳನ್ನುವಿ ತರಿಸಲಾಯಿತು.

ಈ ಸಂದರ್ಭದಲ್ಲಿ ರಾಘವೇಂದ್ರ ಉಡುಪ ಸಹಕಾರದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ನರೇಂದ್ರ ಉಡುಪ, ಪತ್ರಕರ್ತರು ಹಾಗೂ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಸಹಕಾರ್ಯದರ್ಶಿ ಮೋಹನ ಉಡುಪ ಹಂದಾಡಿ, ಪತ್ರಕರ್ತರು, ಕಸಾಪ ಉಡುಪಿ ಘಟಕದ ಕಾರ್ಯದರ್ಶಿ ಜನಾರ್ದನ್ ಕೊಡವೂರು, ಮುಖ್ಯ ಶಿಕ್ಷಕ ಸುಧಾಕರ್ ಎಮ್., ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್, ಪ್ರಕಾಶ ಬಿಲ್ಲವ,
ಆಶಾ, ಊರಿನ ಹಿರಿಯರಾದ ಕ್ರಷ್ಣಯ್ಯ ಪೂಜಾರಿ ಹಾಗು ಪೋಷಕರು ಉಪಸ್ಥಿತರಿದ್ದರು.

ಶಿಕ್ಷಕರಾದ ಅನಿತಾ ಕಾರ್ಯಕ್ರಮವನ್ನು ನಿರೂಪಿಸಿ, ರವೀಂದ್ರ ವಂದಿಸಿದರು.

 
 
 
 
 
 
 
 

Leave a Reply