ಮಾತೃ ಮಂಡಳಿ ಸೇವಾ ಟ್ರಸ್ಟ್ ವತಿಯಿಂದ ಭಜನಾ ತರಬೇತಿ ಉದ್ಘಾಟನೆ

ಮಾತೃ ಮಂಡಳಿ ಸೇವಾ ಟ್ರಸ್ಟ್ (ರಿ)ಪಿತ್ರೋಡಿ, ಉದ್ಯಾವರ ವತಿಯಿಂದ ಭಜನಾ ತರಬೇತಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಭಜನಾ ಗುರುಗಳಾದ ಮಾಯ ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸವಿತಾ ಶೆಟ್ಟಿ ಉಪಸ್ಥಿತರಿದ್ದರು.ಮಾತೃ ಮಂಡಳಿ ಸೇವಾ ಟ್ರಸ್ಟ್ ನ ಟ್ರಸ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ನಯನಾ ಗಣೇಶ್ ಪ್ರಸ್ತಾವನೆ ಗೈದರು.ಟ್ರಸ್ಟಿ ಗಳಾದ ಸುಮತಿ ಯು ಮೈಂದನ್, ಆಶಾ ಮೈಂದನ್, ಚಂದ್ರಾ ಭಾಸ್ಕರ್,ಸರಸ್ವತಿ ಮೆಂಡನ್, ಜ್ಯೋತಿ ಕುಮಾರ್ ,ಕುಸುಮ ವಿಶ್ವನಾಥ್, ಮಮತಾ ಖಗಾಧರ್ ಹಾಗೂ ಸಂಗೀತಾ ಉಪಸ್ಥಿತರಿದ್ದರು. ಮಾತೃ ಮಂಡಳಿ ಸೇವಾ ಟ್ರಸ್ಟ್ ಉದ್ಯಾವರ ವತಿಯಿಂದ ಮಾಯ ಕಾಮತ್ ರನ್ನು ಗೌರವಿಸಲಾಯಿತು. ಪ್ರೇಮಾ ಶಿವದಾಸ್ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 

Leave a Reply