ದೇರೆಬೈಲು ವಾಸುದೇವ ತಂತ್ರಿಯವರಿಗೆ ರಾಜ್ಯಪಾಲರಿಂದ ಅಭಿನಂದನೆ

ಅಯೋಧ್ಯೆಯಲ್ಲಿ ನಡೆದ ರಾಷ್ಟ್ರಮಟ್ಟದ ಸುಭಾಷಿತ ಕಂಠಪಾಠ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದ ಉಡುಪಿ ಎಸ್.ಎಮ್ಎಸ್.ಪಿ.ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿಯಾದ ದೇರೆಬೈಲು ವಾಸುದೇವ ತಂತ್ರಿ ಇವರಿಗೆ ದಿನಾಂಕ ೨೪-೦೬-೨೦೨೪ರಂದು ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಥಾವರ್ ಛಂದ್ ಗೆಹ್ಲೋಟವರು ಬೆಂಗಳೂರಿನ  ರಾಜಭವನದಲ್ಲಿ ಅಭಿನಂದಿಸಿ ಗೌರವಿಸಿದರು 
ಮಾರ್ಚ್ ತಿಂಗಳಿನಲ್ಲಿ ಅಯೋಧ್ಯೆಯಲ್ಲಿ ನಡೆದ ರಾಷ್ಟ್ರಮಟ್ಟದ  ಶಾಸ್ತ್ರೀಯ ಸ್ಪರ್ಧೆಯಲ್ಲಿ ಕರ್ನಾಟಕ  ರಾಜ್ಯವು ವಿಜಯ ವೈಜಯಂತಿ ಪುರಸ್ಕಾರವನ್ನು ಪಡೆದಿತ್ತು. ಕರ್ನಾಟಕದ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ಆಗಿರುವ  ಶ್ರೀಮತಿ ಅಹಲ್ಯಾ ಶರ್ಮಾ ಇವರು ಉಪಸ್ಥಿತರಿದ್ದರು.
 
 
 
 
 
 
 
 

Leave a Reply