ಗೋಸಂತತಿ ರಕ್ಷಣೆಗೆ ಹೆಚ್ಚಿನ ಮಹತ್ವ- ಡಾ.ಭರತ್ ಶೆಟ್ಟಿ

ಗೋಸಂತತಿ ರಕ್ಷಣೆಗೆ ಹೆಚ್ಚಿನ ಮಹತ್ವ, ಗೋಶಾಲೆಗಳ ಸಂಖ್ಯೆ 100 ಕ್ಕೆ ಏರಿಕೆ, ಈ ಉದ್ದೇಶಕ್ಕೆ 50 ಕೋಟಿ ಮೀಸಲು, ಕರಾವಳಿಗೆ 1880 ಕೋಟಿ, ಮಂಗಳೂರಿನಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಹಾಸ್ಟೆಲ್, ಮುಜುರಾಯಿ ದೇವಾಲಯಗಳ ಅಭಿವೃದ್ಧಿಗೆ ದೇವಾಲಯಗಳಿಗೆ ಸ್ವಾಯತ್ತೆ, ದೇಗುಲಗಳ ಅಭಿವೃದ್ಧಿಗೆ 168 ಕೋಟಿ, 250 ಕೋಟಿ ರೂ ಪ್ರಧಾನ ಮಂತ್ರಿ ಮತ್ಥ್ಯ ಸಂಪತ್ತು ಯೋಜನೆಗೆ ನಿಗದಿ, ಮಂಗಳೂರು ಬಂದರು ವಿಸ್ತರಣೆಗೆ 350 ಕೋಟಿ ರೂ ಮೀಸಲು, ವೈದ್ಯಕೀಯ ನೆರವು ನೀಡುವ ಯಶಸ್ವಿನಿ ಯೋಜನೆ, ಮಂಗಳೂರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ವಸತಿ ಶಾಲೆ, ಪರಿಸರ ಸ್ನೇಹಿ ಪ್ರವಾಸೋದ್ಯಮ, ಅಮೃತ ನಗರೋತ್ಥಾನಕ್ಕೆ 3885 ಕೋಟಿ ಹೀಗೆ ಹಲವು ಯೋಜನೆಗಳ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಮಾನ್ಯ ಸಿಎಂ ಬಸವರಾಜ್ ಬೊಮ್ಮಾಯಿಯವರು ಮಂಡಿಸಿದ ಚೊಚ್ಚಲ ಬಜೆಟ್ ಪೂರಕವಾಗಿ ಎಂದು ಮಂಗಳೂರು ನಗರ ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿ ‌ಹೇಳಿದ್ದಾರೆ.

 
 
 
 
 
 
 
 
 
 
 

Leave a Reply