ನಾಪತ್ತೆಯಾಗಿರುವ ನಾಲ್ವರು ಮೀನುಗಾರರು: ಓರ್ವ ಮೀನುಗಾರನ ಮೃತ ದೇಹ‌ ಪತ್ತೆ

ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಕೊಡೇರಿ ಬಂದರಿನ ಸಮೀಪ ಭಾನುವಾರ ಮಧ್ಯಾಹ್ನ ನಡೆದ ದೋಣಿ ಅವಘಡದಲ್ಲಿ ನಾಪತ್ತೆಯಾಗಿರುವ ನಾಲ್ವರು ಮೀನುಗಾರರ ಪೈಕಿ ಓರ್ವ ಮೀನುಗಾರನ ಮೃತದೇಹ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ.


ಪತ್ತೆಯಾದ ಮೃತದೇಹವು ಉಪ್ಪುಂದ ಗ್ರಾಮದ ಬಿ. ನಾಗ (52) ಅವರದ್ದು ಎಂದು ಗುರುತಿಸಲಾಗಿದೆ. ಕೊಡೇರಿ ಹೊಸಹಿತ್ಲು ಸಮುದ್ರತೀರದಲ್ಲಿ ಮೃತದೇಹ ಕಂಡುಬಂದಿದೆ.

ಭಾನುವಾರ ಮಧ್ಯಾಹ್ನ ಸಾಗರಶ್ರೀ ನಾಡದೋಣಿಯು ಅವಘಡಕ್ಕೆ ಈಡಾಗಿತ್ತು. ಅದರಲ್ಲಿದ್ದ 12 ಮೀನುಗಾರರ ಪೈಕಿ ನಾಲ್ವರು ನಾಪತ್ತೆಯಾಗಿದ್ದರೆ, 8 ಮಂದಿ ಯನ್ನು ರಕ್ಷಿಸಲಾಗಿತ್ತು. ಕರಾವಳಿ ಕಾವಲು ಪೊಲೀಸ್ ಮತ್ತು ಕೋಸ್ಟ್ ಗಾರ್ಡ್‌ನಿಂದ ನಾಪತ್ತೆಯಾಗಿರುವ ಮೀನುಗಾರರ ಶೋಧ ಕಾರ್ಯ ಮುಂದುವರೆದಿದೆ.

ಉಪ್ಪುಂದ ಗ್ರಾಮದ ಮೀನುಗಾರರಾದ ಲಕ್ಷ್ಮಣ (37), ಶೇಖರ ಜಿ. (40) ಮತ್ತು ಮಂಜುನಾಥ (40) ಅವರು ಇನ್ನೂ ಪತ್ತೆಯಾಗಿಲ್ಲ. ಭಾನುವಾರ ಸಂಜೆ ಘಟನಾ ಸ್ಥಳಕ್ಕೆ ಭೇಟಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ, ಸಿಎಸ್ಪಿ ಎಸ್ಪಿ ಚೇತನ್ ಆರ್., ಉಡುಪಿ ಎಸ್ಪಿ ವಿಷ್ಣುವರ್ಧನ್ ಭೇಟಿ ನೀಡಿ, ಮುಂದಿನ ಕಾರ್ಯಾಚರಣೆಯ ಬಗ್ಗೆ ಮಾರ್ಗದರ್ಶನ ನೀಡಿದ್ದರು. ಅದರಂತೆ ಪ್ರಸ್ತುತ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply