ಧಾರ್ಮಿಕ ಕಾರ್ಯಕ್ರಮಗಳ ನಿಯಮಾವಳಿ ಸಡಿಲಿಸಲು ಸಚಿವ ಕೋಟ ಮನವಿ

ಮಂಗಳೂರು: ಕೊರೊನಾ ಸೋಂಕಿನ ಮುಂಜಾಗ್ರತೆ ಕ್ರಮವಾಗಿ ಧಾರ್ಮಿಕ ಕಾರ್ಯಕ್ರಮ ನಿಷೇಧಿಸಿರುವ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಪೂಜಾ ಪದ್ಧತಿ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಅದರಿಂದ ಕೋವಿಡ್ ಗೈಡ್ ಲೈನ್ ವ್ಯಾಪ್ತಿಯೊಳಗೆ ಧಾರ್ಮಿಕ ಕಾರ್ಯಕ್ರಮಗಳ ನಿಯಮ ಸಡಿಲಗೊಳಿಸಲು ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಿಎಂ ಯಡಿಯೂರಪ್ಪರಿಗೆ ವಿನಂತಿಸಿದ್ದಾರೆ.

ಹೊಸ ಸುತ್ತೋಲೆಯಂತೆ ಉಳಿದೆಲ್ಲ ಸಭೆ, ಸಮಾರಂಭಗಳಿಗೆ ಸೀಮಿತ ಸಂಖ್ಯೆಯಲ್ಲಿ ಅವಕಾಶ ನೀಡುತ್ತಿದ್ದು, ಎಲ್ಲ ಕಾರ್ಯಕ್ರಮಗಳಿಗೆ ಕೋವಿಡ್ – 19 ನಿಯಮ ಕಡ್ಡಾಯಗೊಳಿಸಲಾಗಿದೆ. ಆದರೆ, ಧಾರ್ಮಿಕ ಕ್ಷೇತ್ರಕ್ಕೆ ಸೀಮಿತಗೊಳಿಸಿ ಕಾರ್ಯಕ್ರಮ ನಿಷೇಧಿಸಿರುವುದರಿಂದ ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಧಾರ್ಮಿಕ ಕೆಲಸಗಳಿಗೆ ತೊಂದರೆಯಾಗುತ್ತಿದೆ.ಈಗಾಗಲೇ ಅನೇಕ ಕಡೆ ಧಾರ್ಮಿಕ ಚೌಕಟ್ಟಿನ ಯಕ್ಷಗಾನ ಹರಕೆ ಬಯಲಾಟ, ನೇಮೋತ್ಸವ, ದೇವತಾ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಇತ್ಯಾದಿಗೆ ಸಮಯ ನಿಗದಿಪಡಿಸಿದ್ದು, ಪೂರ್ಣ ಸಿದ್ಧತೆ ಮಾಡಿಕೊಂಡಿದ್ದಾರೆ. 

ಈ ಹಿನ್ನೆಲೆಯಲ್ಲಿ ಕೋವಿಡ್ – 19 ನಿಯಮಗಳ ವ್ಯಾಪ್ತಿಯೊಳಗೆ ಇತರ ಕಾರ್ಯಕ್ರಮಗಳಿಗೆ ಸಡಿಲಿಕೆ ನೀಡಿರುವಂತೆ ಧಾರ್ಮಿಕ ಕಾರ್ಯಕ್ರಮಗಳಿಗೂ ಕೊಡುವ ಮೂಲಕ ಭಕ್ತಾದಿಗಳ ಸಂಕಷ್ಟ ಪರಿಹರಿಸಬೇಕೆಂದು ಕೋರುತ್ತೇನೆ ಎಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾರೆ.

 
 
 
 
 
 
 
 
 
 
 

Leave a Reply