ಪುಲ್ವಾಮಾ ಸೇತುವೆ ಅಡಿ ಸುಧಾರಿತ ಸ್ಪೋಟಕ ಪತ್ತೆ~ಭದ್ರತಾ ಪಡೆಯ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟುಜಾನ್‌ ಗ್ರಾಮದ ಸೇತುವೆ ಅಡಿ ಭಾಗದಲ್ಲಿ ಐಇಡಿಯನ್ನು (ಸುಧಾರಿತ ಸ್ಪೋಟಕ ಸಾಧನ) ಭದ್ರತಾ ಪಡೆಯು ವಶಕ್ಕೆ ಪಡೆದಿದೆ. ಈ ಮೂಲಕ ಆಗಬಹುದಾಗಿದ್ದ ಭಾರೀ ದುರಂತವನ್ನು ತಪ್ಪಿಸಿದಂತಾಗಿದೆ ಎಂದು ವರದಿಯಾಗಿದೆ.

ಟುಜಾನ್‌ ಗ್ರಾಮದ ಸೇತುವೆಯನ್ನು ಸ್ಫೋಟಿಸಲು ಸಂಚು ಹೂಡಿ ಉಗ್ರರು ಐಇಡಿಯನ್ನು ಅಡಗಿಸಿಟ್ಟಿದ್ದರು. ಭದ್ರತಾ ಪಡೆಯ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿಸಿದಂತಾಗಿದೆ.

ಪುಲ್ವಾಮಾ ಜಿಲ್ಲೆಯ ಬಡ್ಗಾಮ್‌ ಅನ್ನು ಸಂಪರ್ಕಿಸುವ ಈ ರಸ್ತೆಯನ್ನು ಭದ್ರತಾ ಪಡೆಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳಲು ಉಪಯೋಗಿಸುತ್ತಿದ್ದರು ಎಂದು ಕಾಶ್ಮೀರದ ಐಜಿಪಿ ವಿಜಯ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

 
 
 
 
 
 
 
 
 
 
 

Leave a Reply