ಉಪ್ಪೂರು ಬ್ರಾಹ್ಮಣ ಸಭಾದಿಂದ ನೆರವು

ಉಡುಪಿ: ಕೋವಿಡ್ 19ನಿಂದಾಗಿ ಅಡುಗೆ,  ಪೌರೋಹಿತ್ಯ ಇತ್ಯಾದಿ ಕೆಲಸಗಳಿಲ್ಲದೆ ಜೀವನ ನಿರ್ವಹಣೆಗೆ ತೊಂದರೆ ಅನುಭವಿಸುತ್ತಿದ್ದ 18 ವಿಪ್ರ ಕುಟುಂಬಗಳಿಗೆ ತಲಾ 5 ಸಾವಿರ ರೂ.ನಂತೆ ಒಟ್ಟು 90 ಸಾವಿರ  ನಗದು ನೆರವನ್ನು ಶನಿವಾರ ಉಪ್ಪೂರು ಶ್ರೀ ಸಿದ್ಧಿವಿನಾಯಕ ದೇವಸ್ಥಾನ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ  ನೀಡಲಾಯಿತು.

ಇದೇ ಸಂದರ್ಭದಲ್ಲಿ ವಲಯದ 20 ವಿದ್ಯಾರ್ಥಿಗಳಿಗೆ ಒಟ್ಟು 21 ಸಾವಿರ ರೂ. ವಿದ್ಯಾರ್ಥಿ ವೇತನ  ಮತ್ತು ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ  60 ಸಾವಿರ ರೂ.ನಷ್ಟು ನಿಬಡ್ದಿ ಸಾಲ ವಿತರಿಸಲಾಯಿತು.

ಸಮಿತಿ  ಅಧ್ಯಕ್ಷ  ಪಿ. ಸುಬ್ರಹ್ಮಣ್ಯ ಭಟ್  ಅಧ್ಯಕ್ಷತೆ ವಹಿಸಿದ್ದರು. ಅಭ್ಯಾಗತರಾಗಿದ್ದ ಮಂಜುನಾಥ ಭಟ್  ಸಹಾಯಧನ ವಿತರಿಸಿದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply