Janardhan Kodavoor/ Team KaravaliXpress
26.6 C
Udupi
Thursday, August 11, 2022
Sathyanatha Stores Brahmavara

ಉಪನ್ಯಾಸಕಿ ಪರ ತೀರ್ಪು

ಉಪನ್ಯಾಸಕಿ ಒಬ್ಬರಿಗೆ ತಾಂತ್ರಿಕ ದೋಷವಿದ್ದ ಮಿಕ್ಸರ್ ಗ್ರೈಂಡರ್ ಮಾರಾಟ ಮಾಡಿದ್ದ ಉಡುಪಿಯ ಪೈ ಇಂಟರ್ನ್ಯಾಷನಲ್ ಹಾಗೂ ಪ್ರೀತಿ ಕಿಚನ್ ಅಪ್ಲೆಯನ್ಸಸ್ ಪ್ರೈ.ಲಿ. ಪರಿಹಾರ ಒದಗಿಸಬೇಕೆಂದು ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ನೀಡಿದೆ.

 

ಉಪನ್ಯಾಸಕಿಯ ಪರ ತೀರ್ಪು ನೀಡಿದ ಜಿಲ್ಲಾ ಗ್ರಾಹಕರ ಆಯೋಗ 20,189 ರೂಪಾಯಿ ಪರಿಹಾರ ಒದಗಿಸಬೇಕೆಂದು ಆದೇಶಿಸಿದೆ. ಉಪನ್ಯಾಸಕಿ ಅನಿತಾ ಅವರು ಕಳೆದ ಎರಡು ವರ್ಷಗಳ ಹಿಂದೆ ಪೈ ಇಂಟರ್ನ್ಯಾಷನಲ್ ನಲ್ಲಿ 4239/- ರೂಪಾಯಿಗಳನ್ನು ಕೊಟ್ಟು ಪ್ರೀತಿ ಮಿಕ್ಸರ್ ಗ್ರೈಂಡರ್ ಅನ್ನು ಖರೀದಿ ಮಾಡಿದ್ದರು.

ಆದರೆ ಮೂರೇ ತಿಂಗಳಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡಿದೆ. ಮಿಕ್ಸಿಗೆ ಎರಡು ವರ್ಷಗಳ ಗ್ಯಾರಂಟಿ ಮತ್ತು 5 ವರ್ಷಗಳ ವಾರೆಂಟಿ ಇರುವುದರಿಂದ ಹೊಸ ಮಿಕ್ಸಿಯನ್ನ ಕೊಡುವಂತೆ ಗ್ರಾಹಕಿ ಮನವಿ ಮಾಡಿದ್ದರು. ಆದರೆ ಪೈ ಇಂಟರ್ನ್ಯಾಷನಲ್ ನವರು ಬದಲಿ ಮಿಕ್ಸಿಯನ್ನು ಕೊಡಲು ಒಪ್ಪದೇ ಅದೇ ಮಿಕ್ಸಿಯನ್ನು ಸರಿಪಡಿಸಿ ಕೊಟ್ಟಿದ್ದರು ಅದರ ನಂತರವೂ ಮೂರು ತಿಂಗಳಿಗೊಮ್ಮೆ ಮಿಕ್ಸಿಯಲ್ಲಿ ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡಿದ್ದವು ಬದಲಿ ಮಿಕ್ಸಿಯನ್ನ ಕೊಡಲು ಒಪ್ಪದಿದ್ದಾಗ ಗ್ರಾಹಕಿ ಅನಿತಾ ಅವರು ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪೈ ಇಂಟರ್ನ್ಯಾಷನಲ್ ಹಾಗೂ ಪ್ರೀತಿ ಕಿಚನ್ ಅಪ್ಲೆಯನ್ಸಸ್ ಪ್ರೈ.ಲಿ.ವಿರುದ್ಧ ದಾವೆ ಹೂಡಿದರು.

ಗ್ರಾಹಕಿಯ ದೂರನ್ನು ಪರಿಶೀಲಿಸಿದ ಜಿಲ್ಲಾ ಗ್ರಾಹಕರ ಆಯೋಗ ಖರೀದಿಸಿದ್ದ ಮಿಕ್ಸಿಯ ದರ, ಅದರ ಬಡ್ಡಿಯ ಮೊತ್ತ, ಅವರ ಕೆಲಸದಲ್ಲಾದ ತೊಂದರೆ, ಮಾನಸಿಕ ಮತ್ತು ದೈಹಿಕ ಶ್ರಮ, ಓಡಾಟದ ಖರ್ಚು ಕೋರ್ಟ್ ವ್ಯವಹಾರದ ಖರ್ಚು ಹೀಗೆ ಒಟ್ಟು ಮೊತ್ತ
20, 189 ರೂಪಾಯಿಯನ್ನು ಗ್ರಾಹಕಿಗೆ ನೀಡಬೇಕೆಂದು ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷರಾದ ಶ್ರೀ ಸುನೀಲ ತಿ. ಮಾಸರಡ್ಡಿ ಆದೇಶ ಹೊರಡಿಸಿದ್ದಾರೆ.

ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಉಪನ್ಯಾಸಕಿಯ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ‌ . ಈ ಕೇಸನ್ನು ದಾಖಲಿಸಲು ತನಗೆ ಸಹಾಯ ಮಾಡಿದ ಉಪನ್ಯಾಸಕಿ ಸುಜಾತ ಸುಧೀರ್, ವಕೀಲೆಯಾದ ವಿದ್ಯಾ ಭಟ್, ಅಂಜಲಿನ್, ಜಯಶ್ರೀ ಶೆಟ್ಟಿ ಹಾಗೂ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಿಬ್ಬಂದಿಗಳ ಸಹಕಾರವೇ ಕಾರಣ ಎಂದಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!