ಉಡುಪಿ ತಾ.ಪಂ. ನೂತನ  ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ


ಉಡುಪಿ:
ಸ್ಥಳೀಯ ತಾಲೂಕು ಪಂಚಾಯತ್ ನ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಇಂದು ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ನೂತನ ಅಧ್ಯಕ್ಷೆಯಾಗಿ ಸಂಧ್ಯಾ ಕಾಮತ್ ಹಾಗೂ ಉಪಾಧ್ಯಕ್ಷರಾಗಿ ಶರತ್ ಕುಮಾರ್ ಬೈಲಕೆರೆ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಕುಂದಾಪುರ ಸಹಾಯಕ ಕಮಿಷನರ್ ರಾಜು ಸಹಕರಿಸಿದರು. ಉಡುಪಿ ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ರಾಜ್ ಹಾಗೂ ಉಡುಪಿ , ಕಾಪು ಮತ್ತು ಬ್ರಹ್ಮಾವರ ತಾ. ಪಂ. ಸದಸ್ಯರು ಇದ್ದರು.

 
 
 
 
 
 
 
 
 
 
 

Leave a Reply