ಉಡುಪಿ: ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಪ್ರೊ.(ಡಾ) ನಿಮ೯ಲ ಹರಿಕೃಷ್ಣ ಇವರು ಪ್ರೊ.(ಡಾ) ಪ್ರಕಾಶ್ ಕಣಿವೆಯವರಿಂದ ಅಧಿಕಾರವನ್ನು ಶನಿವಾರ ಸ್ವೀಕರಿಸಿದರು.

ಈ ಸಂದರ್ಭ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ಹಳೆವಿದ್ಯಾಥಿ೯ ಸಂಘದ ಅಧ್ಯಕ್ಷ ಶ್ರೀಧರ ಪಿ.ಎಸ್, ವಕೀಲರು, ಕುಂದಾಪುರ ಮತ್ತು ನಿಕಟ ಪೂವ೯ ಅಧ್ಯಕ್ಷ ಆನಂದ ಮಡಿವಾಳ, ವಕೀಲರು, ಉಡುಪಿ ಉಪಸ್ಥಿತರಿದ್ದರು.