ಕುತ್ಪಾಡಿ ಎಸ್ ಡಿಎಂ ನಲ್ಲಿ ಹಳೆವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಆಯುರ್ವೇದ ಕಾಲೇಜು, ಕುತ್ಪಾಡಿ, ಉಡುಪಿಯ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ದಿನಾ೦ಕ: 19.11.2022ನೇ ಶನಿವಾರದ೦ದು ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ “ಪ್ರಜ್ಯೋತಿ-2022” ಕಾರ್ಯಕ್ರಮವನ್ನು ಆಯೋಜಿಸ ಲಾಗಿದೆ. ಈ ಸಂದರ್ಭದಲ್ಲಿ 1984-89 ರ ಸಾಲಿನ ಹಳೆ ವಿದ್ಯಾರ್ಥಿ ಸಮೂಹ ‘ಚಿರಂತನ – 1984’  ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ‘ಗುರುವಂದನ’ ಕಾರ್ಯಕ್ರಮದಲ್ಲಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ  ಡಾ. ಯು.ಎನ್. ಪ್ರಸಾದ್ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ. ಮರಿದೇವ ಶರ್ಮ ಇವರನ್ನು ಸನ್ಮಾನಿಸಲಾಗುತ್ತದೆ. 
 
ಮುಖ್ಯ ಅತಿಥಿಗಳಾಗಿ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಎಮ್. ಮೋಹನ್ ಆಳ್ವರವರು ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪ್ರಸ್ತುತ ಕಾಲೇಜಿಗೆ ಸುಮಾರು 60 ವರ್ಷಗಳ ಇತಿಹಾಸವಿದ್ದು ಇತ್ತೀಚಿನವರೆಗೆ ಕಾಲೇಜು ಆಡಳಿತದಿಂದಲೇ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯುತ್ತಿತ್ತು.
 
ಈ ವರ್ಷ ಹಳೆವಿದ್ಯಾರ್ಥಿ ಸಂಘವು ನೋಂದಾಯಿತ ಸಂಸ್ಠೆಯಾಗಿ ಮಾರ್ಪಾಡಾಗಿದೆ ಹಾಗೂ ಇದು ತನ್ನದೇ ಆದ ಕಾರ್ಯಕಾರಿಣಿ ಮಂಡಳಿಯನ್ನು ಹೊಂದಿದ್ದು ಇನ್ನು ಮುಂದಿನ ದಿನಗಳಲ್ಲಿ ಈ ನೋಂದಾಯಿತ ಸಂಘವೇ ಪ್ರಜ್ಯೋತಿ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗಲಿದೆ ಮತ್ತು ಇದರಿಂದ ಕಾಲೇಜಿನ ಚಟುವಟಿಕೆಗಳಲ್ಲಿ ಹಳೇ ವಿದ್ಯಾರ್ಥಿಗಳು ನಿರಂತರವಾಗಿ ಭಾಗವಹಿಸಲು ಅನುಕೂಲವಾಗುವುದಲ್ಲದೆ ವಿದ್ಯಾರ್ಥಿಗಳಿಗೂ ಕಾಲೇಜಿನ ಆಗುಹೋಗುಗಳ ಮಾಹಿತಿ ಲಭ್ಯ ವಾಗುತ್ತಿರುತ್ತದೆ. 
 
ಈ ಪ್ರಯುಕ್ತ ‘ಕ್ಲಿನಿಕಲ್ ಎಪ್ಲಿಕೇಶನ್ ಆಫ್ ಮರ್ಮ ಚಿಕಿತ್ಸಾ’ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಪಾಲಗಾಟ್, ವವನೂರು, ಅಷ್ಟಾಂಗ ಆಯುರ್ವೇದ ವಿದ್ಯಾಪೀಠದ ದ್ರವ್ಯಗುಣ ವಿಭಾಗದ ಮುಖ್ಯಸ್ಥರಾದ ಡಾ. ಅಜಯನ್ ಎಸ್.ರವರು ಭಾಗವಹಿಸಲಿದ್ದಾರೆ. 
 
ಈ ಸಮ್ಮಿಲನಕ್ಕೆ ಕಾಲೇಜಿನ ಎಲ್ಲಾ ಹಳೆ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಮಾನ್ಯ ಪ್ರಾ೦ಶುಪಾಲರು ವಿನ೦ತಿಸಿದ್ದಾರೆ. ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ ಈ ಮೇಲಿನ ಸ೦ಚಾರಿ ದೂರವಾಣ  ನ೦ಬ್ರ 9886922300, 9845291070, 9844884424 ಸ೦ಪರ್ಕಿಸಬಹುದು. 
 
 
 
 
 
 
 
 
 
 
 

Leave a Reply