ಮಾಹೆಯ 30ನೇ ಘಟಿಕೋತ್ಸವಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಮಾಹೆಯ 30 ನೇ ಘಟಿಕೋತ್ಸವ ಇದೇ ನವೆಂಬರ್ 18, 19 ಮತ್ತು 20 ರಂದು ಮೂರು ದಿನಗಳ ಕಾಲ ನಡೆಯಲಿದ್ದು, ಈ ಸಂದರ್ಭದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಶೈಕ್ಷಣಿಕ ಕ್ಷೇತ್ರದ ಅನೇಕ ಸಾಧ್ಯತೆಗಳ ಕುರಿತು ಚರ್ಚೆಗಳು ನಡೆಯಲಿವೆ. ಅಲ್ಲದೆ ಸುಮಾರು ಐದು ಸಾವಿರ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಘಟಿಕೋತ್ಸವದ ಮೊದಲ ದಿನ-ನವೆಂಬರ್ 18 ರಂದು ರಾಜನಾಥ್ ಸಿಂಗ್ , ರಕ್ಷಣಾ ಸಚಿವರು, ಭಾರತ ಸರ್ಕಾರ – ಮುಖ್ಯ ಅತಿಥಿಯಾಗಿ ಮತ್ತು ಲೆಫ್ಟಿನೆಂಟ್ ಜನರಲ್ ಮಾಧುರಿ ಕಾನಿಟ್ಕರ್, PVSM, AVSM (Retd), ವೈಸ್ ಚಾನ್ಸೆಲರ್, MUHS, ನಾಸಿಕ್ ಅವರು ಗೌರವಾನ್ವಿತ ಅತಿಥಿಗಳಾಗಿರುತ್ತಾರೆ.
ನವೆಂಬರ್ 19 ರಂದು ಭಾರತ ಸರ್ಕಾರದ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರಾದ ಡಾ. ಜಿ. ಸತೀಶ್‌ ರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಅದೇ ರೀತಿ ಮೂರನೇ ದಿನವಾದ ನವೆಂಬರ್‌ 20ರಂದು ನಡೆಯುವ ಕಾರ್ಯಕ್ರಮದಲ್ಲಿ ಆಕ್ಸಿಸ್‌ ಬ್ಯಾಂಕ್‌ ನ ಎಂ.ಡಿ. ಹಾಗೂ ಸಿಇಒ ಆಗಿರುವ ಶ್ರೀ ಅಮಿತಾಭ್ ಚೌಧರಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಈ ಸಂದರ್ಭದಲ್ಲಿ ಮಾಹೆಯು ತನ್ನ ವಿಶಾಲವಾದ ಹಿನ್ನೆಲೆಯೊಂದಿಗೆ ಹೊಸ ಆವಿಷ್ಕಾರಗಳು ಮತ್ತು ಉದ್ಯಮಶೀಲತೆಯನ್ನು ಬೆಂಬಲಿಸುವ ಪರಿಕಲ್ಪನೆಗಳ ಬಗ್ಗೆ ಚರ್ಚೆಗಳು ನಡೆಯಲಿವೆ. ಜೊತೆಗೆ ರಾಷ್ಟ್ರೀಯ ಶಿಕ್ಷಣ ನೀತಿ 2020 ಹಾಗೂ ಅದರ ನಿರೀಕ್ಷಿತ ಫಲಿತಾಂಶಗಳ ಕುರಿತು ವಿಸ್ತೃತ ಚರ್ಚೆಯು ನಡೆಯಲಿದೆ. ಈಗಾಗಲೇ ಮಾಹೆಗೆ ನ್ಯಾಕ್‌ (NAAC)ನಿಂದ A++ ಗ್ರೇಡ್‌ ಲಭ್ಯವಾಗಿದೆ. ಅಲ್ಲದೆ ಸಂಸ್ಥೆಯ ಅನೇಕ ತಾಂತ್ರಿಕ ಯೋಜನೆಗಳನ್ನು ಎನ್‌ ಬಿಎ ಅಂಗೀಕರಿಸಿದೆ. ಮಾಹೆಯು ಶೈಕ್ಷಣಿಕ ಶ್ರೇಷ್ಠತೆಯನ್ನು ಸಾಧಿಸಲು ನಡೆಸುತ್ತಿರುವ ಪ್ರಯತ್ನಗಳ ಕುರಿತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಶ್ಲಾಘನೆಗಳು ವ್ಯಕ್ತವಾಗಿವೆ. 
ಭಾರತ ಸರ್ಕಾರದ ಶೈಕ್ಷಣಿಕ ಸಚಿವಾಲಯದ National Institutional Rankings Framework (NIRF)-2022 ರ ಪ್ರಕಾರ ವಿಶ್ವವಿದ್ಯಾಲಯಗಳ ವಿಭಾಗದಲ್ಲಿ ಮಾಹೆಗೆ ಏಳನೇ ಸ್ಥಾನ ದೊರೆತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಉತ್ತಮ ಶ್ರೇಯಾಂಕ ಪಡೆಯಲು ಮಾಹೆಯು ನಿರಂತರ ಪ್ರಯತ್ನ ನಡೆಸುತ್ತಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದ ಮಾಹೆಯ ಪ್ರೊ ಚಾನ್ಸೆಲರ್ ಡಾ.ಎಚ್.ಎಸ್. ಬಲ್ಲಾಳ್ ಅವರು, & ನಮ್ಮ ಸಂಸ್ಥಾಪಕರಾದ ಡಾ. ಟಿ.ಎಂ.ಎ ಪೈ ಅವರು ದೂರದೃಷ್ಟಿಯುಳ್ಳವರಾಗಿದ್ದರು. 
ಅವರು ವೈದ್ಯರು, ಬ್ಯಾಂಕರ್ ಮತ್ತು ಶಿಕ್ಷಣತಜ್ಞರಾಗಿದ್ದರು. ಅವರು 1942 ರಲ್ಲಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಅನ್ನು 1860 ರ ಸೊಸೈಟೀಸ್ ರಿಜಿಸ್ಟ್ರೇಶನ್ ಆಕ್ಟ್ ಅಡಿಯಲ್ಲಿ ಸ್ಥಾಪಿಸಿದರು ಮತ್ತು ಆಸಕ್ತರಿಗೆ ತಾಂತ್ರಿಕ ಮತ್ತು ವಾಣಿಜ್ಯ ಶಿಕ್ಷಣ ಲಭ್ಯವಾಗುವಂತೆ ಮಾಡಿದರು. ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣರಾದವರಿಗೆ ಕೌಶಲ ತರಬೇತಿಯನ್ನು ನೀಡುವ ಉದ್ದೇಶದಿಂದ ಅವರು, ಮರದ ಕೆಲಸ, ಪ್ಲಂಬಿಂಗ್, ಎಲೆಕ್ಟ್ರಿಷಿಯನ್, ಮೇಸ್ತ್ರಿ ಕೆಲಸಗಳನ್ನು ಕಲಿಸಲು ವ್ಯವಸ್ಥೆ  ಮಾಡಿದರು. ವೈದ್ಯಕೀಯ ಕ್ಷೇತ್ರದಲ್ಲಿ ತರಬೇತಿ ಪಡೆಯಲು ಬೇಕಾದ ವೃತ್ತಿಪರ ಕಾಲೇಜುಗಳನ್ನು ಆರಂಭಿಸಿದರು.
ದೇಶದ ಮೊತ್ತ ಮೊದಲ ಸ್ವಯಂ ಹಣಕಾಸು ಹೂಡಿಕೆ ಮಾಡಿದ ಖಾಸಗಿ ವೈದ್ಯಕೀಯ ಕಾಲೇಜನ್ನು 1953ರಲ್ಲಿ ಆರಂಭಿಸಿದರು. ಅವರ ಈ ಪ್ರಯತ್ನಕ್ಕೆ ಅವರದ್ದೇ ಸ್ನೇಹಿತರು ಸೇರಿದಂತೆ ಅನೇಕ ರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಅವರು ತಮ್ಮ ಉದ್ದೇಶದ ಬಗ್ಗೆ ಸ್ಪಷ್ಟತೆ ಹೊಂದಿದ್ದರು. ಇದೇ ವೇಳೆಗೆ ಅವರು ಎಂಜಿನಿಯರಿಂಗ್‌ ಡೆಂಟಿಸ್ಟ್ರಿ, ಫಾರ್ಮಸಿ, ಆರ್ಕಿಟೆಕ್ಟ್‌, ಕಾನೂನು, ಶಿಕ್ಷಣ ಮತ್ತು ಆಡಳಿತ ಸುಧಾರಣೆ ಕಲಿಕೆಯ ಮ್ಯಾನೇಜ್‌ ಮೆಂಟ್‌ ಕಾಲೇಜುಗಳನ್ನು ಆರಂಭಿಸಿದರು.
ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮಾಹೆಯ ಪ್ರಮುಖ ಸಂಸ್ಥೆಯಾಗಿದೆ. 1953 ರಲ್ಲಿ ಸಂಸ್ಥಾಪಕ ದಿವಂಗತ ಡಾ ಟಿಎಂಎ ಪೈ ಅವರು ಪ್ರಾರಂಭಿಸಿದ ಮೊದಲ ಸ್ವ- ಹಣಕಾಸು ಹೂಡಿಕೆಯ (self finance)ವೈದ್ಯಕೀಯ ಕಾಲೇಜು ಇದಾಗಿದ್ದು ದೇಶದಲ್ಲಿ ಇದು 29ನೇ ವೈದ್ಯಕೀಯ ಕಾಲೇಜು ಎಂಬ ಹೆಗ್ಗಳಿಕೆ ಪಡೆದಿದೆ. ಪ್ರಸ್ತುತ ದೇಶದಲ್ಲಿ 600 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಿದ್ದು, ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ದೇಶದ ಅಗ್ರ 10 ವೈದ್ಯಕೀಯ ಕಾಲೇಜುಗಳಲ್ಲಿ ಕೆಎಂಸಿಯು ಸ್ಥಾನ ಪಡೆದಿದೆ ಎಂದು ಹೇಳಲು ನನಗೆ ತುಂಬಾ  ಸಂತೋಷ ಮತ್ತು ಹೆಮ್ಮೆ ಇದೆ.
ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಡಾ ಟಿಎಂಎ ಪೈ ಅವರ ಕನಸು ಅವರ ಜೀವಿತಾವಧಿಯಲ್ಲಿ ನನಸಾಗಲಿಲ್ಲ, ಅವರ ಪ್ರೀತಿಯ ಮಗ, ಪ್ರಸ್ತುತ ಮಾಹೆಯ ಕುಲಪತಿ ಡಾ. ರಾಮದಾಸ್ ಎಂ ಪೈ ಅವರು 1979 ರಲ್ಲಿ ಅಧಿಕಾರ ವಹಿಸಿಕೊಂಡರು ಮತ್ತು ಮಣಿಪಾಲ್ ಉನ್ನತ ಶಿಕ್ಷಣ ಅಕಾಡೆಮಿ ಯನ್ನು (ಮಾಹೆ) ಸ್ಥಾಪಿಸಿದರು. 1993 ರಲ್ಲಿ ಯುಜಿಸಿ ಕಾಯಿದೆ 1956 ರ ಸೆಕ್ಷನ್ 3 ರ ಅಡಿಯಲ್ಲಿ ಭಾರತ ಸರ್ಕಾರವು ಡೀಮ್ಡ್ ವಿಶ್ವವಿದ್ಯಾನಿಲಯ ಸ್ಥಾನಮಾನವನ್ನು ನೀಡುವುದ ರೊಂದಿಗೆ ಡಾ. ರಾಮದಾಸ್ ಎಂ ಪೈ ಅವರು ಮಣಿಪಾಲವನ್ನು ಅಂತರಾಷ್ಟ್ರೀಯ ವಿಶ್ವ ವಿದ್ಯಾನಿಲಯ ಟೌನ್‌ಶಿಪ್ ಮಾಡಿದರು ಮತ್ತು ಮೊದಲ ಬಾರಿಗೆ ಭಾರತೀಯ ಉನ್ನತ ಶಿಕ್ಷಣವನ್ನು ವಿದೇಶಕ್ಕೆ  ತೆಗೆದುಕೊಂಡರು. "ಏನೇ ಆಗಲಿ ಸಮಗ್ರತೆ ಮುಖ್ಯ & (Integrity at any cost) ಎಂಬ ಅವರ ಅಚಲ ವಿಶ್ವಾಸವು ಇಂದಿನ ಮಣಿಪಾಲವನ್ನು ನಿರ್ಮಿಸಿದ ತಳ ಪಾಯದ ಸೂತ್ರವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ. ವೆಂಕಟೇಶ್, ವಿಎಸ್‌ಎಂ (ನಿವೃತ್ತ) ಅವರು ಮಾತನಾಡಿ, “ದಾರ್ಶನಿಕ ಶಿಕ್ಷಣ ತಜ್ಞರು, ಪ್ರಾಧ್ಯಾಪಕರು, ಚಿಂತಕರು ಮತ್ತು ಬದಲಾವಣೆಗಾಗಿ ಆಗ್ರಹಿಸುವ ಧೈರ್ಯ ಮಾಡಿದ ಸಮರ್ಥ ವ್ಯಕ್ತಿಗಳ ಪ್ರಯತ್ನದ ಫಲವಾಗಿ ನಮ್ಮ ಸಂಸ್ಥೆಯ ಪರಂಪರೆಯು ನಿಂತಿದೆ.
ಮಾಹೆ ಯಾವಾಗಲೂ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಕೆಲಸ ಮಾಡಲು ಬಯಸುತ್ತದೆ.  ಹಾಗೂ ತಾನು ನಿಗದಿಪಡಿಸಿಕೊಂಡ ಗುರಿಗಳನ್ನು ತಲುಪಲು ಕಾಲಮಿತಿಯೊಂದಿಗೆ ಸೂಕ್ತ ಕ್ರಿಯಾಯೋಜನೆಗಳನ್ನು ರೂಪಿಸಿ ಕಾರ್ಯೋನ್ಮುಖವಾಗುತ್ತದೆ. ಅತ್ಯುತ್ತಮವಾದ ಶೈಕ್ಷಣಿಕ ಸಂಸ್ಥೆಗಳ ಸಾಲಿನಲ್ಲಿ ನಿಲ್ಲುವ ಮಾಹೆಯು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಸುಧಾರಣೆಗಳನ್ನು ಮಾಡುವತ್ತ , ಜಗತ್ತಿನ ಉತ್ತಮ ವಿಶ್ವವಿದ್ಯಾಲಯಗಳ ಸಾಲಿನಲ್ಲಿ ನಿಲ್ಲುವ ಪ್ರಯತ್ನಗಳತ್ತ ಹೆಚ್ಚು ಗಮನ ಹರಿಸಿದೆ.

ನಮ್ಮ ಎಲ್ಲಾ ಪಾಲುದಾರರ ಅನುಕೂಲಕ್ಕಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಪರಿಣಿತಿಯನ್ನು ಇನ್ನಷ್ಟು ಪರಿಷ್ಕರಿಸಲು ಪ್ರಯತ್ನಿಸುತ್ತೇವೆ ಎಂದರು. ಸಾಂಸ್ಥಿಕ ಯೋಜನೆಗಳ ಬಗ್ಗೆ ವಿವರಿಸಿದ ಗೌರವಾನ್ವಿತ ಉಪಕುಲಪತಿಗಳು, ‘ರಾಷ್ಟ್ರೀಯ ಶಿಕ್ಷಣ ನೀತಿ -2020ಯ ಜೊತೆಗೆ ನಮ್ಮ ಆಂತರಿಕ ಧ್ಯೇಯೋದ್ದೇಶಗಳನ್ನೂ ಸಮೀಕರಿಸಿ ಮುನ್ನಡೆಯಲಿದ್ದೇ ವೆ. ಇದರೊಂದಿಗೆ ಉನ್ನತ ಶಿಕ್ಷಣವನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ತೆಗೆದುಕೊಂಡು ಹೋಗುವ ಕ್ರಿಯಾತ್ಮಕ ದೃಷ್ಟಿಯೊಂದಿಗೆ ಮರುರೂಪಿಸುವ ಮೂಲಕ NEP ಯ ಶಿಫಾರಸುಗಳನ್ನು ಕಾರ್ಯಗತಗೊಳಿಸುವ ವಿಧಾನವು ಪ್ರಗತಿಯಲ್ಲಿದೆ.
ಸಂಸ್ಥೆಯ ಉನ್ನತ ದರ್ಜೆಯ ಸಂಶೋಧನಾ ಮೂಲಸೌಕರ್ಯವು ನಮ್ಮ ಪ್ರಸ್ತುತ ಸ್ಥಿತಿಯ ಅಗತ್ಯಗಳನ್ನು ಪೂರೈಸುತ್ತದೆ, ನಾವು ನಮ್ಮ ಇತ್ತೀಚಿನ ಬದಲಾವಣೆಯ ಹಂತದಲ್ಲಿ ಸಂಶೋಧ ನೆಗೆ ಆದ್ಯತೆ ನೀಡಿ ಧನಸಹಾಯ ನೀಡುವುದನ್ನು ಮುಂದುವರಿಸುತ್ತೇವೆ. ಸಂಶೋಧನೆಯು ನಮ್ಮ ಧೋರಣೆಯನ್ನು ವ್ಯಾಖ್ಯಾನಿಸುತ್ತದೆ ಮತ್ತು ಈ ವರ್ಷಗಳಲ್ಲಿ ನಮ್ಮ ಶ್ರೇಷ್ಠತೆಯ ವಿಶಿಷ್ಟ ಲಕ್ಷಣ ವಾಗಿದೆ. ನಮ್ಮ ಪಾಂಡಿತ್ಯಪೂರ್ಣ ಫಲಿತಾಂಶವನ್ನು ಮುಂ ದಿನ ಹಂತಕ್ಕೆ ಕೊಂಡೊಯ್ಯಲು ನಮ್ಮ ಅಸಾಧಾರಣ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಹಯೋಗಗಳನ್ನು ಬಳಸಿಕೊಂಡು ನಮ್ಮ ಸಂಶೋಧನಾ ಪ್ರಯಾಣವನ್ನು ನವೀಕೃತ ಚೈತನ್ಯದೊಂದಿಗೆ ಮುಂದುವರಿಸಲು ನಾವು ಪ್ರಯತ್ನಿಸುತ್ತೇವೆ.
ಮಾಹೆ – 2022 ಅನ್ನು "ಇನ್ನೋವೇಶನ್ ಮತ್ತು ಉದ್ಯಮಶೀಲತೆಯ ವರ್ಷ &  ಎಂದು ಆಚರಿಸುವುದರೊಂದಿಗೆ, ನಮ್ಮ ಹೊಸ ನೀತಿಯಲ್ಲಿ ಸಕ್ರಿಯಗೊಳಿಸಲಾದ ಉದ್ಯಮ ಶೀಲತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಪ್ರಸ್ತುತ ಶಿಕ್ಷಣವು ಪರಿವರ್ತನೆಯ ಕವಲು ದಾರಿಯಲ್ಲಿದೆ. ಶಿಕ್ಷಣ ಪಡೆಯುವ ವಿಧಾನಗಳು ಬದ ಲಾಗುತ್ತಿವೆ ಮತ್ತು ಬೋಧನಾ ವ್ಯವಸ್ಥೆಗಳು ತರಗತಿಯ ಪರಿಕಲ್ಪನೆಗಳಿಂದ ಹೆಚ್ಚಾಗಿ, ಪ್ರಾಯೋಗಿಕ ಅನುಭವಗಳಿಗೆ ಒತ್ತು ಕೊಡುತ್ತಿದೆ. ಉದ್ಯೋಗ ಮಾರುಕಟ್ಟೆಯು ಇಂದು ದೇಶೀಯ ಅನುಭವವನ್ನು ಬಯಸುತ್ತಿದೆ. ಇದನ್ನು ಗಮನಿಸಿಕೊಂಡು ನಾವು ನಮ್ಮ ವಿದ್ಯಾರ್ಥಿಗಳ ಕಡೆಗೆ ಬದ್ಧತೆಯೊಂದಿಗೆ ಗಮನ ಹರಿಸಿದ್ದೇವೆ. ನಾವೀನ್ಯತೆ ಮತ್ತು ಉದ್ಯಮಶೀಲತೆಯ ಮೇಲೆ ಹೆಚ್ಚು ಒಲವು ತೋರಲು ನಮ್ಮ ಶೈಕ್ಷಣಿಕ ಮೌಲ್ಯಮಾಪನಗಳನ್ನು ನವೀಕರಿಸಿದ್ದೇವೆ.
ಮಾಹೆ ವಿದ್ಯಾರ್ಥಿಗಳ ಕಲಿಕಾ ಸುಧಾರಣೆಗೆ ಮತ್ತು ನಮ್ಮ ಕ್ಯಾಂಪಸ್‌ಗಳಲ್ಲಿ ವಿಶ್ವ ದರ್ಜೆಯ ಅನುಭವಗಳನ್ನು ಅವರಿಗೆ ಒದಗಿಸಲು ಬದ್ಧವಾಗಿದೆ. ಅವರ ಜ್ಞಾನ, ಕೌಶಲ್ಯ ಮತ್ತು ನಡವಳಿಕೆಗೆ ಹೊಸ ಆಯಾಮಗಳನ್ನು ಸೇರಿಸಲು ಅನುವು ಮಾಡಿಕೊಡುವ ಮೂಲಕ ಅವರಿಗೆ ಸಾಧ್ಯವಾದಷ್ಟು ಉತ್ತಮವಾದ ಬೆಂಬಲವನ್ನು ಒದಗಿಸುವ ವಿಧಾನಗಳನ್ನು ನಾವು ಗುರುತಿಸುತ್ತಿದ್ದೇವೆ.
ಇದು ನಮ್ಮ ವಿದ್ಯಾರ್ಥಿಗಳು ವಿಶ್ವದಲ್ಲಿ ಎಲ್ಲಿಯಾದರೂ ಅವರು ಆಯ್ಕೆ ಮಾಡಿದ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಸಾಮರ್ಥ್ಯವನ್ನು ಹೊಂದುವಂತೆ ಮಾಡುವುದಲ್ಲದೆ, ಅವರು ನಿಜವಾದ ಜಾಗತಿಕ ನಾಗರಿಕರಾಗುವಂತೆ ಮಾಡುತ್ತದೆ ಎಂದು ಹೇಳಿದರು.
ಮಾಹೆ ಯ ರಿಜಿಸ್ಟ್ರಾರ್ ಡಾ. ನಾರಾಯಣ ಸಭಾಹಿತ್ ಅವರು ಮುಂಬರುವ ಶೈಕ್ಷಣಿಕ ಪಲ್ಲಟದ ಕುರಿತು ಮಾತನಾಡುತ್ತಾ, “ನಾವು ಮಾಹೆ ಯ ಶಿಕ್ಷಣ ವಿಧಾನದಲ್ಲಿ ಪ್ರಗತಿ ಮತ್ತು ನವೀನ ಆಲೋಚನೆಗಳನ್ನು ಅಳವಡಿಸಿಕೊಳ್ಳಲು ಯೋಜನೆಗಳನ್ನು ರೂಪಿಸುತ್ತೇವೆ. ಇದು ವ್ಯಾಪಕ ಶ್ರೇಣಿಯ ಶೈಕ್ಷಣಿಕ ಸಾಧನೆಗಳಿಗೆ ಪೂರಕವಾದ ಅವಕಾಶ ಕಲ್ಪಿಸುತ್ತದೆ ಮತ್ತು ಎದುರಾಗುವ ಸಮಸ್ಯೆಗಳನ್ನು ನಿವಾರಿಸಲು ಪರಿಹಾರಗಳನ್ನು ತೋರಿಸಬಲ್ಲುದು ಎಂದು ಹೇಳಿದರು. ಮಾಹೆ ಯಲ್ಲಿ ಸಾರ್ವಜನಿಕ ಸಂಪರ್ಕ, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮದ ನಿರ್ದೇಶಕರಾದ ಶ್ರೀ ಎಸ್.‌ ಪಿ. ಕರ್ ಅವರು ಮಾಹೆ ಶ್ರೇಯಾಂಕದ ವಿವರಗಳನ್ನು ಹಂಚಿಕೊಂಡರು. 
ಮಾಹೆ ಯು ವಿದ್ಯಾರ್ಥಿಗಳಿಗೆ ಆಧುನಿಕ ಬೋಧನಾ ತತ್ವಗಳನ್ನು ಸಂಜಿಸುವ ಸಾಧನಗ ಳೊಂದಿಗೆ ವಿಶ್ವವಿದ್ಯಾನಿಲಯದ ಅನುಭವವನ್ನು ಒದಗಿಸುವ ತನ್ನ ಯೋಜನೆಗಳನ್ನು ಕ್ಷಿಪ್ರವಾಗಿ ಜಾರಿ ಗೊಳಿಸುತ್ತಿದೆ . ಪ್ರಸ್ತುತ ಪ್ರಪಂಚದ ವೇಗದ ಗತಿಯ, ನಾವೀನ್ಯತೆಗೆ ಆದ್ಯತೆ ನೀಡಿ, ಶೈಕ್ಷಣಿಕ ದೃಷ್ಟಿಕೋನವನ್ನು ಪುನರುಜ್ಜೀವನಗೊಳಿಸಲು  ಮತ್ತು ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಲು ಶ್ರಮಿಸುತ್ತಿದೆ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ  ಡಾ ಎಚ್.ಎಸ್. ಬಲ್ಲಾಳ್, ಪ್ರೊ ಚಾನ್ಸೆಲರ್, ಮಾಹೆ, ಲೆಫ್ಟಿನೆಂಟ್ ಜನರಲ್ (ಡಾ.) M.D. ವೆಂಕಟೇಶ್, VSM (ನಿವೃತ್ತ), ಮಾಹೆ ಉಪಕುಲಪತಿ, ಡಾ. ನಾರಾಯಣ ಸಭಾಹಿತ್, ರಿಜಿಸ್ಟ್ರಾರ್, ಮಾಹೆ ಸಮ್ಮೇಳನದ ಸಂಯೋಜಕರಾದ ಮಾಹೆಯ ಸಾರ್ವಜನಿಕ ಸಂಪರ್ಕ ಮತ್ತು ಮಾಧ್ಯಮ ಸಂಚಾಲಕರಾದ ಶ್ರೀ ಎಸ್.‌ ಪಿ. ಕರ್‌. ಉಪಸ್ಥಿತ ರಿದ್ದರು.  
 
 
 
 
 
 
 

Leave a Reply