ಸುರತ್ಕಲ್‌: ಹೃದಯಾಘಾತದಿಂದ ಬಾಲಕ ಸಾವು!

ಶಾಲೆಗೆ ಹೊರಡಲು ಸಿದ್ದನಾಗುತ್ತಿದ್ದ ಬಾಲಕನೊಬ್ಬ ಹೃದಯಾಘಾತದಿಂದಾಗಿ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ಕೃಷ್ಣಾಪುರ 7ನೇ ಬ್ಲಾಕ್‌ ನಿವಾಸಿ ಮೊಹಮ್ಮದ್‌ ಹಸೀಮ್‌ (17) ಮೃತ ಬಾಲಕ. ಬೆಳಗ್ಗೆ ಶಾಲೆಗೆ ಹೋಗಲು ಸಿದ್ದನಾಗಿದ್ದ ಹಸೀಮ್‌ ಏಕಾಏಕಿ ತಲೆ ಸುತ್ತು ಬಂದು ಬಿದ್ದಿದ್ದಾನೆ. ಕೂಡಲೇ ಮನೆ ಮಂದಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಲ್ಲಿ ಮೃತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ.

ಬಾಲಕ ಬದುಕುಳಿಯುವ ಆಸೆಯಿಂದ ಪೋಷಕರು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಹಸೀಮ್ ಮೃತಪಟ್ಟಿದ್ದ. ಅಬ್ದುಲ್‌ ರೆಹಮಾನ್‌ ದಂಪತಿ ಮೂವರು ಪುತ್ರರಲ್ಲಿ ಮೃತ ಹಸೀಮ್‌ ಎರಡನೆಯವನಾಗಿದ್ದಾನೆ.
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply