ಕೊಡವೂರು ಸಂಯುಕ್ತ ವಾರ್ಷಿಕೋತ್ಸವ ಸಮ್ಮಾನ

ಕೊಡವೂರು ಸ.ಮಾ.ಹಿ ಪ್ರ ಶಾಲಾ 149ನೇ, ಹಳೆ ವಿದ್ಯಾರ್ಥಿ ಸಂಘ ಹಾಗು ಯುವಕ ಸಂಘದ 58 ನೇ ಮತ್ತು ದುರ್ಗಾ ಮಹಿಳಾ ಮಂಡಲದ 21 ನೇ ಸಂಯುಕ್ತ ವಾರ್ಷಿಕೋತ್ಸವವು ಜ.7ರಂದು ಕೊಡವೂರು ಶಾಲಾ ಮೈದಾನದಲ್ಲಿ ಜರುಗಿತು.
ಉಡುಪಿ ಯ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು ಕಾನೂನು ಸೇವೆಗಳ ಪ್ರಾಧಿಕಾರದ ಶ್ರೀಮತಿ ಶರ್ಮಿಳಾ ಎಸ್ ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿ ಶಾಲಾ ನೂತನ ಕಟ್ಟಡವನ್ನು ಉದ್ಘಾಟಿಸಿದರು.ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶಾಸಕ ಕೆ.ರಘಪತಿ ಭಟ್ ಇವರು ಮಾತನಾಡಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಮುದಾಯದ ಸಹಕಾರ ಅಗತ್ಯ.ವಿದ್ಯಾಭಿಮಾನಿಗಳ ನೆರವಿನಿಂದ ಉಡುಪಿಯ ಕೆಲವು ಸರಕಾರಿ ಶಾಲೆಗಳು ಖಾಸಗಿ ಆಂಗ್ಲಮಾಧ್ಯಮ ಶಾಲೆಗಳನ್ನು ಮೀರಿಸುವಂತಿದ್ದು ಆ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಗಾಗಿ ಸ್ಥಳೀಯ ಶಾಸಕರ ಶಿಫಾರಸು ಪತ್ರ ಪಡೆಯಬೇಕಾದ ಪ್ರಮೇಯ ಬಂದಿರುವ ರೀತಿಯಲ್ಲಿ ವ್ಯವಸ್ಥಿತವಾಗಿ ಅಭಿವೃದ್ಧಿ ಹೊಂದಿರುವುದು ಆಶಾದಾಯಕ ಬೆಳವಣಿಗೆ ಎಂದರು.

ಕಾರ್ಯಕ್ರಮದಲ್ಲಿ ಚಲನಚಿತ್ರ ನಟಿಯರಾದ ಮಾನಸಿ ಸುಧೀರ್ ಕೊಡವೂರು, ಚಂದ್ರಕಲಾ ರಾವ್ ಕದಿಕೆ,ಎಸ್.ಎಸ್.ಎಲ್.ಸಿ ಯಲ್ಲಿ ಪೂರ್ಣಾಂಕ ಗಳಿಸಿದ ಪುನೀತ್ ನಾಯ್ಕ್ ಮಲ್ಪೆ, ಶಾಲಾ ಕ್ರೀಡಾ ಪ್ರತಿಭೆ ಸರ್ಭಾಜ್ ಅಕ್ಮಲ್ ರವರನ್ನು ಸನ್ಮಾನಿಸಲಾಯಿತು.ಗಂಭೀರ ಖಾಯಿಲೆಗೆ ತುತ್ತಾದ ಸ್ಥಳೀಯ ವ್ಯಕ್ತಿಯೋರ್ವರ ವೈದ್ಯಕೀಯ ಚಿಕಿತ್ಸೆಗೆ ಹತ್ತು ಸಾವಿರ ರೂಪಾಯಿ ಧನಸಹಾಯ,ಪ್ರತಿಭಾನಿತ್ವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ದತ್ತಿನಿಧಿ, ಕ್ರೀಡಾ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಗರಸಭಾ ಸದಸ್ಯ ವಿಜಯ ಕೊಡವೂರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀ ಶಂಕರನಾರಾಯಣ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಟಿ.ರಾಘವೇಂದ್ರ ರಾವ್, ಸ್ಥಳೀಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್,ಉದ್ಯಮಿಗಳಾದ ಸುಧಾಕರ್ ಕುಂದರ್,ಅರುಣ್ ಕುಮಾರ್,ರವಿ ಕರ್ಕೇರ ಹನುಮಾನ್ ನಗರ, ಶ್ರೀ ಮಹಾಲಕ್ಷ್ಮೀ ಮೊಗವೀರ ಮಹಿಳಾ ಮಂಡಲದ ಅಧ್ಯಕ್ಷೆ ಶುಭ ಯೋಗೇಶ್ ಭಾಗವಹಿಸಿದ್ದರು.


ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಪೈ, ದುರ್ಗಾ ಮಹಿಳಾ ಮಂಡಲದ ಅಧ್ಯಕ್ಷೆ ಮೀನಾಕ್ಷಿ ಮಾಧವ, ವಿದ್ಯಾರ್ಥಿ ನಾಯಕ ತೇಜಸ್ ಉಪಸ್ಥಿತರಿದ್ದರು. ಶಾಲಾ ವರದಿಯನ್ನು ಮುಖ್ಯೋಪಧ್ಯಾಯಿನಿ ಪುಷ್ಪಾವತಿ, ಸಂಘದ ವರದಿಯನ್ನು ಕಾರ್ಯದರ್ಶಿ ಜಗದೀಶ್ ಶೆಟ್ಟಿ ವಾಚಿಸಿದರು ಯುವಕ ಸಂಘದ ಅಧ್ಯಕ್ಷ ಪ್ರಭಾತ್ ಕೋಟ್ಯಾನ್ ಸ್ವಾಗತಿಸಿದರು.ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ನಿರೂಪಿಸಿ ವಂದಿಸಿದರು.

 
 
 
 
 
 
 
 
 

Leave a Reply