ಉಡುಪಿ: ಮೇ 28 ರಂದು ಕೋವಿಡ್ ಲಸಿಕೆ ನೀಡುವ ಬಗ್ಗೆ ಮಾಹಿತಿ

ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಪ್ರಥಮ ಡೋಸ್ ಲಭ್ಯವಿರುವುದಿಲ್ಲ. ಗ್ರಾಮೀಣದೇಶದಸರ್ಕಾರಿ ಆಸ್ಪತ್ರೆಗಳಲ್ಲಿ ಕೋವ್ಯಾಕ್ಸಿನ್ 2ನೇ ಡೋಸ್ ಲಸಿಕೆ ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ/ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯನ್ನು ಖಚಿತಪಡಿಸಿಕೊಂಡು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯುವುದು.

ಮೇ 28 ರಂದು ರಂದು ಉಡುಪಿ ನಗರ ಪ್ರದೇಶದಲ್ಲಿ ಕೋವಿಶೀಲ್ಡ್ ಪ್ರಥಮ ಡೋಸ್ ಲಸಿಕೆ ಯನ್ನು ರಾಜ್ಯ ಸರಕಾರ ಗುರುತಿಸಿರುವ ಅನುಬಂಧ-1 ರಲ್ಲಿರುವ ಕೊರೋನ ಮುಂಚೂಣಿ ಕಾರ್ಯಕರ್ತರು/ದುರ್ಬಲ ಗುಂಪಿನ ಫಲಾನುಭವಿಗಳು (ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರು) ಇವರಿಗೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿಯ ಹಳೆ ಕಟ್ಟಡ (ಅಲಂಕಾರ್ ಥಿಯೇಟರ್ ಹತ್ತಿರ) (150 ಡೋಸ್), ಸರಕಾರಿ ತಾಯಿ ಮತ್ತು ಮಕ್ಕಳ (ಬಿ.ಆರ್.ಎಸ್) ಆಸ್ಪತ್ರೆ, ಉಡುಪಿಯಲ್ಲಿ (200 ಡೋಸ್), ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪಾಲದಲ್ಲಿ (ಮಾಧವ ಕೃಪಾ ಶಾಲೆ, ಮಣಿಪಾಲ)(150 ಡೋಸ್) ನೀಡಲಾಗು ವುದು. 

45 ವರ್ಷ ಮೇಲ್ಪಟ್ಟ ಸಾರ್ವಜನಿಕರು (ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯ ಕರ್ತರು) ಇವರಿಗೆ ಪ್ರಥಮ ಡೋಸ್ ಕೋವಿಶೀಲ್ಡ್ ಲಸಿಕೆ ಹಾಗೂ 2ನೇ ಡೋಸ್ ಲಸಿಕೆಯನ್ನು ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿಯಲ್ಲಿ (ಸೇಂಟ್ ಸಿಸಿಲಿಸ್ ಶಾಲೆ) (200​​ ಡೋಸ್) ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪಾಲದಲ್ಲಿ (ಮಾಧವ ಕೃಪಾ ಶಾಲೆ, ಮಣಿಪಾಲ) (100 ಡೋಸ್), ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿಯ ಹಳೆ ಕಟ್ಟಡ(ಅಲಂಕಾರ್ ಥಿಯೇಟರ್ ಹತ್ತಿರ) (100 ಡೋಸ್) ಮತ್ತು ಎಫ್.ಪಿ.ಎ.ಐ ಕುಕ್ಕಿಕಟ್ಟೆಯಲ್ಲಿ (100 ಡೋಸ್) ನೀಡಲಾಗುವುದು. 

ಗ್ರಾಮೀಣ ಪ್ರದೇಶದಲ್ಲಿ ರಾಜ್ಯ ಸರಕಾರ ಗುರುತಿಸಿರುವ ಅನುಬಂಧ-1 ರಲ್ಲಿರುವ ಕೊರೋನ ಮುಂಚೂಣಿ ಕಾರ್ಯಕರ್ತರು/ ದುರ್ಬಲ ಗುಂಪಿನ ಫಲಾನುಭವಿಗಳು ಮತ್ತು 45 ವರ್ಷ ಮೇಲ್ಪಟ್ಟ ಸಾರ್ವಜನಿಕರು (ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರು) ಇವರು ಪ್ರಥಮ ಡೋಸ್ ಕೋವಿಶೀಲ್ಡ್ ಲಸಿಕೆ ಹಾಗೂ 2ನೇ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ/ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯನ್ನು ಖಚಿತಪಡಿಸಿಕೊಂಡು ಮೇ 28 ರಂದು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯುವುದು.

ರಾಜ್ಯ ಗುರುತಿಸಿರುವ ದುರ್ಬಲ ಗುಂಪಿನ ಫಲಾನುಭವಿಗಳು ಮತ್ತು ರಾಜ್ಯ ಕೊರೋನ ಮುಂಚೂಣಿ ಕಾರ್ಯಕರ್ತರ ಗುಂಪಿಗೆ ಈ ಕೆಳಗಿನ ಫಲಾನುಭವಿಗಳು ಸೇರ್ಪಡೆಗೊಂಡಿರುತ್ತಾರೆ (ಅನುಬಂಧ-1 ರ ಪರಿಷ್ಕೃತ ಪಟ್ಟಿಯಂತೆ). ಇವರು ತಮಗೆ ನೀಡಲಾಗಿರುವ ಇಲಾಖಾ ಗುರುತಿನ ಚೀಟಿ ಅಥವಾ ಅನುಬಂಧ-3 ರಲ್ಲಿ ಅರ್ಹತಾ ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡನೊಂದಿಗೆ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಬಹುದು.

ಕರ್ನಾಟಕ ರಾಜ್ಯ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು, ಎಲ್.ಎಂ.ಒ (ಲಿಕ್ವಿಡ್ ಮೆಡಿಕಲ್ ಆಕ್ಸಿಜನ್) ಸಿಬ್ಬಂದಿಗಳು, ಕರ್ನಾಟಕ ರಾಜ್ಯ ಆಹಾರ ನಿಗಮ ಸಿಬ್ಬಂದಿಗಳು 18 ರಿಂದ 44 ವರ್ಷ ವಯೋಮಾನದಲ್ಲಿನ ಕೋಮಾರ್ಬಿಡಿಟಿ (ಭಾರತ ಸರಕಾರ ಸೂಚಿಸಲಾಗಿರುವ ಪಟ್ಟಿಯಲ್ಲಿರುವಂತೆ) ಹೊಂದಿರುವ ಫಲಾನುಭವಿಗಳು(ಸರಕಾರಿ ವೈದ್ಯಾಧಿಕಾರಿಗಳು/ ಟ್ರೀಟಿಂಗ್ ವೈದ್ಯಾಧಿಕಾರಿಗಳಿಂದ ನಿಗದಿತ ನಮೂನೆ 1(ಬಿ) ಯಲ್ಲಿ

ದೃಢೀಕೃತ ಪ್ರಮಾಣ ಪತ್ರ ಪಡೆದಿರುವವರು) ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಸಿಬ್ಬಂದಿಗಳು ಕ್ಷೇತ್ರ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತೋಟಗಾರಿಕೆ ಇಲಾಖೆಯ ಸಿಬ್ಬಂದಿಗಳು ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ (ಬಿ.ಇ.ಎಲ್) ಸಿಬ್ಬಂದಿಗಳು ರಾಜ್ಯ ಕೊರೋನ​​ ಮುಂಚೂಣಿ ಕಾರ್ಯಕರ್ತರ (ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರ) ಗುಂಪಿನಲ್ಲಿರುವ ಬಾಣಂತಿಯರು ಕೋವಿಡ್-19 ಲಸಿಕೆಯನ್ನು ಪಡೆಯಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುದೀರ್ ಚಂದ್ರ ಸೂಡಾ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply