ಮಿಲಾಗ್ರಿಸ್ ಕಾಲೇಜ್ ಕಲ್ಯಾಣ್ಪುರ ಒಂದು ದಿನದ ಶಿಬಿರ ಕಾರ್ಯಕ್ರಮ

ಮಿಲಾಗ್ರಿಸ್ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಡಿಯಲ್ಲಿ ಒಂದು ದಿನದ ಶಿಬಿರವನ್ನು ಸ್ಪಂದನ ವಿಧ್ಯಾಂಗರ ತರಬೇತಿ ಮತ್ತು ಸಂರಕ್ಷಣಾ  ಸಂಸ್ಥೆಯಲ್ಲಿ ಆಯೋಜಿಸಲಾಯಿತು. ನಮ್ಮ ಕಾಲೇಜಿನ ಎನ್ಎಸ್ಎಸ್ ಸ್ವಯಂಸೇವಕರುಗಳು ರಾಷ್ಟ್ರೀಯ ಸೇವಾ ಯೋಜನೆ ಘಟಕದ ಅಧಿಕಾರಿಯವರ ನೇತೃತ್ವದಲ್ಲಿ ಸ್ಪಂದನ ಸಂಸ್ಥೆಯ ಸಂಸ್ಥೆಯ ಆವರಣದ ಸ್ವಚ್ಛತೆ ಮತ್ತು ನೈರ್ಮಲ್ಯ ಕಾರ್ಯಕ್ರಮವನ್ನು ಎನ್ಎಸ್ಎಸ್ ನ ಶಿಬಿರಾರ್ಥಿಗಳು ನೆರವೇರಿಸಿದರು. ತದನಂತರ ಅಲ್ಲಿನ ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುವುದರೊಂದಿಗೆ ಅವರ ಕಷ್ಟ ಮತ್ತು ಅನುಕೂಲತೆಗಳನ್ನು ಅರಿತುಕೊಂಡರು ಎಲ್ಲಾ ಸ್ವಯಂಸೇವಕರುಗಳು ಆ ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಮನೋರಂಜನೆಯ ಕಾರ್ಯಕ್ರಮವನ್ನು ಪ್ರದರ್ಶಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ಸ್ಪಂದನ ವಿಧ್ಯಾಂಗರ ತರಬೇತಿಯ  ಪ್ರಾಂಶುಪಾಲರಾದ ಶ್ರೀ ಉಮೇಶ್ ನಾಕೂರ್ ಮತ್ತು ಅಧ್ಯಾಪಕವಂದದವರು ಶಿಬಿರದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ  ಭಾಗವಹಿಸಿದ್ದರು . ಅದೇ ರೀತಿ ಎನ್ಎಸ್ಎಸ್ ನ ಯೋಜನಾಧಿಕಾರಿಗಳಾದ ಶ್ರೀಮತಿ ಅನುಪಮಾ ಜೋಗಿ ಮತ್ತು ಶ್ರೀ ಗಣೇಶ್  ನಾಯಕ್ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply