ಯಕ್ಷನಿಧಿ ಡೈರಿ ಬಿಡುಗಡೆಗೊಳಿಸಿದ ಕಲಾವಿದೆ ವೈಜಯಂತಿ ಕಾಶಿ

ಉಡುಪಿ : ಎಲ್ಲಾ ವೃತ್ತಿ ಕಲಾವಿದರ ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳನ್ನು ಹೊಂದಿದ ಯಕ್ಷನಿಧಿ ಡೈರಿ – 2021ನ್ನು ಸೋಮವಾರದಂದು ಯಕ್ಷಗಾನ ಕಲಾರಂಗದ ಕಛೇರಿಯಲ್ಲಿ ಖ್ಯಾತ ಕೂಚುಪುಡಿ ನೃತ್ಯ ಹಾಗೂ ಕಿರುತೆರೆ ಕಲಾವಿದೆ ಶ್ರೀಮತಿ ವೈಜಯಂತಿ ಕಾಶಿಯವರು ಬಿಡುಗಡೆಗೊಳಿಸಿದರು. 
ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ಕೋಶಾಧಿಕಾರಿ ಮನೋಹರ ಕೆ. ಹಾಗೂ ವೈಜಯಂತಿ ಕಾಶಿಯವರ ಪುತ್ರಿ ಪ್ರತೀಕ್ಷಾ ಕಾಶಿ ಮತ್ತು ಈರ್ವರು ಶಿಷ್ಯೆಯರು ಉಪಸ್ಥಿತರಿದ್ದರು.  
ಸಂಸ್ಥೆಯ ಚಟುವಟಿಕೆಗಳನ್ನು ಅವಲೋಕಿಸಿದ ವೈಜಯಂತಿ ಕಾಶಿಯವರು ಇಂತಹ ಸಂಸ್ಥೆಯನ್ನು ತಾನು ಈ ತನಕ ನೋಡಿದ್ದಿಲ್ಲಾ, ಈ ಸಂಸ್ಥೆ ಉಳಿದವರಿಗೆ ಮಾದರಿ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು.
 
 
 
 
 
 
 
 
 
 
 

Leave a Reply