ಆಚರಣೆಗಳಿಗೆ ಹೊಸ ದಿಕ್ಕು ದೆಶೆ ನೀಡಿದ ಆಸರೆ ಚಾರಿಟೇಬಲ್ ಟ್ರಸ್ಟ್: ಗಿರೀಶ ಅಂಚನ್

ಉಡುಪಿ: ಹುಟ್ಟುಹಬ್ಬ ಆಚರಣೆ, ವೈವಾಹಿಕ ವಾರ್ಷಿಕೋತ್ಸವ, ಮತ್ತು ವೈಯಕ್ತಿಕ ಆಚರಣೆಗಳನ್ನು ಸಾಮಾಜಿಕ ಚಟುವಟಿಕೆಯೊಂದಿಗೆ ಆಚರಿಸಿ ಮತ್ತೊಬ್ಬರ ಬಾಳಿನಲ್ಲಿ ಬೆಳಕಾಗುವಂತೆ ಮಾಡಿ ಕಡಿಯಾಳಿಯ ಆಸರೆ ಚಾರಿಟೇಬಲ್ ಟ್ರಸ್ಟ್ ಸಮಾಜಕ್ಕೊಂದು ಹೊಸದಿಕ್ಕು ಮತ್ತು ದೆಶೆಯನ್ನು ನೀಡಿದೆ ಎಂದು ಉಡುಪಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಗಿರೀಶ ಎಂ.ಆಂಚನ್ ತಿಳಿಸಿದರು.

ಇವರು ಆದಿತ್ಯವಾರ ಆಸರೆ ಚಾರಿಟೇಬಲ್ ಟ್ರಸ್ಟ್ (ರಿ) ಕಡಿಯಾಳಿ ವತಿಯಿಂದ ಉಡುಪಿ ತೆಂಕಪೇಟೆ ವಾರ್ಡಿನ ಬೈಲಕೆರೆ ನಿವಾಸಿ ರಾಜಾಂಗಣ ಪಾರ್ಕಿಂಗ್ ನ ಬಳಿ ಶ್ರೀಮತಿ ಸುನಂದಾ ಕಾಂಚನ್ ಇವರ ಮನೆಗೆ ನೀಡಿದ ಉಚಿತ ವಿದ್ಯುತ್ ಸಂಪರ್ಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಈ ಮನೆಯು ಉಡುಪಿ ನಗರದ ಹೃದಯ ಭಾಗದಲ್ಲಿದ್ದು ಕಳೆದ 34 ವರ್ಷಗಳಿಂದ ವಿದ್ಯುತ್ ಸಂಪರ್ಕ ಇರುವುದಿಲ್ಲ. ಇದರ ಉದ್ಘಾಟನೆಯನ್ನು ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಸಹಾಯಕ ಮಹಾಪ್ರಬಂಧಕ ರಾದ ಕೆ. ಅಶೋಕ್ ನಾಯಕ್ ದಂಪತಿ ನೆರವೇರಿಸಿದರು.

ಪ್ರಸ್ತುತ ಅಮೆರಿಕದಲ್ಲಿ ವಾಸವಾಗಿರುವ ಅವರ ಮೊಮ್ಮಗ ಆರವ್ ಗೌತಮ್ ನಾಯಕ್ ಇವರ ಮೂರನೇ ವರ್ಷದ ಹುಟ್ಟುಹಬ್ಬ ಆಚರಣೆ ಪ್ರಯುಕ್ತ ಈ ಬಡವರ ಮನೆಗೆ ಈ ಉಚಿತ ವಿದ್ಯುತ್ ಸಂಪರ್ಕ ನೀಡಲಾಗಿದೆ.. ಈ ಬಡವರ ಮನೆಯ ವಿದ್ಯುತ್ ಸಂಪರ್ಕದ ಸಂಪೂರ್ಣ ವೆಚ್ಚವನ್ನು ಅಶೋಕ್ ನಾಯಕ್ ದಂಪತಿ ನೀಡಿರುತ್ತಾರೆ.

ಈ ಕಾರ್ಯಕ್ರಮದಲ್ಲಿ ತೆಂಕಪೇಟೆ ವಾರ್ಡಿನ ನಗರಸಭೆ ಸದಸ್ಯರಾದ ಶ್ರೀಮತಿ ಮಾನಸಿ ಸಿ.ಪೈ, ಆಸರೆ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಪ.ವಸಂತ ಭಟ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಮತ್ತು ಆಸರೆ ಚಾರಿಟೇಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಸ್ವಾಗತಿಸಿ, ಕೋಶಾಧಿಕಾರಿ ಸತೀಶ್ ಕುಲಾಲ್ ವಂದಿಸಿದರು.

ಈ ಸಂಧರ್ಭದಲ್ಲಿ ಕಮಲಾಕರ ನಾಯಕ್, ಪಿ ಸುರೇಂದ್ರ ಕಾಮತ್,ನರಸಿಂಹ ಸೇರಿಗಾರ್, ಸಂದೀಪ್ ಸನೀಲ್, ಮಂಜುನಾಥ್ ಹೆಬ್ಬಾರ್, ಶ್ರೀಮತಿ ಶಕುಂತಲಾ ಪೈ, ಗಣೇಶ್ ಪೂಜಾರಿ, ಸಂತೋಷ್ ಕಿಣಿ, ಮಹೇಶ್ ನಾಯಕ್, ಇನ್ನಿತರ ಸ್ಥಳೀಯರು ಉಪಸ್ಥಿತರಿದ್ದರು. ಈ ಮನೆಯ ವಿದ್ಯುತ್ ಸಂಪರ್ಕ ಜೋಡಣೆಯನ್ನು ಕಡಿಯಾಳಿ ಮಹಿಷಮರ್ದಿನಿ ಎಲೆಕ್ಟ್ರಿಕಲ್ಸ್ ನ ಅಶ್ವಥ ದೇವಾಡಿಗ ನಿರ್ವಹಿಸಿದ್ದರು.

 
 
 
 
 
 
 
 
 
 
 

Leave a Reply