ಯುವಜನ ಸೇವಾ ಸಂಘ ರಾಜ್ಯಕ್ಕೆ ಮಾದರಿ : ಕೊಡವೂರು

ಇವತ್ತಿನ ಸೇವಾ ಸಂಘ ಏಣಗುಡ್ಡೆ ಕಟಪಾಡಿ ಪರಿಸರದಲ್ಲಿ ಕಳೆದ ಮೂರು ವರ್ಷದ ಹಿಂದೆ ಸಮಾನ ಮನಸ್ಕರಿಂದ ಹುಟ್ಟಿಕೊಂಡಂತಹ ಸಂಸ್ಥೆ ಈ ಸಂಸ್ಥೆ ಕಳೆದ ಮೂರು ವರ್ಷಗಳಿಂದ ಅನೇಕ ಸಮಾಜಮುಖಿಯಾಗಿರುವಂತಹ ಸಾಧನೆಗಳನ್ನು ಮಾಡಿದೆ. ಸಾರ್ವಜನಿಕರಿಗೆ ಆರೋಗ್ಯದ ರಕ್ಷಣೆಯನ್ನು ಕೊಡಬೇಕು. ಕೆಮಿಕಲ್ ನಿಂದ ನಾವು ದೂರ ಇರಬೇಕು ಮತ್ತು ಕೆಮಿಕಲ್ ಇಲ್ಲದ ಆಹಾರ ನಾವು ಪಡೆಯಬೇಕು ಅನ್ನುವ ದ್ರಿಷ್ಟಿಯಿಂದ ಕಳೆದ ಎರಡು ಬಾರಿ ಹಲಸಿನ ಮೇಳ ಕಾರ್ಯಕ್ರಮವನ್ನು ಮಾಡಿದೆ. ಈ ಕಾರ್ಯಕ್ರಮ ಮಾಡಿರುವುದರಿಂದ ಹೊಸ ಹೊಸ ಬಗೆಯ ಕೆಮಿಕಲ್ ಇಲ್ಲದ ಆಹಾರಗಳನ್ನು ಮತ್ತು ಹಲಸಿನಿಂದ ಏನೆಲ್ಲಾ ಆಹಾರಗಳನ್ನು ತಯಾರು ಮಾಡಲು ಸಾಧ್ಯವಿದೆ ಎನ್ನುವುದನ್ನು ಸಮಾಜಕ್ಕೆ ತಿಳಿಸಿಕೊಡುವ ಕಾರ್ಯವಾಗುವ ಮುಖಾಂತರ ಉದ್ಯೋಗವನ್ನು ನಿರ್ಮಿಸಿ ಸ್ವಾವಲಂಬಿ ಬದುಕು ಕಟ್ಟುವಂತಹ ಒಂದು ದಾರಿಯನ್ನು ತೋರಿಸಿರುವಂತಹದ್ದು ಯುವಜನ ಸೇವಾ ಸಂಘ ಏಣಗುಡ್ಡೆ ಕಟಪಾಡಿ ರಾಜ್ಯಕ್ಕೆ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿಯೂ ಈ ಸಂಘಟನೆ ಅತ್ಯುತ್ತಮ ಕೆಲಸಗಳನ್ನು ಮಾಡಲಿ ಇನ್ನಷ್ಟು ಇನ್ನಷ್ಟು ಜನರಿಗೆ ಆರೋಗ್ಯದ ಕಡೆ ಕಾಳಜಿಯನ್ನು ನೀಡುವಂತಹ ಮತ್ತು ಸಮಾಜ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಮಾಡಲಿ ಎಂದು ಈ ಸಂದರ್ಭದಲ್ಲಿ ಉಡುಪಿಯ ನಗರಸಭಾ ಸದಸ್ಯರು ಮತ್ತು ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ಕೆ ವಿಜಯ ಕೊಡವೂರು ಈ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

 
 
 
 
 
 
 
 
 
 
 

Leave a Reply