ಶ್ರೀ ಶಾಂತಿಮತೀ ಪ್ರತಿಷ್ಠಾನದ ಸಾಧಕರೆಡೆ ನಮ್ಮ ನಡೆ ತಿಂಗಳ ಕಾರ್ಯಕ್ರಮ

ಶ್ರೀ ಶಾಂತಿಮತೀ ಪ್ರತಿಷ್ಠಾನ ದ ಸಾಧಕರೆಡೆ ನಮ್ಮ ನಡೆ ತಿಂಗಳ ಕಾರ್ಯಕ್ರಮದ ಅಂಗವಾಗಿ ನಿನ್ನೆ ಬ್ರಹ್ಮಾವರ ದ ನಾಗರಾಜ ವಾರಂಬಳ್ಳಿ ಅವರನ್ನು ಗೌರವಿಸಲಾಯಿತು, ಈ ಕಾರ್ಯಕ್ರಮದಲ್ಲಿ ಶಾಂತಿಮತೀ ಪ್ರತಿಷ್ಠಾನ ದ ಅಧ್ಯಕ್ಷರಾದ ಸಚ್ಚಿದಾನಂದ ಅಡಿಗ ವಡ್ಡರ್ಸೆ,ವೇ.ಮೂ. ಸುಬ್ರಹ್ಮಣ್ಯ ಭಟ್ ಸಾಸ್ತಾನ, ವೇದಿಕೆಯಲ್ಲಿ ಉಪಸ್ಥಿತರಿದ್ದರು , ಗೌರವ ಸ್ವೀಕರಿಸಿ ಮಾತನಾಡಿದ ಶ್ರೀಯುತರು ತನಗೆ ಸಹಕರಿಸಿದ ಮಹನೀಯರನ್ನು ಸ್ಮರಿಸಿದರು, ಶ್ರೀ ಸುಬ್ರಹ್ಮಣ್ಯ ಭಟ್ ಹಾಗೂ ಕೋಟ ಗಣೇಶ್ ಭಟ್ ಶುಭಾಶಂಸನೆಗೈದರು,ಪ್ರತಿಷ್ಠಾನ ದ ಮಾಜಿ ಅಧ್ಯಕ್ಷ ಪ್ರಸನ್ನ ಭಟ್ ಸ್ವಾಗತಿಸಿ ವಿದ್ವಾನ್ ವಿಜಯ್ ಕುಮಾರ್ ಮಂಜರ್ ಪ್ರಾಸ್ತಾವಿಕ ಮಾತನಾಡಿದರು, ದಯಾನಂದ ವಾರಂಬಳ್ಳಿ ಧನ್ಯವಾದ ಸಮರ್ಪಣೆಗೈದು ರಾಮಚಂದ್ರ ಉಡುಪ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು ಶಾಂತಿಮತೀ ಪ್ರತಿಷ್ಠಾನ ದ ಸದಸ್ಯರು ಹಾಗೂ ಶ್ರೀಯುತರ ಹಿತೈಷಿಗಳು ಭಾಗವಹಿಸಿದ್ದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply