Janardhan Kodavoor/ Team KaravaliXpress
26.6 C
Udupi
Monday, January 30, 2023
Sathyanatha Stores Brahmavara

ಜೇಸಿಐ ಕಲ್ಯಾಣಪುರದ ಸಾಧನೆಗಳಿಗಾಗಿ ‘outstanding JCI Week JCI INDIA Runner’ ಪ್ರಶಸ್ತಿ

ಜೆಸಿಐ ಭಾರತದ ವಲಯ 15ರ ಪ್ರತಿಷ್ಠಿತ ಘಟಕಗಳೊಂದಾದ ಜೇಸಿಐ ಕಲ್ಯಾಣಪುರ ಈ ವರ್ಷ ಎಲ್ಲಾ ವಿಭಾಗಗಳಲ್ಲಿ ಮಾಡಿದ ಕಾರ್ಯಕ್ರಮಗಳಿಗೆ ಹಾಗೂ ಜೆ ಸಿಐ ಫೌಂಡೇಶನ್ ಗೆ ನೀಡಿದ ದೇಣಿಗೆ, ನೂತನ ಮಹಿಳಾ ಘಟಕ ಕೊಡುಗೆ, ಹಲವಾರು ಸಮಾಜಮುಖಿ, ಶಾಶ್ವತ ಕೊಡುಗೆ ಹಾಗೂ ಒಂದು ವಾರದ ಅದ್ದೂರಿ ಜೇಸಿಐ ಸಪ್ತಹ ಕಾರ್ಯಕ್ರಮ ಮತ್ತು ಸಾಧನೆಗಳಿಗಾಗಿ ಡಿಸೆಂಬರ್ 27ರಿಂದ 30ರವರೆಗೆ ದೆಹಲಿಯ ಲೀಲಾ ಕನ್ವಷನ್ ನಲ್ಲಿ ನಡೆದ ಜೇಸಿಐ ಭಾರತದ ರಾಷ್ಟ್ರೀಯ ಸಮ್ಮೇಳನದಲ್ಲಿ outstanding JCI Week JCI INDIA Runner ಪ್ರಶಸ್ತಿಯನ್ನು ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷರಾದ JFS ಅಂಶು ಶರಫ್ ರಿಂದ ಅಧ್ಯಕ್ಷರಾದ JFF ಜಯಶ್ರೀ ಮಿತ್ರ ರವರು ಪ್ರಶಸ್ತಿಯನ್ನು ಸ್ವೀಕರಿಸಿದರು . ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಜೆಸಿ ಸೌಜನ್ಯ ಹೆಗ್ಡೆ GLC of jci india, ಜೆಸಿಐ ಭಾರತದ ಫೌಂಡೇಶನ್ ಡೈರೆಕ್ಟರ್ ಆಗಿರುವಂತಹ ಜೆಸಿ ಅಲನ್ ರೋಹನ್ ವಾಜ್, nom coordinator ಜೆಸಿ ಕಾರ್ತಿಕೆಯ ಮದ್ಯಾಸ್ತ, ವಲಯಧ್ಯಕ್ಷರಾದ ಜೆಸಿ ರಾಯನ್ ಉದಯ ಕ್ರಾಸ್ತ, ಪೂರ್ವ ವಲಯಧ್ಯಕ್ಷರಾದ ಅಶೋಕ್ ಚುಂತರು, ವಲಯ ಉಪಾಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ,ಘಟಕದ ಸ್ಥಾಪಕ ಅಧ್ಯಕ್ಷರಾದ ಜೆಸಿ ಜಗದೀಶ್ ಕೆಮಣ್ಣು, ಪೂರ್ವ ಧ್ಯಕ್ಷರಾದ ಜೆಸಿ ಚಿತ್ರ ಕುಮಾರ್,ಜೆಸಿ ಮಿತ್ರ ಕುಮಾರ್,ಜೆಸಿ ಆಶಾ ಅಲನ್, ಹಾಗೂ ಸದಸ್ಯರಾದ ಜೆಸಿ ಸದಾನಂದ ಸುವರ್ಣ ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!