ಕರ್ತವ್ಯ ಮೀರಿದ ಸೇವೆ-ಶಿಕ್ಷಕರಿಗೆ ವಿಠ್ಠಲ  ಬೇಲಾಡೀ ಕರೆ

ಶಿಕ್ಷಕರು ಗಡಿಯಾರ ನೋಡಿಕೊಂಡು ಕೆಲಸ ಮಾಡಿದರೆ ಅದು ಕರ್ತವ್ಯ ಆಗುತ್ತದೆ. ಯಾವಾಗ ತನ್ನ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಕೆಲಸ ಮಾಡುತ್ತಾರೆ ಅದು ಸೇವೆ ಆಗುತ್ತದೆ.  ಅಂತಹ ಶಿಕ್ಷಕರ ಸಂಖ್ಯೆ ಹೆಚ್ಚಾಗಬೇಕು ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾದ ವಿಠ್ಠಲ ಬೇಲಾಡೀ ಅವರು ಅಭಿಪ್ರಾಯ ಪಟ್ಟರು.

ಕಾರ್ಕಳದ ರೋಟರಿ ಆನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆಯ ಪೂರ್ವ ಭಾವಿಯಾಗಿ ಹಮ್ಮಿಕೊಂಡ ಗುರುವಂದನೆ ಕಾರ್ಯಕ್ರಮದಲ್ಲಿ ಮೂವರು ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾದ ವಿಠ್ಠಲ ಬೇಲಾಡಿ, ಜಾರ್ಜ್ ಕ್ಯಾಸ್ಥಲೀನೋ, ಕೆ. ಲಕ್ಷ್ಮೀಕಾಂತ್ ಭಟ್ ಅವರನ್ನು ಸನ್ಮಾನಿಸಲಾಯಿತು. ಹಿರಿಯ ರೋಟರಿಯನ್ ಸ್ವರ್ಣ ತುಕಾರಾಂ ನಾಯಕ್ ಶಿಕ್ಷಕರನ್ನು ಸನ್ಮಾನಿಸಿದರು.

ಕಾರ್ಕಳ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ  ಅಭಿನಂದನಾ ಭಾಷಣ ಮಾಡಿದರು. ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ರಮಿತಾ ಶೈಲೇಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ರಾಜೇಂದ್ರ ಭಟ್ ಕೆ.  ನಿರೂಪಿಸಿದರು. ಆನ್ಸ್ ಕಾರ್ಯದರ್ಶಿ ಸುಮಾ ನಾಯಕ್  ಧನ್ಯವಾದವಿತ್ತರು.   ಇಕ್ಬಾಲ್ ಅಹಮದ್ , ಸೈಲೆಂದ್ರ ರಾವ್ ಅವರು ಉಪಸ್ಥಿತರಿದ್ದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply