​ಬದುಕಿಗೆ ಆಸರೆಯಾದ ಮರಗಳಿಲ್ಲ

ಬದುಕಿಗೆ ಆಸರೆಯಾದ ಮರ ಧರೆಗುರುಳಿತು, ನೋಡಿದ ಮನ ಮರುಗಿ, ಕೊರಗಿತು.  ​
‘ಕಾಡು ಬೆಳಸಿ, ನಾಡು ಉಳಿಸಿ’, ‘ಗಿಡನೆಟ್ಟು-​ ​ಬರ ಅಟ್ಟು’, ಈ ತರದ ಸ್ಲೋಗನ್ ಗಳು ಹೇಳೋಕೆ ಮತ್ತು ಬರೆಯೋಕೆ ಮಾತ್ರ ಚೆನ್ನ, ಆದರೆ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಕೆ ನಾನಾಗಲಿ, ನೀವಾಗಲಿ ಯಾರಿಂದಲೂ ಅಸಾಧ್ಯ ಇದು ಕಟು ಸತ್ಯ. ನಾನೇಕೆ ಈ ತರ ಹೇಳಿದೆ ಎಂದಲ್ಲಿ ಇತ್ತೀಚಿನ ದಿನಗಳಲ್ಲಿ ಕಡಿದು ಹಾಕಿದ ಮರಗಳೆಷ್ಟೋ ಕಾರಣ​. ​ ಒಂದೇ ಅವು ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದೆ ಅಥವಾ ಬಿಲ್ಡಿಂಗ್ ನ ಮೇಲೆ ಬೀಳೋತರವಿದ್ದು ಅಪಾಯಕಾರಿ ಯಾಗಿವೆ, ಅಥವಾ ಮನೆಯ ಮೇಲೂ ಬೀಳಬಹುದು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸಿ ಮರಕ್ಕೆ ತುಂಬಾ ಪ್ರಾಯವಾಯ್ತು ಎಂದು ಅದರ ಬೇರು ಸಮೇತ ಕಿತ್ತು ನೆಲಸಮ ಮಾಡೋ ಮನಸ್ಸು ನಮ್ಮದಾಗಿದೆ.

ಹೌದು ಒಂದು ಮರ ಎಷ್ಟೋ ಸಹಾಯ ಮಾಡುತ್ತದೆ,​ ​ ‘ಮರ ಕಡಿಯಲು ಹೋದ ಮನುಜ, ನೆರಳಿಗಾಗಿ ಮರವನ್ನಾಶ್ರಯಿಸಿದ’ ಅದಂತೂ ಸತ್ಯ, ಹೀಗೆ ಫಲ ಬರೋ ಮರಗಳಾದ್ರೆ ನೆರಳಿನ ಜೊತೆ ಹಣ್ಣನ್ನೂ ಕೊಡುತ್ತವೆ, ಆದರೆ ಕೆಲವೊಂದು ಮರಗಳಾದ ‘ಮೇ ಫ್ಲವರ್ ಟ್ರೀ’ ಇವು ಕೇವಲ ನೆರಳಿನಾಶ್ರಯದ ಜೊತೆಗೆ ಉತ್ತಮ ಅಲಂಕಾರಿಕ ಹೂವಿನಿಂದ ಕಂಗೊಳಿಸುತ್ತವೆ,​. ​ಈ ತರದ ಮರಗಳು ರಸ್ತೆ ಬದಿಯಲ್ಲಿ ಇದ್ದರೆ ಅದರ ಮೇಲೆ ಒಂದಷ್ಟು ಪಕ್ಷಿಗಳು ಹಾಗೂ ಇನ್ನಿತರೇ ಪ್ರಭೇದಗಳು ಗೂಡುಕಟ್ಟಿಕೊಂಡು ಆಶ್ರ​ಯುಸತ್ತವೆ.

ಅದರ ಕೆಳಗೆ ಇದೇ ಮನುಜ ಹಣ್ಣಿನ ವ್ಯಾಪಾರ, ಸಣ್ಣಸಣ್ಣ ಗಾಡಿಗಳಲ್ಲಿ ಹೂವು, ತರಕಾರಿ ವ್ಯಾಪಾರ, ಅಗತ್ಯ ಉಡುಪುಗಳ ವ್ಯಾಪಾರ, ಎಲ್.ಇ.ಡಿ ಬಲ್ಬ್ ವ್ಯಾಪಾರ, ಯ್ಯೂಸ್ ಆ್ಯಂಡ್ ಥ್ರೋ ವಸ್ತುಗಳ ವ್ಯಾಪಾರ, ಚಾಟ್ ಮಸಾಲೆಗಳಾದ ಪಾನೀಪೂರಿ, ಗೋಬಿ ಇಂತಹವುಗಳ ವ್ಯಾಪಾರ, ಬೈಕ್ ಸೀಟ್ ಕವರ್, ವ್ಯಾಪಾರ ಹೀಗೆ ಸೀಜ್ಹನಲ್ ಬ್ಯುಸಿನೆಸ್ ಮಾಡುತ್ತ ಜೀವನ ಸಾಗಿಸುತ್ತಿರುತ್ತಾರೆ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಜನ ಮರದ ಪ್ರಯೋಜನ ಬರೀ ಬಾಯಲ್ಲಿ ಅದೂ ವನಮಹೋತ್ಸವದ ದಿನ ಭಾಷಣ ಬಿಡೋದು ಬಿಟ್ರೆ​.  ಅದನ್ನು ಕಾರ್ಯಗತ ಗೊಳಿಸಲು ಫಣ ತೊಡುವವರು ಬೆರಳೆಣಿಕೆಯಷ್ಟು, ಕಾರಣ ಆ ಮರ ಬಿದ್ರೆ ಏನು ಮಾಡೋದು ಎಂದು ದೂ(ದು)ರಾಲೋಚನೆ ಮಾಡಿ ಅದಕ್ಕೆ ಗರಗಸ ಹಾಕೋರೆ ಜಾಸ್ತಿ.
 ನನ್ನ ಅರಿವಿಗೆ ಬಂದ ​ಉಡುಪಿ ​ಚಿತ್ತರಂಜನ್ ಸರ್ಕಲ್ ಬಳಿ ಇರೋ ಕೆ.ಪಿ.ಟಿ.ಸಿ.ಎಲ್ ಕಛೇರಿ ಬಳಿ​ ​ಇದ್ದ ಬೃಹದಾಕಾರದ ಮರ. ನಾನು ಅಲ್ಲಿಯೇ ಒಬ್ಬರ ಹತ್ರ ವಿಚಾರಿಸಿದೆ, ಏನು ಮರ ಈ ತರ ಬ್ರೆಡ್ ಪೀಸ್ ಮಾಡಿದ ಹಾಗೆ ತುಂಡರಿಸಿದ್ದಾರೆ, ಏನಾಯ್ತು ಗಾಳಿಮಳೆಗೆ ಬಿತ್ತಾ  ಎಂದೆ​. ಅಯ್ಯೋ ಇಲ್ಲಾರಿ ಮುಂದೆ ಅದು​ ಬಿದ್ದು ಅಕ್ಕಪಕ್ಕದ ಬಿಲ್ಡಿಂಗ್ ಗೆ ಹಾನಿಯಾಗಬಹುದು ಎಂದು ​ತೆಗೆಸಿದ್ರು ಅಂದ .ನನ್ನ ಮನ ಮರುಗಿತು, ಕಾರಣವಿಷ್ಟೆ ಅದು ನಾ ಮೇಲೆ ತಿಳಿಸಿದ ಅಷ್ಟೂ ಸಣ್ಣಪುಟ್ಟ ವ್ಯಾಪಾರಿಗಳಿಗೆ ಆಶ್ರಯ ನೀಡಿತ್ತು.​ ಆದೇ ತರಹ ಕಳೆದ ವರ್ಷ ಮಣಿಪಾಲದ ಬೃಹತ್ ಮರ ರಸ್ತೆ ಅಗಲೀಕರಣಕ್ಕೆ ಧರೆಶಾಹಿಯಾದಾಗ ಎಷ್ಟೋ ಹಕ್ಕಿ, ಹಕ್ಕಿ ಮರಿಗಳ ಪ್ರಾಣ ತೆತ್ತಿದ್ದವು.

ಬದಲಾವಣೆಯೇ ಜಗದ ನಿಮಯ ನಾವು ಒಪ್ಪಲೇ ಬೇಕು​. ​​ಇನ್ನಾದರೂ ಈ ತರದ ಊಹೆಗಳಿಂದ ಮರಗಳ ಆಯುಷ್ಯ ತೀರಿಸಿದ್ದಲ್ಲಿ ಕೊನೆಗೆ ಅದೇ ಜಾಗದಲ್ಲಿ ಒಂದು ಸಸಿ ನೆಟ್ಟಾದರೂ ಪ್ರಾಯಶ್ಚಿತ್ತ ಮಾಡಿ ಕೊಂಡಲ್ಲಿ​​ ಸ್ವಲ್ಪವಾದರೂ ಸಮಾಧಾನ​. ​ಇದಕ್ಕೆ ಉದಾಹರಣೆ ಉದ್ಯಾವರದ ಕಾಮತ್ ಹೋಟೆಲ್ ನ ಅಶ್ವಥದ ಮರ ಕಳೆದ ವರ್ಷ ಧರೆಗೆ ಉರುಳಿತ್ತು, ಆ ನಂತರ ಅದಕ್ಕೆ ವೈದಿಕ ವಿಧಾನಗಳನ್ನು ಮಾಡಿ, ಪುನಃ ಹೊಸ ಸಸಿ ಅದೇ ಜಾಗದಲ್ಲಿ ನೆಟ್ಟಿದ್ದು ಇಲ್ಲಿ ಜ್ವಲಂತ ಸಾಕ್ಷಿ.

 
 
 
 
 
 
 
 
 
 
 

Leave a Reply