ಗಡಿ ಮೀರಿದ ಭಾರತೀಯತೆಯ ಪ್ರತಿರೂಪ

ವಿದೇಶಿಯರು ಭಾರತೀಯ ಸಂಸ್ಕೃತಿಗೆ ಮಾರು ಹೋಗಿ ಭಾರತಕ್ಕೆ ಆಗಮಿಸಿ ಇಲ್ಲಿನ ಆಚಾರ ವಿಚಾರ ಅಧ್ಯಯನ ಮಾಡುತ್ತಾರೆ. ಆದರೆ ಭಾರತೀಯರು ವಿದೇಶದಲ್ಲಿ ವಿಶೇಷತೆ ಎಂದು ಬೇರೆ ದೇಶದಲ್ಲಿ ಹೋಗುವುದು ಸಾಮಾನ್ಯವಾಗಿದೆ.

ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಬರುವ ವಿದೇಶಿಯರ ಸಂಖ್ಯೆ ಹೆಚ್ಚು. ಇಂತಹ ಒಂದು ಅಪರೂಪದ ಸನ್ನಿವೇಶಕ್ಕೆ ಉದಾಹರಣೆ ಎಂಬಂತೆ ಲಾಕ್ ಡೌನ್ ನಿಂದ ಹಲವಾರು ಜನರಿಗೆ ಹಲವು ಸಮಸ್ಯೆಗಳಿಗೆ ದಾರಿಮಾಡಿದೆ. ಇನ್ನು ಕೆಲವರಿಗೆ ಹೊಸ ರೀತಿಯ ಅನುಭವ ನೀಡಿದೆ ಎಂದರೆ ತಪ್ಪಾಗ ಲಾರದು. ದೂರದ ಸ್ಪೇನ್ ದೇಶದಿಂದ ದಕ್ಷಿಣ ಭಾರತ ಪ್ರವಾಸಕ್ಕೆ ಬಂದು ಲಾಕ್‍ಡೌನ್ ಕಾರಣದಿಂದ ಅವರ ದೇಶದ ಮರಳಿ ಹಿಂದಿರುಗಲಾಗದೆ ಬೈಂದೂರು ತಾಲೂಕಿನ ಸಮೀಪದ ಹೇರಂಜಾಲಿನಲ್ಲಿ ವಿದೇಶಿ ಮಹಿಳೆ ಕಳೆದ ನಾಲ್ಕು ತಿಂಗಳಿಂದ ಉಳಿದುಬಿಟ್ಟಿದ್ದಾರೆ.

ಸ್ಥಳೀಯರಾದ ಕೃಷ್ಣ ಪೂಜಾರಿ ಅವರ ಮನೆಯಲ್ಲಿ ತಂಗಿರುವ ತೆರೆಸಾ ರವರು ಗ್ರಾಮೀಣ ಹಿನ್ನಲೆಯ ಬದುಕಿ ನೊಂದಿಗೆ ಸ್ಥಳೀಯ ಜನ ರೊಂದಿಗೆ ಬೆರೆತು ಹೋಗಿ ಭಾರತೀಯ ಸಂಸ್ಕೃತಿ ಭಾಷೆ ಜನಜೀವನದೊಂದಿಗೆ ಒಂದಾಗಿದ್ದಾರೆ.ತನ್ನ ಕ್ರಿಯಾಶೀಲ ವ್ಯಕ್ತಿತ್ವದಿಂದ ಇವರು ಮನೆಮಂದಿಯ ಜೊತೆಗೆ ಮನೆಯ ಕೃಷಿ ಮತ್ತು ಕೃಷಿ ಸಂಬಂಧಿತ ಸ್ವ ಉದ್ಯೋಗದ ಕಾಯಕದಲ್ಲಿ ಭಾಗಿಯಾಗುತ್ತಾರೆ. ಹಟ್ಟಿ ಗೊಬ್ಬರ ಹೊತ್ತು ಗದ್ದೆ, ತೋಟಕ್ಕೆ ಹಾಕುದಲ್ಲದೆ ಹೈನುಗಾರಿಕೆ ಕೋಳಿ ಸಾಕಾಣಿಯ ಚಟುವಟಿಕೆಯಲ್ಲಿ ಸಂಪೂಣ೯ ತೊಡಗಿಕೊಂಡಿದ್ದಾರೆ. ಕೃಷ್ಣ ಪೂಜಾರಿ ಅವರ ತಾಯಿ ಚಿಕ್ಕಮ್ಮ ಅವರಿಂದ ಮನೆಯ ಮುಂದೆ ವಿವಿಧ ರೀತಿಯ ರಂಗೋಲಿ ಹಾಕಲು, ದನದ ಹಾಲು ಕರೆಯಲು, ಮಡಲು (ತೆಂಗಿನ ಗರಿ) ನೇಯಲು ಕಲಿತು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಸ್ಥಳೀಯ ಜನರು ಮಾತನಾಡುವ ಕುಂದಾಪ್ರ ಕನ್ನಡದ ಹಲವು ಪದಗಳನ್ನು ಮಾತನಾಡಲು, ಮಕ್ಕಳಿಂದ ಕನ್ನಡದ ವಿವಿಧ ಅಕ್ಷರಗಳನ್ನು ಬರೆಯಲು ಪ್ರಯತ್ನಪಡುತ್ತಿದ್ದಾರೆ. ಅವರ ಮಾತಿನಂತೆ ಪೂಜಾರಿಯವರ ಮನೆಯಲ್ಲಿ ಮಾಡುವ ತಿಂಡಿಗಳಾದ ಕಡುಬು, ಇಡ್ಲಿ, ದೋಸೆ, ಚಿಕ್ಕನ್ ಸುಕ್ಕ, ಮೀನುಸಾರು, ತರಕಾರಿ ಸಾಂಬಾರು ನನಗೆ ಇಷ್ಟವಾಗಿ ಬಿಟ್ಟಿದೆ ಇಲ್ಲಿಂದ ಮರಳಿ ತನ್ನ ದೇಶಕ್ಕೆ ತೆರಳಲು ಮನಸ್ಸಾಗುತಿಲ್ಲ. ಮನೆಮಂದಿಗೆಲ್ಲಾ ಇವರು ವಿದೇಶಿ ಮಹಿಳೆ ಯಲ್ಲ ಎಂಬಂತೆ ಅವರು ಬರೆತ್ತಿದ್ದಾರೆ.ಪಾತ್ರೆ ತೊಳೆಯುವುದು ಮನೆ ಕೆಲಸದೊಂದಿಗೆ ಕೃಷಿ ಕಾಯ೯ ದೊಂದಿಗೆ ನಿರಂತರ ಚಟುವಟಿಕೆಯಲ್ಲಿರುವ ತೇರೆಸಾ ತನ್ನ ದೇಶದಲ್ಲಿ ಕೂಡ ಭಾರತೀಯ ಜನ ಜೀವನದ ಬಗ್ಗೆ ಬೇರೆ ಯವರಿಗೆ ತಿಳಿಸಿಕೊಡುವ ಕಾಯ೯ ಮಾಡುದಾಗಿ ಹೇಳುತ್ತಾರೆ.

ಮುಂಬಯಿಯಲ್ಲಿ ಅಮೆರಿಕದ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಕೃಷ್ಣ ಪೂಜಾರಿ ಜತೆಗೆ ತೆರೆಸಾ ಅಣ್ಣನೂ ದುಡಿಯುತ್ತಿದ್ದಾರೆ. ಹೀಗೆ ಕಳೆದ ಎಂಟು ವರ್ಷಗಳಿಂದ ತೆರೆಸಾ ಪರಿಚಯ.ನಮ್ಮದು ದೇಶದ ಗಡಿಗಳನ್ನು ಮೀರಿದ ಮಾನವೀಯ ಸಂಬಂಧ. ಸ್ವದೇಶಕ್ಕೆ ಮರಳಲಾಗದೆ ತೊಂದರೆಗೆ ಸಿಲುಕಿ ಅವರು ಆ ಕಾರಣದಿಂದ ನಮ್ಮಲ್ಲಿಗೆ ಬಂದಿದ್ದಾರೆ. ಅಲ್ಪಸ್ವಲ್ಪ ಕನ್ನಡ ಕಲಿತಿದ್ದರಿಂದ, ನಮ್ಮ ಎಲ್ಲ ಚಟುವಟಿಕೆಗಳಲ್ಲಿ ಸಂತಸದಿಂದ ಭಾಗಿ ಯಾಗುತ್ತಿರುವುದರಿಂದ ಅವರು ನಾಲ್ಕು ತಿಂಗಳಿನಿಂದ ನಮ್ಮೂರ, ನಮ್ಮ ಮನೆಯ ಹುಡುಗಿ ಆಗಿದ್ದಾರೆ. ಸದ್ಯ ಕೊರೋನಾದ ಕಾರಣದಿಂದ ಅವರು ಮನೆಯಲ್ಲೇ ಇರುತ್ತಾರೆ ಎಂದು ಕೃಷ್ಣ ಪೂಜಾರಿ ಹೇಳುತ್ತಾರೆ.

ಭಾರತೀಯತೆಯ ಪ್ರತಿರೂಪ :
ತೆರೆಸಾರವರು ಕೇವಲ 4 ತಿಂಗಳ ಅವಧಿಯಲ್ಲಿ ಗ್ರಾಮೀಣ ಜನ ಜೀವನದ ಬಗ್ಗೆ ಬಹಳಷ್ಟು ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಅವರ ಪ್ರಕಾರ ಈ ರೀತಿಯ ವಿನೂತನವಾದ ಸಂಸ್ಕೃತಿ ಕಲೆ ಸಾಹಿತ್ಯ ಮತ್ತೊoದಿಲ್ಲ.    ಐ ಲವ್ ಇಂಡಿಯಾ ಎಂದು ಚಂದದ ನಗುವಿನೊಂದಿಗೆ ಹೇಳುವ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ.
ತೆರೆಸಾ ಭಾರತೀಯತೆಯನ್ನು ಮೈಗೂಡಿಸಿದ ರೀತಿ ನಿಜಕ್ಕೂ ಅಭಿನಂದನೀಯ.

Leave a Reply