ರಾಮೋ ವಿಗ್ರಹವಾನ್ ಧರ್ಮ:

ಆಗಸ್ಟ್ 5,2020ರ ಮಧ್ಯಾಹ್ನ 12:15ಕ್ಕೆ ಸಲ್ಲುವ ಅಭಿಜಿನ್ ಮುಹೂರ್ತದಲ್ಲಿ ನಮ್ಮ ದೇಶದ ಪ್ರಧಾನಿ ನರೇಂದ್ರಮೋದಿ ಯವರು ಬೆಳ್ಳಿಯ ಇಟ್ಟಿಗೆಯನ್ನು ಸ್ಥಾಪಿಸುವ ಮೂಲಕ ಶ್ರೀ ರಾಮಮಂದಿರದ ಪುನರ್ನಿರ್ಮಾಣಕ್ಕೆ ನಾಂದಿ ಹಾಡಲಿದ್ದಾರೆ.ಈ ಶುಭ ಸಮಯದಲ್ಲಿ ರಾಮ ಜನ್ಮಭೂಮಿಗಾಗಿ ನಡೆದ ಹೋರಾ ಟಗಳ ಕಿರುಪರಿಚಯ ಮಾಡುವ.
ಮೊಘಲ್ ಆಕ್ರಮಣ ಕಾರ ಬಾಬರನ ಸೇನಾಪತಿ ಮೀರ್ ಬಾಕೆ  ರಾಮಜನ್ಮ ಸ್ಥಾನದಲ್ಲಿದ್ದ ಮಂದಿರವನ್ನು ನಾಶಮಾಡಿ ಅದರ ಸಾಮಗ್ರಿಗಳನ್ನು ಉಪಯೋಗಿಸಿ ಕಟ್ಟಿದ ಕಟ್ಟಡವೆ  ಬಾಬ್ರಿ ಮಸೀದಿ. ಹಿಂದೂ ಜನ ಮಾನಸದ ಮೇಲೆ ನಿರಂತರವಾಗಿ ಸಮಾಜದ ಸೋಲನ್ನು ನೆನಪಿಸುತ್ತಿದ್ದ ಒಂದು ಸ್ಮಾರಕ. ರಾಮ ಜನ್ಮಸ್ಥಾನದಲ್ಲಿ ಮಂದಿರದ ಪುನರ್ ನಿರ್ಮಾಣಕ್ಕಾಗಿ ಹಲವಾರು ಬಾರಿ ಹೋರಾಟ ನಡೆಯಿತು.  ಎಂದಿನಂತೆ ನಮ್ಮ ಸಮಾಜದ ಶಾಪವಾದ ಅನೈಕ್ಯತೆ ಹೋರಾಟಗಳು ವಿಫಲವಾಗಲು ಕಾರಣವಾದವು. ಆದರೆ ಈ ಹೋರಾಟ ಸ್ವಾತಂತ್ರ್ಯ ಬಂದ ನಂತರ ಮತ್ತೆ ಚುರುಕು ಗೊಂಡಿತು. ಹಿಂದಿನ ಎಲ್ಲ ಹೋರಾಟಗಳು ಸುಸಂಘಟಿತ ವಾಗಿ ರಲಿಲ್ಲ. ಆದರೆ ಆರ್ ಎಸ್ ಎಸ್, ವಿಶ್ವ ಹಿಂದೂ ಪರಿಷತ್ ಮೂಲಕ ಈ ಚಳುವಳಿಯನ್ನು ದೇಶವ್ಯಾಪಿ ಆಂದೋಲನವನ್ನಾಗಿ ಪರಿವರ್ತಿಸಿತು. ನಂತರ ಬಿ ಜೆ ಪಿ ಈ ಆಂದೋಲನವನ್ನು ಶ್ರೀ ಲಾಲ್ ಕೃಷ್ಣ ಆಡ್ವಾಣಿಯವರ ರಾಮ ರಥ ಯಾತ್ರೆಯ ಮೂಲಕ ದೇಶದ ಮೂಲೆ ಮೂಲೆಗೆ ತಲುಪಿಸುವಲ್ಲಿ ಯಶಸ್ವಿಯಾಯಿತು.  ಜನಮಾನಸದ ಒಲವುಗಳಿಸಲು ರಾಜೀವ್ ಗಾಂಧಿಯವರು ಬೀಗ ಬಿದ್ದಿದ್ದ ರಾಮ ಲಲ್ಲಾನ ಮೂರ್ತಿಗೆ ಪೂಜೆಗೆ ಅವಕಾಶ ಮಾಡಿಕೊಟ್ಟರು. ಹಲವು ಬಾರಿ ಕರಸೇವಕರು ಅನೈತಿಕವಾಗಿ ನಿರ್ಮಿಸಿದ್ದ ಕಟ್ಟಡ ತೆರವು ಗೊಳಿಸಲು ಪ್ರಯತ್ನಿಸಿ ದರು.ಅಂತಿಮವಾಗಿ ಡಿಸೆಂಬರ್ 6,1992 ರತಂದು ವಿವಾದಿತ ಕಟ್ಟಡವನ್ನು ಕೆಡವ ಲಾಯಿತು.
ಅದು ಒಂದು ಅಪೂರ್ವ ಕ್ಷಣ.ಹಿಂದೂ ಸಮಾಜದ ಒಂದು ಕಳಂಕವನ್ನು ತೊಡೆದು ಹಾಕಿದ ಸಮಯ. ನಂತರದ ದಿನಗಳಲ್ಲಿ ನ್ಯಾಯಾಲಯಗಳಲ್ಲಿ ನಡೆದ ವ್ಯಾಜ್ಯಗಳಿಗೆ  ಹಿಂದೂ ಸಮಾಜದ ಪರವಾಗಿ ಅಕ್ಟೋಬರ್ 16,2010ರಲ್ಲಿ ಅಲಹಾಬಾದ್ ಹೈ ಕೋರ್ಟ್ ತೀರ್ಪು ನೀಡಿತು. ಆದರೆ ದೇವಸ್ಥಾನದ ಜಾಗವನ್ನು ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗೂ ರಾಮ್ ಲಲ್ಲಾ ಅವರಿಗೆ ವಿಭಜಿಸುವ ಮೂಲಕ ಕಟ್ಟಳೆ ಸುಪ್ರೀಂ ಕೋರ್ಟಿನ ಅಂಗಳ ತಲುಪಿತು. ನ್ಯಾಯಮೂರ್ತಿ ಶ್ರೀ ರಂಜನ್ ಗೋಗೋಯಿ ನೇತೃತ್ವದ ಪೀಠ ತಾ 9/11/2019ರಂದು ಅಂತಿಮವಾಗಿ, ಎಲ್ಲ ಅಂಕಿ ಅಂಶಗಳು, ದಾಖಲೆಗಳನ್ನು ಗಮನಿಸಿ ರಾಮ ಜನ್ಮ ಭೂಮಿ ಪ್ರದೇಶವನ್ನು ನಿರ್ಮೋಹಿ ಅಖಾರಕ್ಕೆ ಶರತ್ತು ಸಹಿತ ಬಿಡುಗಡೆ ಮಾಡಿತು.
ಆ ತೀರ್ಪಿನಂತೆ ಕೇಂದ್ರ ಸರ್ಕಾರ ಭವ್ಯ ರಾಮ ಮಂದಿರ ನಿರ್ಮಾಣಕ್ಕಾಗಿ “ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್” ಸ್ಥಾಪಿಸಿತು. ಆ ಟ್ರಸ್ಟಿನಲ್ಲಿ ನಮ್ಮ ಕೀರ್ತಿಶೇಷ ಪೇಜಾವರ ಶ್ರೀಗಳು ಒಬ್ಬ ಸದಸ್ಯರಾಗಿದ್ದರು ಎಂಬುದು ಹೆಮ್ಮೆಯ ವಿಷಯ. ಅಂತಿಮವಾಗಿ ಮಂದಿರದ ನಿರ್ಮಾಣದ ಅಡಿಗಲ್ಲು ಹಾಕುವ ಶುಭ ಮುಹೂರ್ತ ಸನ್ನಿಹಿತವಾಗಿದೆ. ಎಲ್ಲರೂ ಸಂಭ್ರಮ ಪಡುವ ವಿಚಾರ. ಇದು ಜೀವಮಾನದಲ್ಲಿ ಸಿಕ್ಕುವ ಅಪರೂಪದ ಅವಕಾಶ…. ಜೈ ಶ್ರೀರಾಮ್.
ಬೆನಗಲ್ ನಾರಾಯಣ ಮೂರ್ತಿ, ಉಡುಪಿ 
 
 
 
 
 
 
 
 
 
 
 

Leave a Reply