ಕುಮಾರಿ ಕೃತಿ ಆರ್ ಸನಿಲ್ ಗೆ ಅರಳು ಮಲ್ಲಿಗೆ ಪ್ರಶಸ್ತಿ

ಜ್ಞಾನ ಮಂದಾರ ಅಕಾಡೆಮಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯ ವಿಜ್ಞಾನ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕುಮಾರಿ ಕೃತಿ ಆರ್ ಸನಿಲ್ ಇವರ ನೃತ್ಯ ಕ್ಷೇತ್ರದಲ್ಲಿಯ ಸಾಧನೆಯನ್ನು ಗುರುತಿಸಿ ಅರಳು ಮಲ್ಲಿಗೆ ಎಂಬ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತಾರೆ. ಜೊತೆಗೆ ಬೆಳ್ಳಿಯ ಖಡಗ ನೀಡಿರುವುದು ಈ ಪ್ರಶಸ್ತಿಯ ವಿಶೇಷತೆಯಾಗಿದೆ.ರೂಪೇಶ್ ಮತ್ತು ರೋಹಿಣಿ ರೂಪೇಶ್ ಪುತ್ರಿಯಾದ ಇವರು ಟಿ ಎ ಪೈ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿಯಾಗಿರುತ್ತಾರೆ.ವಿ ರಾಕ್ಸ್ ಡ್ಯಾನ್ಸ್ ಕಂಪನಿ ಉಡುಪಿ ವಸಂತ್ ರವರ ಶಿಷ್ಯೆಯಾಗಿರುತ್ತಾರೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply