ಗ್ರಾಮೀಣ ಪ್ರದೇಶದ ಮಹಿಳೆಯರ ಆರೋಗ್ಯದ ಆಶಾಕಿರಣ108 ಆಂಬುಲೆನ್ಸ್ ಕಾರ್ಕಳ!

ದಿನಾಂಕ 18 11 2022 ರಂದು ರಾತ್ರಿ 11.02 ಸುಮಾರಿಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಕಲ್ಯ ವಾಸಿ ಶ್ರೀಮತಿ ನೀಲಮ್ಮ ಇವರು ಹೆರಿಗೆ ನೋವಿನಿಂದ ಬಳಲುತ್ತಿದ್ದ ಕಾರ್ಕಳ 108 ಆಂಬುಲೆನ್ಸ್ ನಲ್ಲಿ ಕಲ್ಯಾ ಯಿಂದ ಕಾರ್ಕಳ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯ ಕಾರ್ಕಳ ಕಲ್ಯ ಮಧ್ಯೆ ಹೆಣ್ಣು ಮಗುವಿಗೆ ಆಂಬುಲೆನ್ಸ್ ನಲ್ಲಿ ರಾತ್ರಿ 11.02 ಗೆ ಜನ್ಮ ನೀಡಿದ್ದಾರೆ.

ಆಂಬುಲೆನ್ಸ್ ನಲ್ಲಿ ಸಿಬ್ಬಂದಿ ಇಎಮ್‌ಟಿ ರಾಜಶೇಖರ್ ಎಸ್ ಕೆ ಪೈಲೆಟ್ ಪುಂಡಲೀಕ್ ಇವರು ಸುರಕ್ಷಿತವಾಗಿ ಹೆರಿಗೆ ಮಾಡಿಸಿ ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ ತಾಯಿ ಮತ್ತು ಮಗು ಇಬ್ಬರೂ ಸಹ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Leave a Reply