ಕುಂಜೂರು ದೇಗುಲಕ್ಕೆ ತುಳು ಲಿಪಿಯ ನಾಮಫಲಕ

ಪಡುಬಿದ್ರಿ: ಅಳವಡಿಸುವ ಮೂಲಕ ತುಳು ಬರೆಕ ಅಭಿಯಾನಕ್ಕೆ ಚಾಲನೆ.

ತುಳುನಾಡಿನ ಮೂಲ ಸಂಸ್ಕೃತಿಯ ಕುರಿತು, ತುಳು ಭಾಷೆಯ ಬಗ್ಗೆ ಅರಿತುಕೊಳ್ಳುವ ಉದ್ದೇಶದಿಂದ ‘ತುಳು ಲಿಪಿ’ಯನ್ನು ಕಲಿಯುವುದು ಅವಶ್ಯ. ಹಾಗಾಗಿ ಜನರಿಗೆ ತುಳು ಲಿಪಿ ಕಲಿಸಬೇಕು, ಅದರಲ್ಲೆ ಬರೆಯಲಾದ ಸಾಹಿತ್ಯವನ್ನು ಓದುವಂತೆ ಮಾಡ ಬೇಕು ಎಂಬ ಧ್ಯೇಯದಿಂದ ತುಳುವಾಸ್ ಕೌನ್ಸಿಲ್ ಆಯೋಜಿಸಿರುವ ತುಳು ಬರೆಕ ಅಭಿಯಾನಕ್ಕೆ ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು. ಅದು ವಿಶೇಷವಾಗಿ ದೇವಸ್ಥಾನದ ನಾಮ ಫಲಕವನ್ನು ತುಳು ಲಿಪಿಯಲ್ಲಿ ಬರೆಯಿಸಿ ಸೋಮವಾರ ರಾತ್ರಿ ಚಾಲನೆ ನೀಡಲಾಯಿತು.ಪವಿತ್ರಪಾಣಿ ಕೆ.ಎಲ್.ಕುಂಡಂತಾಯ ಮಾತನಾಡಿ, ಕುಂಜೂರಿನ ಯುವಕರು ಕುಂಜೂರು ದೇಗುಲದ ನಾಮಫಲಕವನ್ನು ತುಳು ಲಿಪಿಯಲ್ಲೇ ಬರೆಸಿ ತುಳು ಬರೆಕ ಅಭಿಯಾನದ ಪ್ರಥಮ ಹೆಜ್ಜೆಯನಿಟ್ಟು, ತಮ್ಮ ಮಾತೃ ಭಾಷೆಗೆ ಗೌರವ ಸಲ್ಲಿಸಿದ್ದಾರೆ. ತುಳು ವಾಸ್ ಕೌನ್ಸಿಲ್ ಸಂಘಟನೆಯ ಈ ಪ್ರಯತ್ನ ಶ್ಲಾಘನೀಯ ಮತ್ತು ತುಳುನಾಡಿನ ಜನರಿಗೆಲ್ಲಾ ಮಾದರಿಯಾಗಿದೆ ಎಂದರು.
ತುಳುವಾಸ್ ಕೌನ್ಸಿಲ್ ನಿರ್ದೇಶಕ ಅವಿನಾಶ್ ಶೆಟ್ಟಿ ಕುಂಜೂರು ಮಾತನಾಡಿ, ಈ ತುಳು ಬರೆಕ ಅಭಿಯಾನದ ಮೂಲಕ ಪ್ರತಿ ಯೊಂದು ಮನೆಗೂ ತುಳು ನಾಮ ಫಲಕಗಳನ್ನು ಅಳವಡಿಸಲು ಯೋಚಿಸಲಾಗಿದೆ ಎಂದು ಹೇಳಿದರು.

ಶ್ರೀ ದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರ ದೇವರಾಜ ರಾವ್ ನಡಿಮನೆ, ಆಡಳಿತ ಮಂಡಳಿ ಸದಸ್ಯ ಶ್ರೀವತ್ಸ ರಾವ್, ಅರ್ಚಕ ಚಕ್ರಪಾಣಿ ಉಡುಪ, ಪ್ರಬಂಧಕ ರಾಘವೇಂದ್ರ ಶೆಟ್ಟಿ, ಶ್ರೀ ದುರ್ಗಾ ಮಿತ್ರವೃಂದದ ಅಧ್ಯಕ್ಷ ಚಂದ್ರಹಾಸ ಆಚಾರ್ಯ, ವಿಶ್ವನಾಥ ಉಡುಪ, ಶ್ರೀಧರ ಮಂಜಿತ್ತಾಯ,ಸುಬ್ರಹ್ಮಣ್ಯ ಭಟ್, ರಘುಪತಿ ಉಡುಪ, ಪುಷ್ಪರಾಜ ಶೆಟ್ಟಿ, ರಾಕೇಶ್ ಕುಂಜೂರು, ಕೌಶಿಕ್ ಉಡುಪ, ಭಾರ್ಗವ ಕುಂಡಂತಾಯ ಮತ್ತಿತ್ತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply