ಡಾ.ಎಂ.ಎನ್.ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ನವೋದಯ ಹಾಗೂ ಸಹಕಾರಿ ಸಂಘಗಳ ಬ್ರಹತ್ ಹೊರೆ ಕಾಣಿಕೆ

ಪುತ್ತಿಗೆ ಪರ್ಯಾಯಕ್ಕೆ ಜನವರಿ 14 2024 ಮಕರ ಸಂಕ್ರಾಂತಿಯಂದು  ಡಾ. ಎಂ. ಎನ್. ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ನವೋದಯ ಸ್ವಸಹಾಯಸಂಘ ಹಾಗೂ ಸಹಕಾರಿ ಸಂಘಗಳ  ಹೊರೆ ಕಾಣಿಕೆ ಸಮರ್ಪಣೆ.

SCDCC ಬ್ಯಾಂಕಿನ ಅಧ್ಯಕ್ಷರಾದ  ಡಾ. ಶ್ರೀ ಎಂ ಎನ್ ರಾಜೇಂದ್ರ ಕುಮಾರ್ ರನ್ನು ಪುತ್ತಿಗೆ ಪರ್ಯಾಯ ಸ್ವಾಗತ ಸಮಿತಿ ಭೇಟಿಯಾಗಿ , ಪರ್ಯಾಯಕ್ಕೆ ಸಂಪೂರ್ಣ ಸಹಕಾರ ನೀಡಬೇಕಾಗಿ ಮನವಿಯೊಂದಿಗೆ  ಅವರಿಗೆ   ಶ್ರೀಗಳಿಂದ ಅಧಿಕೃತ  ಸಮಿತಿಯ ಮಹಾ ಪೋಷಕತ್ವ  ಪತ್ರವನ್ನು ಶ್ರೀಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯರು ಹಸ್ತಾಂತ ರಿಸಿದರು.  ಅದಕ್ಕೆ ಅವರು ಸ್ಪಂದಿಸಿದರು. 

 ದಿನಾಂಕ 14.1.24.ರ ಮಕರ ಸಂಕ್ರಾತಿಯಂದು ಮಧ್ಯಾಹ್ನ 3 ಗಂಟೆಗೆ ಉಡುಪಿಯ  ಜೋಡುಕಟ್ಟೆಯಿಂದ ತಮ್ಮ ಸಹಕಾರಿ ಸಂಘ ಹಾಗೂ ನವೋದಯ ಸ್ವ ಸಹಾಯ ಸಂಘಗಳ ಮೂಲಕ ಸುಮಾರು 5000 ಕ್ಕೂ ಮೇಲ್ಪಟ್ಟ ಸದಸ್ಯ ರನ್ನೊಳಗೊಂಡ ಬೃಹತ್ , ವಿಜೃಂಭಣೆಯ ಹೊರೆ ಕಾಣಿಕೆಯನ್ನು ಶ್ರೀ ಕೃಷ್ಣ ಮುಖ್ಯಪ್ರಾಣ ದೇವರಿಗೆ ಅರ್ಪಿಸುವು ದಲ್ಲದೆ,ಪುತ್ತಿಗೆ  ಪರ್ಯಾಯಕ್ಕೆ ಸಂಪೂರ್ಣ ಸಹಕಾರ ಕೊಡುವುದಾಗಿ ತಿಳಿಸಿದರು. 
ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ, ಶ್ರೀ ದೇವಿಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ರಂಜನ್ ಕಲ್ಕೂರ ಹಾಗೂ ಸಂಚಾಲಕರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ, ಶ್ರೀ ರಮೇಶ್ ಭಟ್ ಕೆ, ಶ್ರೀ ರವೀಂದ್ರ ಆಚಾರ್ಯ, ಶ್ರೀ ಜಿ . ವಿ. ಆಚಾರ್ಯ ರು ಉಪಸ್ಥಿತರಿದ್ದರು
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply