ಉಡುಪಿ :ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣ ಗೌಡರ ಬಣ)ಗೆ ಸಾಮೂಹಿಕ ರಾಜೀನಾಮೆ.

ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣ ಗೌಡರ ಬಣ) ಜಿಲ್ಲಾ ಅಧ್ಯಕ್ಷ ಸುಜಯ್ ಪೂಜಾರಿ ಅವರ ಏಕಪಕ್ಷೀಯ ನಿರ್ಧಾರಗಳು, ಮತ್ತು ತಾಲೂಕು ಘಟಕವನ್ನು ಯಾವುದೇ ಸಂದರ್ಭದಲ್ಲಿ ಗಣನೆಗೆ ತೆಗೆದುಕೊಳ್ಳದೆ ರಾಜ್ಯದ ಯಾವುದೇ ಮಾಹಿತಿಯನ್ನು ನಮಗೆ ತಲುಪಿಸದೆ,  ತಮಗೆ ಬೇಕಾದವರನ್ನು ಮಾತ್ರ ಜೊತೆಗೂಡಿಸಿಕೊಂಡು ನಡೆಸಿದ ಸಭೆಗಳು ಮತ್ತು ನಿರ್ಧಾರಗಳಿಂದ ಬೇಸತ್ತು ಸ್ವ ಇಚ್ಛೆಯಿಂದ ತಾಲೂಕು ಅಧ್ಯಕ್ಷ ಸ್ಥಾನಕ್ಕೂ ಮತ್ತು ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೂ ದಿನಾಂಕ 01.12.2023,  ಶುಕ್ರವಾರ ದಂದು ಸಾಮೂಹಿಕ ರಾಜೀನಾಮೆ ಸಲ್ಲಿಕೆ. 
 ಕನ್ನಡ ನಾಡು ನುಡಿ ನೆಲ ಜಲಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ಹೋರಾಟಗಾರ.  ಟಿ ಎ ನಾರಾಯಣ ಗೌಡರ ನಾಯಕತ್ವವನ್ನು ಮೆಚ್ಚಿಕೊಂಡು ಕನ್ನಡ ನಾಡು ನುಡಿಗಾಗಿ ನಾನು ಕೂಡ ದುಡಿಯಬೇಕೆಂಬ ಹಂಬಲದೊಂದಿಗೆ ಕಳೆದ ಎರಡು ವರ್ಷಗಳ ಹಿಂದೆ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆಯೊಂದಿಗೆ ಸೇರಿಕೊಂಡು ಎಲ್ಲಾ ಪ್ರತಿಭಟನೆ ಹೋರಾಟಗಳಿಗೆ ಜೊತೆಯಾಗಿದ್ದೆ.
 ನನ್ನ ಕಾರ್ಯ ವೈಖರಿಯನ್ನು ಮೆಚ್ಚಿ ಕಳೆದ ಒಂದು ವರ್ಷದ ಹಿಂದೆ ನನ್ನನ್ನು ಉಡುಪಿ ತಾಲೂಕು ಅಧ್ಯಕ್ಷನನ್ನಾಗಿ ಜಿಲ್ಲೆಯಿಂದ ಆಯ್ಕೆ ಮಾಡಿದ್ದು ರಾಜ್ಯ ಘಟಕಕ್ಕೂ ತಿಳಿದಿರುವ ವಿಷಯ.  ಈ ನನ್ನ ಅಧ್ಯಕ್ಷೀಯ ಅವಧಿಯಲ್ಲಿ ತಾಲೂಕು ಘಟಕವನ್ನು ಪ್ರಾಮಾಣಿಕವಾಗಿ ಬಲಿಷ್ಠಗೊಳಿಸಿ ಜಿಲ್ಲಾ ಘಟಕಕ್ಕೆ ಶಕ್ತಿ ತುಂಬಿದ್ದೇನೆ.  ಅಲ್ಲದೆ  ರಾಜ್ಯಾದ್ಯಂತ ನಡೆದ ಪ್ರತಿಯೊಂದು ಹೋರಾಟದಲ್ಲೂ ಉಡುಪಿ ಜಿಲ್ಲೆಯಿಂದ ನನ್ನನ್ನು ಮತ್ತು ತಂಡವನ್ನು ತೊಡಗಿಸಿಕೊಂಡು ಸೇವೆ ಸಲ್ಲಿಸಿದ್ದೇನೆ. 
ಆದರೆ ಉಡುಪಿ ಜಿಲ್ಲಾ ಅಧ್ಯಕ್ಷ ಸುಜಯ್ ಪೂಜಾರಿ ಅವರ ಏಕಪಕ್ಷೀಯ ನಿರ್ಧಾರಗಳು, ಮತ್ತು ತಾಲೂಕು ಘಟಕವನ್ನು ಯಾವುದೇ ಸಂದರ್ಭದಲ್ಲಿ ಗಣನೆಗೆ ತೆಗೆದುಕೊಳ್ಳದೆ ರಾಜ್ಯದ ಯಾವುದೇ ಮಾಹಿತಿಯನ್ನು ನಮಗೆ ತಲುಪಿಸದೆ, ಅಧಿಕಾರದ ಅಹಂ ತಮ್ಮ ತಲೆಗೆ ತುಂಬಿಸಿಕೊಂಡು ತಮಗೆ ಬೇಕಾದವರನ್ನು ಮಾತ್ರ ಜೊತೆಗೂಡಿಸಿಕೊಂಡು ನಡೆಸಿದ ಸಭೆಗಳು ಮತ್ತು ನಿರ್ಧಾರಗಳಿಂದ ಬೇಸತ್ತು ಸ್ವ ಇಚ್ಛೆಯಿಂದ ತಾಲೂಕು ಅಧ್ಯಕ್ಷ ಸ್ಥಾನಕ್ಕೂ ಮತ್ತು ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೂ ದಿನಾಂಕ 1 – 12 -23 ರಂದು ರಾಜೀನಾಮೆ ಸಲ್ಲಿಸಿದ್ದೇನೆ.
ನನ್ನೊಂದಿಗೆ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷರಾದ ಜಯ ಪೂಜಾರಿ, ಜಿಲ್ಲಾ ಉಪಾಧ್ಯಕ್ಷರಾದ ಕುಶಾಲ್ ಅಮೀನ್,  ಮಹಿಳಾ ಅಧ್ಯಕ್ಷೆ ಮಮತಾ ಪ್ರಭಾಕರ್ ನಾಯಕ್, ಜಿಲ್ಲಾ ಕಾರ್ಯದರ್ಶಿಯಾದ ಅವಿನಾಶ್ ಶೆಟ್ಟಿ, ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ರೋಶನ್ ಬಂಗೇರ, ಕಾಪು ತಾಲ್ಲೂಕು ಅಧ್ಯಕ್ಷ ಆನಂದ್ ಶೆಟ್ಟಿ ಮತ್ತು ಪುರುಷ ಘಟಕ, ಜಿಲ್ಲಾ ಸಲಹೆಗಾರರಾದ ಜಯ ಸಾಲ್ಯಾನ್, ಸೇರಿ ಹಲವಾರು ಮುಖಂಡರುಗಳು ಜಿಲ್ಲಾ ಅಧ್ಯಕ್ಷನ ವರ್ತನೆಯಿಂದ ಬೇಸತ್ತು ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದು, ಇನ್ನು ಮುಂದೆ ಯಾವುದೇ ರೀತಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡರ ಬಣ) ದ ಹೆಸರನ್ನು ಬಳಸುವುದಿಲ್ಲ ಎಂದು ಈ ಮೂಲಕ ತಮಗೆ ತಿಳಿಸುತ್ತಿದ್ದೇವೆ.
~ ಅ. ರಾ. ಪ್ರಭಾಕರ್ ರಾಜ್
ನಿಕಟ ಪೂರ್ವ ಅಧ್ಯಕ್ಷ
ಉಡುಪಿ ತಾಲೂಕು ಘಟಕ 
ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣ ಗೌಡರ ಬಣ)
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply