Janardhan Kodavoor/ Team KaravaliXpress
27.6 C
Udupi
Tuesday, December 6, 2022
Sathyanatha Stores Brahmavara

ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜರಿಗೆ ಕೊರೋನಾ ಪಾಸಿಟಿವ್

ಮಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಈ ಬಗ್ಗೆ ಸ್ವತಃ ಐವನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ‘ನನಗೆ ಮತ್ತು ನನ್ನ ಪತ್ನಿ ಡಾ. ಕವಿತಾಗೆ ಕೊರೋನಾ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದೆ. ನಮಗಿಬ್ಬರಿಗೂ ಕೊರೋನಾದ ಯಾವುದೇ ಲಕ್ಷಣ ಇರಲಿಲ್ಲ. ಆದರೂ, ನಾವು ಸ್ವಯಂಪ್ರೇರಿತರಾಗಿ ಗಂಟಲ ದ್ರವದ ಮಾದರಿಯ ಪರೀಕ್ಷೆಗೆ ಒಳಗಾಗಿದ್ದೆವು.

ಅಭಿಮಾನಿಗಳ  ಪ್ರಾರ್ಥನೆ, ಹಾರೈಕೆ ನಮ್ಮ ಶಕ್ತಿ’ ಎಂದು ಫೇಸ್‌ಬುಕ್‌ನಲ್ಲಿ ಐವನ್ ಡಿಸೋಜ ಬರೆದುಕೊಂಡಿದ್ದಾರೆ.

* ಡಿಕೆಶಿ ಜತೆಗಿದ್ದ ಐವನ್*
ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ನಗರದಲ್ಲಿ ಬಿಷಪ್ ಹೌಸ್, ಜಿಲ್ಲಾ ಕಾಂಗ್ರೆಸ್ ಕಚೇರಿ ಭೇಟಿ, ಸುದ್ದಿಗೋಷ್ಠಿ ಸಹಿತ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಈ ಎಲ್ಲ ಕಡೆ ಐವನ್ ಅವರು ಜತೆಗಿದ್ದರು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದವರಿಗೆ ಈಗ ಆತಂಕ ಶುರುವಾಗಿದೆ. ಜತೆಗಿದ್ದ ಐವನ್‌ಗೆ ಕೊರೋನಾ ಪಾಸಿಟಿವ್ ಕಂಡುಬಂದಿರುವುದರಿಂದ ಡಿಕೆಶಿ ಅವರು ಕ್ವಾರಂಟೈನ್‌ಗೆ ಒಳಗಾಗುತ್ತಾರೆಯೇ ಎಂಬ ಪ್ರಶ್ನೆಗಳೂ ಜನರಲ್ಲಿ ಮೂಡಿದೆ

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!