ಪರೋಪಕಾರಂ ಇದಂ ಶರೀರಂ-ರಾಜೇಶ್ ಭಟ್ ಪಣಿಯಾಡಿ

ತನ್ನ ಜೀವದ ಪ್ರತಿಯೊಂದು ಅಂಗವನ್ನೂ ಪರರಿಗಾಗಿ ಮೀಸಲಿಡುವ ವೃಕ್ಷ ಮಾತೆಗೆ ನಮೋ ನಮೋ

ಪರಿಸರವನ್ನು ಉಳಿಸಿ ಬೆಳೆಸೆಲೋ ಮನುಜ ಅದು ನಿನ್ನನುಳಿಸುವುದು – ನಿನ್ನ ಬೆಳೆಸುವುದು. ಪ್ರೀತಿಸಿದರೆ ಅದು ನಿನ್ನ ಮಾತಿಗೆ ಸ್ಪಂದಿಸುವುದು.ದಿವಸವೂ ನೀರು ಹೊಯ್ದು ಆರೈಕೆ ಮಾಡಿದರೆ ಆ ತರು-ಲತೆ ನಿನ್ನ ಬರವಿಗಾಗಿ ಪ್ರತಿಕ್ಷಣವೂ ಕಾಯುವುದು. ಅದು ತನಗಾಗಿ ಏನೂ ಇಟ್ಟುಕೊಳ್ಳುವುದಿಲ್ಲ.ತನಗಾಗಿ ಏನನ್ನೂ ಬಯಸುವುದಿಲ್ಲ. ತನ್ನ ಮಕ್ಕಳಿಗಾಗಿ ಏನನ್ನೂ ಕೂಡಿಡುವುದಿಲ್ಲ.ಎಲ್ಲವೂ ಪರರಿಗಾಗಿ ಹೂವೋ , ಹಣ್ಣೋ , ಸೊಪ್ಪು ತರಕಾರಿಯೋ,ಸ್ವಚ್ಛ ಗಾಳಿಯೋ,ಬೇರೋ, ಮೂಲಿಕೆಯೋ, ಕೊನೆಗೆ ಒಣ ಕಾಷ್ಟವಾಗಿಯಾದರೂ ನಿಮ್ಮ ಋಣ ತೀರಿಸಲು ಹಾತೊರೆಯುವುದು ಅದರ ಮನ. ಒಟ್ಟಾರೆ ಹಸಿರು ಉಸಿರಾದಾಗ ನಮ್ಮ ಉಸಿರು ಹಸಿರಾಗುವುದು ನಿಶ್ಚಯ. ಕೊರೊನಾ ಏನು ಯಾವ ಕಾಯಿಲೆಯೇ ಬರಲಿ ನೀಡಬಲ್ಲುದು ನಿನಗೆ ರಕ್ಷಾಕವಚ.ಪ್ರಕೃತಿಯನ್ನು ಪ್ರೀತಿಸೆಲೊ ಮನುಜ. ಒಂದಿಷ್ಟು ದಯೆ ತೋರಿಸು. ಪರಿಸರವನ್ನು ರಕ್ಷಿಸು ಅಥವಾ ಅದರಷ್ಟಕ್ಕೇ ಅದನ್ನು ಬದುಕಲು ಬಿಡು.ಪ್ಲೀಸ್

 ವಿಶ್ವ ಪರಿಸರ ದಿನಾಚರಣೆಯ ಶುಭಾಷಯಗಳು..

 

 
 
 
 
 
 
 
 
 
 
 

Leave a Reply