ನಟಿ ಜೂಹಿ ಚಾವ್ಲಾ ಸಲ್ಲಿಸಿದ್ದ 5 ಜಿ ನೆಟ್ವರ್ಕ್ ಕೇಸ್ ವಜಾ

ನವದೆಹಲಿ: 5 ಜಿ ನೆಟ್‌ವರ್ಕ್ ಮಾನವರು ಮತ್ತು ಪರಿಸರದ ಮೇಲೆ ಬೀರುವ ಪ್ರಭಾವದ ವಿರುದ್ದ ನಟಿ ಜೂಹಿ ಚಾವ್ಲಾ ಸಲ್ಲಿಸಿದ್ದ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ಅದರೊಂದಿಗೆ 20 ಲಕ್ಷ ರೂ. ದಂಡ ವಿಧಿಸಿದೆ.

ನಟಿ ಈ ಅರ್ಜಿಯನ್ನು ಬರೀ ಮಾಧ್ಯಮದಲ್ಲಿ ಪ್ರಚಾರಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಸಲ್ಲಿಸಿದ್ದಾರೆ ಎಂದು ಕೋರ್ಟ್ ಆರೋಪಿಸಿದೆ. ಶುಕ್ರವಾರ ನಡೆಸಿದ ವಿಚಾರಣೆಯಲ್ಲಿ ಈ ಅರ್ಜಿಯನ್ನು ತಿರಸ್ಕರಿಸಿರುವ ಹೈಕೋರ್ಟ್, 20 ಲಕ್ಷ ರೂ. ದಂಡ ವಿಧಿಸಿದೆ.

ಈ ಅರ್ಜಿ ಅನಗತ್ಯ ಮತ್ತು ನಿಷ್ಪ್ರಯೋಜಕವಾಗಿದೆ.ಫಿರ್ಯಾದಿದಾರರಿಗೆ ಯಾವುದೇ ಜ್ಞಾನವಿಲ್ಲ. ಫಿರ್ಯಾದಿದಾರರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಚಾರಣೆಯ ಲಿಂಕ್ ಅನ್ನು ಮೊದಲೇ ಹಂಚಿಕೊಂಡಿದ್ದಾರೆ. ಬರೀ ಮಾಧ್ಯಮ ಪ್ರಚಾರಕ್ಕಾಗಿ ಮೊಕದ್ದಮೆ ಹೂಡಿದ್ದಾರೆ ಎಂದು ಹೇಳಿದೆ.

 
 
 
 
 
 
 
 
 
 
 

Leave a Reply